SHIVAMOGGA NEWS TODAY

ಶಿವಮೊಗ್ಗ ನ್ಯೂ ಮಂಡ್ಲಿಯ ರೇಣುಕಾ ಸಾ ಮಿಲ್‌ನಲ್ಲಿ ಬೆಂಕಿ ಅವಘಡ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ನಗರದ ನ್ಯೂ ಮಂಡ್ಲಿಯ 100 ಅಡಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ರೇಣುಕಾ ಸಾ ಮಿಲ್ ಆ್ಯಂಡ್ ವುಡ್ ಇಂಡಸ್ಟ್ರಿಯಲ್ಲಿ ನಿನ್ನೆ ದಿನ ಬುಧವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಮರದ ತುಂಡುಗಳಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಈ ಮರ ಕೊಯ್ಯುವ ಕಾರ್ಖಾನೆಯು ನಗರದ ಅಜಾದ್ ನಗರ ಬಡಾವಣೆಯ ನಿವಾಸಿ ಗುರುಮೂರ್ತಿ ಎಂಬುವರಿಗೆ ಸೇರಿದ್ದಾಗಿದೆ. ಸಾಮಿಲ್‌ನಲ್ಲಿ ಒಟ್ಟು 2 ಕೋಟಿ ರೂಪಾಯಿ ಮೌಲ್ಯದ ಮರಮುಟ್ಟುಗಳನ್ನು ದಾಸ್ತಾನು ಮಾಡಲಾಗಿತ್ತು. ಬುಧವಾರ ಸಂಜೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿದ ಪರಿಣಾಮ, ಸುಮಾರು 3 ಲಕ್ಷ ರೂಪಾಯಿ ಮೊತ್ತದ ಮರದ ತುಂಡುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಾಜು ಹಾಗೂ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Fire Accident at Renuka Saw Mill in Shivamogga ,ಶಿವಮೊಗ್ಗ ನ್ಯೂ ಮಂಡ್ಲಿಯ ರೇಣುಕಾ ಸಾ ಮಿಲ್‌ನಲ್ಲಿ ಬೆಂಕಿ ಅವಘಡ, 3 ಲಕ್ಷ ರೂ. ಮೌಲ್ಯದ ಮರ ಭಸ್ಮ
Fire Accident at Renuka Saw Mill in Shivamogga ,ಶಿವಮೊಗ್ಗ ನ್ಯೂ ಮಂಡ್ಲಿಯ ರೇಣುಕಾ ಸಾ ಮಿಲ್‌ನಲ್ಲಿ ಬೆಂಕಿ ಅವಘಡ, 3 ಲಕ್ಷ ರೂ. ಮೌಲ್ಯದ ಮರ ಭಸ್ಮ

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ