Anandapura ಆನಂದಪುರ: ವಾಹನವೊಂದರ ಟೈರ್ ಹಾಗೂ ರಿಮ್ಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಆನಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಪ್ಪುನಗರ ನಿವಾಸಿಯಾದ ಸೋನು ಬಂಧಿತ ಆರೋಪಿಯಾಗಿದ್ದಾನೆ.
ಶಿವಮೊಗ್ಗ; ಪ್ರತಿ ಲೀಟರ್ ಹಾಲಿಗೆ 20 ಬೆಂಬಲ ಬೆಲೆಗೆ ಆಗ್ರಹಿಸಿ ಮುಂದಿನ ವಾರ ಪ್ರತಿಭಟನೆ!
ಕಳೆದ ಫೆಬ್ರವರಿ 06, 2026 ರಂದು ಆಚಾಪುರ ಗ್ರಾಮದಲ್ಲಿ ಸುಮಾರು 45 ಸಾವಿರ ರೂಪಾಯಿ ಮೌಲ್ಯದ 3 ಟೈರ್ ಹಾಗೂ ರಿಮ್ಗಳು ಕಳುವಾಗಿದ್ದವು. ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಕಳ್ಳನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು .
ಕೊನೆಗೂ ಪ್ರಕರಣದ ಬೆನ್ನುಬಿದ್ದ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳ ವಿಶೇಷ ತಂಡವು ಜುಲೈ 03, 2026 ರಂದು ನಿಖರ ಮಾಹಿತಿ ಮೇರೆಗೆ ಆರೋಪಿ ಸೋನು ಬೆನ್ನುಹತ್ತಿ ಆತನನ್ನು ವಶಪಡಿಸಿಕೊಂಡಿದೆ. ಬಂಧಿತನಿಂದ ಕಳವಾಗಿದ್ದ 45,000 ರೂ ಮೌಲ್ಯದ 03 ಟೈರ್ ಮತ್ತು ರಿಮ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.


