ಆಗುಂಬೆಯಲ್ಲಿ ಮರವಾಸಿ ಸಿಹಿನೀರಿನ ಏಡಿ ಪತ್ತೆ! ಹೇಗಿದೆ ನೋಡಿ

ಹಂಚಿಕೊಳ್ಳಿ
WhatsApp Facebook X Telegram
Agumbe Kani Tree Crab
Agumbe Kani Tree Crab

Agumbe Kani Tree Crab / ಮಲೆನಾಡು ಟುಡೆ ಸುದ್ದಿ / ಆಗುಂಬೆ / ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಮತ್ತೊಂದು ಅಪರೂಪದ ಜೀವಿಯ ಸೇರ್ಪಡೆಯಾಗಿದ್ದು, ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಪ್ರಭೇದವಾದ ಕನಿ ಮರ ನಂಡು (Kani Tree Crab) ಮೊದಲ ಬಾರಿಗೆ ಆಗುಂಬೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.ಈ ಬಗ್ಗೆ ಪತ್ರಿಕೆಯೊಂದು ವರದಿಮಾಡಿದೆ.

ಪತ್ರಿಕೆಯ ವರದಿಯ ಪ್ರಕಾರ, ಗಮನಿಸುವುದಾದರೆ, ಇದುವರೆಗೆ ಈ ಪ್ರಭೇದದ ಏಡಿಯು ಕೇರಳದ ಅಗಸ್ತ್ಯಮಲೆ ಜೈವಿಕ ವಲಯದಲ್ಲಿ ಕಾಣ ಸಿಕ್ಕಿತ್ತು ಮತ್ತು ಈ ಬಗ್ಗೆ ದಾಖಲಿಸಲಾಗಿತ್ತು ಇದೀಗ ಆಗುಂಬೆಯ ದಟ್ಟ ಮಳೆಕಾಡಿನಲ್ಲಿ ಸಿಹಿನೀರ ಏಡಿಯ ಅಸ್ತಿತ್ವ ದೃಢಪಟ್ಟಿರುವುದು ಪಶ್ಚಿಮ ಘಟ್ಟದ ಜೀವವೈವಿಧ್ಯದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ನಡೆಸಿದ ಕ್ಷೇತ್ರ ಅಧ್ಯಯನದಲ್ಲಿ ಈ ಅಪರೂಪದ ಏಡಿ ಪತ್ತೆಯಾಗಿದೆ. ‘ಗೆಕಾರ್ಸಿನುಸಿಡೆ (Gecarcinucidae)’ ಕುಟುಂಬಕ್ಕೆ ಸೇರಿದ ಈ ಸಿಹಿನೀರಿನ ಏಡಿ ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಭಾರತದ ಏಕೈಕ ಪ್ರಭೇದ. ಉದ್ದ ಕಾಲು, ಅಂಡಾಕಾರದ ಕವಚ, ಕಿತ್ತಳೆ-ಹಳದಿ ಬಣ್ಣದ ಕೊಕ್ಕು ಹಾಗೂ ನೀಲಿಕಪ್ಪು ಬಣ್ಣದ ದೇಹ ಇದರ ಪ್ರಮುಖ ಗುರುತು.

ಇದುವರೆಗೆ ಈ ಪ್ರಭೇದ ಮರಗಳಲ್ಲೇ ವಾಸಿಸುತ್ತದೆ ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ ಆಗುಂಬೆಯಲ್ಲಿ ಇದು ನೆಲದ ಮೇಲೆಯೂ ಸಂಚರಿಸುತ್ತಿರುವುದು ಸಂಶೋಧಕರ ಗಮನಕ್ಕೆ ಬಂದಿದ್ದು, ಇದರ ಜೀವನಶೈಲಿ ಮತ್ತು ಪರಿಸರ ಹೊಂದಾಣಿಕೆ ಕುರಿತು ಹೊಸ ಸಂಶೋಧನೆಗಳಿಗೆ ದಾರಿ ತೆರೆದಿದೆ.ವಿಶೇಷ ಅಂದರೆ ಆಗುಂಬೆಯ ಒಡಲಾಳದಲ್ಲಿ ಇನ್ನೆಷ್ಟು ವಿಶೇಷ ಜೀವ ಜಂತುಗಳಿರಬಹುದು ಎಂಬ ಕುತೂಹಲವನ್ನು ಈ ಸಂಶೋಧನೆ ಮತ್ತಷ್ಟು ಹೆಚ್ಚಿಸಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor