ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಿಟಿಯಲ್ಲಿ ಪೊಲೀಸ್ ಇಲಾಖೆ ಕಣ್ತಪ್ಪಿಸಿಕೊಳ್ಳುವುದು ಕಷ್ಟನೇ! ಹೀಗಾಗಿ ಸಿಟಿ ಹೊರಗಡೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ ಅನ್ನೋ ಚರ್ಚೆಯಿದೆ. ಇದರ ನಡುವೆ ಚೋರಡಿ ಹತ್ರ ಇತ್ತೀಚೆಗಷ್ಟೆ ನಿರ್ಮಾಣವಾಗಿರುವ ಲಾಡ್ಜ್ನಲ್ಲಿ ನಡೆದ ಘಟನೆಯೊಂದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸರಳವಾಗಿ ಹೇಳುವುದಾದರೆ, ಚೋರಡಿಯ ಸಿಗಂದೂರೇಶ್ವರಿ ಲಾಡ್ಜ್ನಲ್ಲಿ ಅನುಮಾನಾಸ್ಪದವಾಗಿ ತಂಗಿದ್ದ ಯುವಕರನ್ನು ಪರಿಶೀಲಿಸಲು ತೆರಳಿದ್ದ ಪೊಲೀಸರಿಗೆ ಚಾಕು ತೋರಿಸಿ, ಅಲ್ಲಿದ್ದ 5 ಮಂದಿ ಕಾರಿನಲ್ಲಿ ಪರಾರಿಯಾಗಿದದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ ಗಮನಿಸುವುದಾದರೆ, ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ಪಾರ್ವತಿ ಭಾಯಿ ದಾಖಲಿಸಿರುವ ಸುಮುಟೋ ಕೇಸ್ನ ವಿವರ ಹೀಗಿದೆ. ಕಳೆದ ಸೆಪ್ಟೆಂಬರ್ 5 ರಂದು ಇಲ್ಲಿನ ಲಾಡ್ಜ್ನಲ್ಲಿ ಕೆಲ ಹುಡುಗ್ರು ಅನುಮಾನಸ್ಪದವಾಗಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸರ್ಚ್ಗೆ ಬಂದಿದ್ದಾರೆ. ತಪಾಸಣೆಗಾಗಿ ಸಂಶಯಾಸ್ಪದ ವ್ಯಕ್ತಿಗಳು ತಂಗಿದ್ದ ರೂಮ್ನ ಬಾಗಿಲು ತೆಗೆದ ಪೊಲೀಸರು, ಅಲ್ಲಿದ್ದವರ ಐಡಿ ಕೇಳಿದ್ದಾರೆ. ಈ ವೇಳೆ ಆರೋಪಿಯೊಬ್ಬ ಚಾಕುವೊಂದನ್ನ ತೆಗೆದು, ಹೆದರಿಸುತ್ತಾ ಲೈಟ್ ಆಫ್ ಮಾಡಿ ಪೊಲೀಸರನ್ನ ತಳ್ಳಿ ಎಸ್ಕೇಪ್ ಆಗಿದ್ದಾರೆ. ಲಾಡ್ಜ್ ಬಾಗಿಲಲ್ಲಿಯು ಸಹ ಪೊಲೀಸರ ಕೈಗೆ ಸಿಗದೇ ಕಾರೊಂದರಲ್ಲಿ ಎಸ್ಕೇಪ್ ಆಗಿದ್ದಾರೆ.
ಈ ಘಟನೆಯಲ್ಲಿ ಪಿಎಸ್ಐ ಪಾರ್ವತಿ ಭಾಯಿ, ಸಿಎಚ್ಸಿ ಪ್ರಕಾಶ್ ಹಾಗೂ ಡಬ್ಲ್ಯುಎಚ್ಸಿ ಆಸ್ಮಾ ರಿಗೆ ಮೈನರ್ ಆಗಿ ಏಟಾಗಿದೆ. ಇನ್ನೂ ಆರೋಪಿಗಳಿಗಾಗಿ ಪೊಲೀಸರು ಆಯನೂರು–ಶಿವಮೊಗ್ಗ ರಸ್ತೆ, ಹಣಗೆರೆಕಟ್ಟೆ ರಸ್ತೆ ಹಾಗೂ ಸವಳಂಗ ರಸ್ತೆ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ತಲಾಶ್ ಮಾಡಿದ್ದಾರೆ. ಆರೋಪಿಗಳು ಪತ್ತೆಯಾಗಿಲ್ಲ. ಈ ಮಧ್ಯೆ ಯುವಕರನ್ನ ಲಾಡ್ಜ್ನಲ್ಲಿ ಉಳಿಸಿದ್ದ ಚೋರಡಿಯ ವ್ಯಕ್ತಿಯೊಬ್ಬನನ್ನು ಸಹ ಅಕ್ಯೂಸೆಡ್ ಮಾಡಿ ಕೇಸ್ ಮಾಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
