ಸ್ಟಕ್ ಆದ ವಿಶಾಲ್ ಮಾರ್ಟ್​ ಲಿಫ್ಟ್​ನಲ್ಲಿ ಸಿಲುಕಿದ್ದ 9 ಮಂದಿಯನ್ನ ರಕ್ಷಿಸಿದ ಶಿವಮೊಗ್ಗ ಅಗ್ನಿಶಾಮಕ ದಳ! ಕಾರ್ಯಾಚರಣೆ ದೃಶ್ಯ ನೋಡಿ!

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಅಗ್ನಿಶಾಮಕ ದಳ 9 People Rescued from Vishal Mart Lift in Shivamogga by Fire Brigade

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಆಲ್ಕೋಳ ಸರ್ಕಲ್​ ಬಳಿ ಇರುವ ವಿಶಾಲ್ ಮಾರ್ಟ್​ನಲ್ಲಿ ನಿನ್ನೆ ಲಿಫ್ಟ್​ವೊಂದು ಸ್ಟಕ್​ ಆಗಿ, 9 ಮಂದಿ ಸಿಲುಕಿದ್ದ ಘಟನೆ ಬಗ್ಗೆ ವರದಿಯಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಶಿವಮೊಗ್ಗ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಎಲ್ಲಾ 9 ಮಂದಿಯನ್ನು ರಕ್ಷಿಸಿದ್ದಾರೆ.

ವಿಶಾಲ್ ಮಾರ್ಟ್ ಮಳಿಗೆಯ ಕಟ್ಟಡದಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್‌ ಮಧ್ಯದಲ್ಲಿಯೇ ಸ್ಟಕ್ ಆಗಿತ್ತು. ಇದರಿಂದಾಗಿ ಲಿಫ್ಟ್​ನಲ್ಲಿದ್ದ 9 ಜನರು ಲಿಫ್ಟ್​ನಲ್ಲಿ ಪರದಾಡುವಂತಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಪ್ರಶಾಂತ್ (28), ಪ್ರವೀಣ್ ಕುಮಾರ್ (47) ಹಾಗೂ ಮಕ್ಕಳಾದ ಮಿಜ್ಜಾ (09) ಮತ್ತು ಬಿಲಾಲ್ (06) ಎಂಬುವರನ್ನ ರಕ್ಷಿಸಿದ್ದಾರೆ.

ಶಿವಮೊಗ್ಗ ಅಗ್ನಿಶಾಮಕ ದಳದ ಕಾರ್ಯಾಚರಣೆ ಹೇಗಿತ್ತು?

ನಿನ್ನೆ ಅಂದರೆ, ಮೇ 18 ರ ರಾತ್ರಿ 8.30 ರ ವೇಳೆಗೆ ವಿಶಾಲ್ ಮಾರ್ಟ್ ಕಟ್ಟಡದ ಸೆಕೆಂಡ್ ಪ್ಲೋರ್​ನಿಂದ ಗ್ರೌಂಡ್ ಪ್ಲೋರ್​ಗೆ ಬರಲು 9 ಮಂದಿ ಲಿಫ್ಟ್ ಬಳಸಿದ್ದರು. ಈ ವೇಳೆ ಲಿಫ್ಟ್ ಟೆಕ್ನಿಕಲ್ ಪ್ರಾಬ್ಲಮ್​ನಿಂದಾಗಿ, ಮಧ್ಯದಲ್ಲಿಯೇ ಸ್ಟಕ್​ ಆಗಿದೆ. ಮಾಲ್​ ಸಿಬ್ಬಂದಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರಾದರೂ ಸಹ, ಲಿಫ್ಟ್ ಓಪನ್ ಆಗಿಲ್ಲ. ಸುಮಾರು 1 ಗಂಟೆ ಕಾಲ ಲಿಫ್ಟ್​ನಲ್ಲಿ ಸಿಲುಕಿದ್ದ ಮಂದಿ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಲಿಫ್ಟ್​ನಲ್ಲಿದ್ದವರಿಗೆ ಅಸ್ವಸ್ಥತೆ ಕಾಡಲು ಆರಂಭಿಸಿತ್ತು. ಈ ಮಧ್ಯೆ ಲಿಫ್ಟ್​ನಲ್ಲಿದ್ದ ಓರ್ವರು 112 ಕರೆ ಮಾಡಿದ್ದಾರೆ. 122 ಮೂಲಕ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನೆಯಾಗಿದೆ.

ಶಿವಮೊಗ್ಗ ಅಗ್ನಿಶಾಮಕ ದಳ 9 People Rescued from Vishal Mart Lift in Shivamogga by Fire Brigade

ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಅಗ್ನಿಶಾಮಕ ದಳದ ಆರ್.ಎಫ್.ಓ ರಾಜು, ಡಿ.ಎಫ್.ಓ ಅಶೋಕ್ ಕುಮಾರ್, ಎಫ್.ಎಸ್.ಟಿ.ಓ ಮಕ್ತುಂ ಹುಸೇನ್, ಎಲ್.ಎಫ್ ಸುನೀಲ್, ಎಫ್.ಡಿ ಸತೀಶ್ ಹಾಗೂ ಎಫ್.ಎಂ.ಗಳಾದ ಸಂತೋಷ್ ಮತ್ತು ಮನೋಜ್ ರವರ ತಂಡ ಕಾರ್ಯಾಚರಣೆಯನ್ನ ಆರಂಭಿಸಿತು. ಕಟ್ಟರ್ ಬಳಸಿ ಲಿಫ್ಟ್ ಬಾಗಿಲನ್ನು ಮುರಿದ ಸಿಬ್ಬಂದಿ ಬಳಿಕ ಲಿಫ್ಟ್​ನಲ್ಲಿದ್ದ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದೆ.

[su_image_carousel source=”media: 35450,35451,35452,35453,35454,35455,35456,35457,35458,35459,35460,35461″ controls_style=”light” crop=”16:9″ target=”self”]


ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor