ಪೊಲೀಸರೇ ನಿಮಗೆ ದಮ್ಮು ಇಲ್ಲವಾ? ತಾಕತ್ತು ಇಲ್ಲವಾ?  ಶಿವಮೊಗ್ಗದಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಹಾಕಿದ್ರು ಸವಾಲ್​!

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡದ ಘಟನೆ ಸಂಬಂಧ ಹಾಗೂ ಪ್ರಮೋದ್ ಮುತಾಲಿಕ್​ರನ್ನ ಶಿವಮೊಗ್ಗಕ್ಕೆ ಬಾರದಂತೆ ತಡೆದಿರುವ ವಿಚಾರ ಕುರಿತು,  ಶಿವಮೊಗ್ಗದಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿದ್ದಾರೆ. ಪೊಲೀಸರು ರಾತ್ರಿ 2 ಗಂಟೆಗೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕರನ್ನು ತಡೆದಿದ್ದಾರೆ  70 ವರ್ಷ ವಯಸ್ಸಿನ ವ್ಯಕ್ತಿಯನ್ನು ರಾತ್ರಿ ವಾಪಸ್ ಕಳುಹಿಸುತ್ತಾರೆ ಪ್ರಮೋದ್ ಮುತಾಲಿಕ್ ಏನಾದ್ರೂ ದರೋಡೆಕೋರರಾ? ಎಂದು ಪ್ರಶ್ನಿಸಿದ್ದಾರೆ. 

ರಾಜ್ಯ ಸರ್ಕಾರದ ಈ ಸವಾಲನ್ನು ಸ್ವೀಕರಿಸಿದ್ದೇವೆ ಎಂದ ಅವರು,  ಮುಂಬರುವ ದಿನಗಳಲ್ಲಿ ಶಿವಮೊಗ್ಗ ಮತ್ತೆ ಬಂದೇ ಬರುತ್ತೇವೆ  ಎಂದಿದ್ದಾರೆ. ಅಲ್ಲದೆ ಶಿವಮೊಗ್ಗದ ರಾಗಿಗುಡ್ಡ ಏನಾದರೂ ಪಾಕಿಸ್ತಾನದಲ್ಲಿ ಇದೆಯಾ ? ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು  ಶ್ರೀರಾಮ ಸೇನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಕಿಡಿಗೇಡಿಗಳು ಮಾಡಿದ್ದೆ ಆಟ ಎಂಬಂತಾಗಿದೆ. ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವವರಿಗೆ ನಿರ್ಬಂಧ ಇಲ್ಲ . ಕೊಲೆ ಮಾಡುವವರಿಗೆ ನಿರ್ಬಂಧ ಇಲ್ಲ . ಹಿಂದುಗಳ ಮನೆ ಮೇಲೆ ಕಲ್ಲು ತೂರುತ್ತಿರುವವರಿಗೆ ನಿರ್ಬಂಧ ಇಲ್ಲ ,ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿರುವವರಿಗೆ ನಿಬಂಧ ಇಲ್ಲ

 ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆಯವರಿಗೆ ಮಾತ್ರ ನಿರ್ಬಂಧನಾ? ತಲವಾರು ತೋರಿಸ್ತೀರಾ? ಕಲ್ಲಿನ ಹೆದರಿಕೆ ತೋರಿಸ್ತೀರಾ?  ನಿಮ್ಮ ತಲ್ವಾರ್ ಹಾಗೂ ಕಲ್ಲಿನ ಹೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದಿದ್ದಾರೆ. ನಿಮ್ಮಲ್ಲಿ ಎಷ್ಟು ತಳವಾರ್ ಇದೆ ತೆಗೆದುಕೊಂಡು ಬನ್ನಿ ಉತ್ತರ ಕೊಡಲು ನಮಗೆ ತಾಕತ್ತಿದೆ.  ಪ್ರಮೋದ್ ಮುತಾಲಿಕರನ್ನು ತಡೆದು ನಿಲ್ಲಿಸುವಂತಹ ನೀಚ ಕೆಲಸವನ್ನು ಸರ್ಕಾರ ನಿಲ್ಲಿಸಬೇಕು ಎಂದಿದ್ದಾರೆ. 

ಮಧ್ಯರಾತ್ರಿ ಎರಡು ಗಂಟೆ ವೇಳೆ ಪ್ರಮೋದ್ ಮುತಾಲಿಕ್ ರನ್ನು  ತಡೆದು ನಿಲ್ಲಿಸಲು ಆಗುತ್ತದೆ, ಪ್ರಚೋದನಕಾರಿ ಕಟೌಟ್ ಗಳನ್ನು ಹಾಕುವ ಸಂದರ್ಭದಲ್ಲಿ ನೀವೇನು ಮಲಗಿದ್ದೀರಾ? ಟಿಪ್ಪು ಸುಲ್ತಾನ್ ಔರಂಗಜೇಬನ ಕಟೌಟ್ ಹಾಕುವಾಗ ಏನು ಮಾಡುತ್ತಿದ್ದೀರಾ? ಪೊಲೀಸರೇ ನಿಮಗೆ ದಮ್ಮು ಇಲ್ಲವಾ? ತಾಕತ್ತು ಇಲ್ಲವಾ?  ಕಟೌಟ್ ಹಾಕುವಾಗ ಏನು ಮಾಡಿದ್ದೀರಾ? ಎರಡು ಮೂರು ದಿನಗಳಲ್ಲಿ ಶ್ರೀರಾಮ ಸೇನೆಯಿಂದ ಶಿವಮೊಗ್ಗ ಚಲೋ ನಡೆಯುತ್ತದೆ. ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲ್ ಹಾಕಿದರು. 


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Leave a Comment