SHIVAMOGGA NEWS TODAY

ಶಿವಮೊಗ್ಗದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಸಂಗೀತ ಸುಧೆ: ಎಲ್ಲಿ? ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ದಿ ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ವತಿಯಿಂದ ಇದೇ ಏಪ್ರಿಲ್ 09ರ ಗುರುವಾರ ಸಂಜೆ ಶಿವಮೊಗ್ಗದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಖ್ಯಾತ ಗಾಯಕಿ  ಶಿವಶ್ರೀ ಸ್ಕಂದಪ್ರಸಾದ್ ರವರಿಂದ ಭಕ್ತಿ ಸಂಗೀತದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಪ್ರಮುಖರಾದ ವಿನಯ್ ಹೇಳಿದರು.

ಇವತ್ತಿನ ಅಡಿಕೆ ದರ : ಶಿವಮೊಗ್ಗ, ದಾವಣಗೆರೆ, ಚೆನ್ನಗರಿ, ಮಂಗಳೂರು, ತುಮಕೂರು ಅಡಿಕೆ ರೇಟು

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ  ಈ ಕುರಿತು ಮಾಹಿತಿ ನನೀಡಿಡಿದ ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಸಂಜೆ 5:30 ರಿಂದ 8:30 ರವರೆಗೆ ಈ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಶಿವಶ್ರೀ ಅವರು ಹಾಡಿದ್ದ ಗೀತೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂಬುದು ವಿಶೇಷ. 

ನಾಮಾಮೃತ ಹೆಸರಿನ ಈ ಕಾರ್ಯಕ್ರಮದಲ್ಲಿ ಶಿವಶ್ರೀ ಅವರೊಂದಿಗೆ ಅವರ ತಂದೆ ಸ್ಕಂದಪ್ರಸಾದ್ ಅವರು ಗಾಯನದಲ್ಲಿ ಸಾಥ್ ನೀಡಲಿದ್ದಾರೆ. ಇನ್ನುಳಿದಂತೆ ಗೌರವ್ ಗಡಿಯಾರ್ (ಹಾರ್ಮೋನಿಯಂ), ಅನಿರುದ್ ಭಟ್ (ಮೃದಂಗ) ಹಾಗೂ ಪ್ರದ್ಯುಮ್ನ ಕರ್ಪೂರ್ (ತಬಲಾ) ಪಕ್ಕವಾದ್ಯಗಳಲ್ಲಿ ಸಹಕರಿಸಲಿದ್ದಾರೆ. 

ನಗರದ ಪ್ರಸಿದ್ಧ ಪಂಚತಾರ ಐಸೀಮ್ಸ್ ಸಂಸ್ಥೆಯ ಮಾಲೀಕರಾದ ಪ್ರಕಾಶ್ ಪ್ರಭು ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶಿವಮೊಗ್ಗದ ಸಂಗೀತ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್‌ನ ಪ್ರಮುಖರಾದ ವಿನಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

Shivashree Skanda Prasad Music Concert 

Shivashree Skanda Prasad Music Concert 
Shivashree Skanda Prasad Music Concert 
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.