ವನ್ಯಜೀವಿ ಖಾಯಂ ವೈದ್ಯರ ನೇಮಕಕ್ಕೆ ಸರ್ಕಾರ ಅಸ್ತು, ಇದು ಮಲೆನಾಡು ಟುಡೆ ಪತ್ರಿಕೆಯ ಫಲಶೃತಿ

prathapa thirthahalli
Prathapa thirthahalli - content producer

Sakrebailu elephant camp : ಇತ್ತೀಚೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಬಾಲಣ್ಣ ಆನೆ ಸೇರಿದಂತೆ ಮೂರು ಆನೆಗಳು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ತಜ್ಞ ವೈದ್ಯರ ಕೊರತೆ ಇರುವ ಬಗ್ಗೆ ಮಲೆನಾಡು ಟುಡೆ ಪತ್ರಿಕೆ ಬೆಳಕು ಚೆಲ್ಲಿತ್ತು. ರಾಜ್ಯಾಧ್ಯಂತ ಹುಲಿ ಸಿಂಹಧಾಮ ಸಫಾರಿ ಹಾಗೂ ಮೃಗಾಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವನ್ಯಜೀವಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡ ಅರಣ್ಯ ಸಚಿವ ಈಶ್ವರ್​ ಬಿ.ಖಂಡ್ರೆ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

Sakrebailu elephant camp ಆದೇಶ ಪ್ರತಿಯಲ್ಲಿ ಏನಿದೆ.?

ರಾಜ್ಯದ ಆನೆ ಶಿಬಿರಗಳಲ್ಲಿ ಮತ್ತು ವನ್ಯಜೀವಿ ಪುನರ್ವಸತಿ ಕೇಂದ್ರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ಇದ್ದು, ಈ ಹಿನ್ನೆಲೆ  ಪಶುವೈದ್ಯರನ್ನು ನಿಯೋಜನೆ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್​ ಬಿ ಖಂಡ್ರೆ ಆದೇಶವನ್ನು ಹೊರಡಿಸಿದ್ದಾರೆ.

- Advertisement -

ಆ ಆದೇಶ ಪ್ರತಿಯಲ್ಲಿ ಸಕ್ರೇಬೈಲು ಆನೇ ಬಿಡಾರದ  ಆನೆಗಳ ಆನಾರೋಗ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ಸಕ್ಕರೆ ಬೈಲು ಆನೆ ಶಿಬಿರದಲ್ಲಿ ನಾಲ್ಕು ಆನೆಗಳು ಕಾಯಿಲೆಯಿಂದ ನರಳುತ್ತಿರುವುದು ಮತ್ತು ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಬಾಲಣ್ಣ ಎಂಬ ಆನೆಯ ಕಿವಿಯಲ್ಲಿ ಸೋಂಕಾಗಿ ಕಿವಿಯನ್ನೇ ತೆಗೆದು ಹಾಕಲಾಗಿರುವುದು ನೋವಿನ ಸಂಗತಿಯಾಗಿದೆ.

ಇದರ ಜೊತೆಗೆ ಹುಲಿ ಮತ್ತು ಕಾಡಾನೆಗಳು ನಾಡಿನತ್ತ ಬರುತ್ತಿದ್ದು. ಈ ವನ್ಯಜೀವಿಗಳ ಸೆರೆ ಕಾರ್ಯಾಚರಣೆ ವೇಳೆ ಅರವಳಿಕೆ ಚುಚ್ಚುಮದ್ದು ನೀಡಲೂ ವೈದ್ಯರ ಕೊರತೆ ಇದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕೇಡರ್ ರೂಪಿಸಿ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಅಗತ್ಯ ಇದ್ದು. ತಜ್ಞ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸ್ಪಷ್ಟ ರೂಪರೇಶೆಯೊಂದಿಗೆ ಪ್ರತ್ಯೇಕ ಕೇಡರ್ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲು ಸೂಚಿಸಿದೆ. ಎಂದಿದ್ದಾರೆ.

Sakrebailu elephant camp ಕರ್ನಾಟಕದಲ್ಲಿ ಪ್ರತ್ಯೇಕ ವನ್ಯಜೀವಿ ಪಶುವೈದ್ಯಕೀಯ ಕೇಡರ್ ಏಕೆ ಬೇಕು

ಕರ್ನಾಟಕ ಸರ್ಕಾರವು ಸರಿಯಾದ ವನ್ಯಜೀವಿ ನಿರ್ವಹಣೆ, ಆರೈಕೆ ಮತ್ತು ಚಿಕಿತ್ಸೆಗಾಗಿ “ಪ್ರತ್ಯೇಕ ವನ್ಯಜೀವಿ ಪಶುವೈದ್ಯಕೀಯ ಕೇಡರ್” ಅನ್ನು ಸ್ಥಾಪಿಸಲು ಇದು ಸಕಾಲವಾಗಿದೆ. ಕೇವಲ ತಾತ್ಕಾಲಿಕ ವೈದ್ಯರು ಮತ್ತು ಇತರ ಸಂಸ್ಥೆಗಳು ಅಥವಾ ಇಲಾಖೆಗಳಿಂದ  ಗುತ್ತಿಗೆ ಪಡೆದ ವೈದ್ಯರನ್ನು ಅವಲಂಬಿಸುವುದು ಸೂಕ್ತವಲ್ಲ. ಮಧ್ಯಪ್ರದೇಶ ರಾಜ್ಯದಲ್ಲಿ  ಪ್ರತ್ಯೇಕ ವನ್ಯಜೀವಿ ಪಶುವೈದ್ಯಕೀಯ ಕೇಡರ್ ಅನ್ನು ರಚಿಸಲು ಸಾಧ್ಯವಾಗುವುದಾದರೆ, ದೇಶದಲ್ಲಿ ಎರಡನೇ ಅತಿ ಹೆಚ್ಚು ಹುಲಿ ಮತ್ತು ಆನೆಗಳ ಸಂತತಿಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ  ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮೂಡುತ್ತದೆ.

ವನ್ಯಜೀವಿಗಳ ಸಂರಕ್ಷಣೆ ಮತ್ತು ರಕ್ಷಣೆಯಲ್ಲಿ ಉನ್ನತ ಗುಣಮಟ್ಟವನ್ನು ಹೊಂದಿದೆ ಎಂದು ಹೆಮ್ಮೆ ಪಡುವ ರಾಜ್ಯಕ್ಕೆ ಇದು ಅತ್ಯಂತ ಶೋಚನೀಯ ಪರಿಸ್ಥಿತಿ. ಮಾನವ-ವನ್ಯಜೀವಿ ಸಂಘರ್ಷದ ವಲಯಗಳಲ್ಲಿ ಕರ್ನಾಟಕವು ಅನೇಕ ವಿಫಲ ಕಾರ್ಯಾಚರಣೆಗಳನ್ನು ಕಂಡಿದೆ.

ಪ್ರಸ್ತುತ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯಿಂದ ನಿಯೋಜನೆಗೊಂಡಿರುವ ಕೇವಲ 4 ಖಾಯಂ ಪಶುವೈದ್ಯರು ಮಾತ್ರ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಡಿಕೇರಿ ವೃತ್ತದಲ್ಲಿ ಡಾ. ಮುಜೀಬ್, ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಡಾ. ವಾಸಿಂ, ಮೈಸೂರು ವೃತ್ತದಲ್ಲಿ ಡಾ. ಆದರ್ಶ್ ಮತ್ತು ಹುಣಸೂರು ವನ್ಯಜೀವಿ ವಿಭಾಗದಲ್ಲಿ ಡಾ. ರಮೇಶ್. ಕಾರ್ಯನಿರ್ವಹಿಸುತ್ತಿದ್ದಾರೆ.  ಕರ್ನಾಟಕ ರಾಜ್ಯದಲ್ಲಿ 13 ಅರಣ್ಯ ವೃತ್ತಗಳಿದ್ದರೂ, ಕೇವಲ 4 ವೈದ್ಯರನ್ನು ಮಾತ್ರ ನೇಮಿಸಲಾಗಿದೆ.

Sakrebailu elephant camp ಪಶುಸಂಗೋಪನಾ ಇಲಾಖೆಯ ವೈದ್ಯರು ಅರಣ್ಯ ಇಲಾಖೆಗೆ ಏಕೆ ಬರುತ್ತಿಲ್ಲ?

ಪಶುಸಂಗೋಪನಾ ಇಲಾಖೆಯ ಯಾವುದೇ ಇತರ ಕ್ಷೇತ್ರ ಪಶುವೈದ್ಯರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿಲ್ಲ. ಏಕೆಂದರೆ ಅವರಿಗೆ ಅಪಾಯ ಭತ್ಯೆ (Risk Allowance), ನಾನ್-ಪ್ರಾಕ್ಟೀಸಿಂಗ್ ಅಲೌನ್ಸ್ (NPA), ಪ್ರತಿ ವಲಯ ಅರಣ್ಯಾಧಿಕಾರಿಗೆ ನೀಡುವಂತೆ ಪ್ರತ್ಯೇಕ ವಾಹನ ಸೌಲಭ್ಯ, ಸ್ವಂತ ಹಣಕಾಸು ನಿರ್ವಹಣಾ ಅಧಿಕಾರ (Drawing Power), ಅರ್ಹ ಸಹಾಯಕ ಸಿಬ್ಬಂದಿ, ಪ್ರಯೋಗಾಲಯ ಸೌಲಭ್ಯಗಳೊಂದಿಗೆ ಸೂಕ್ತ ಆಸ್ಪತ್ರೆ ಮೂಲಸೌಕರ್ಯ ಮತ್ತು ತರಬೇತಿಯನ್ನು ನೀಡುತ್ತಿಲ್ಲ.

ಸಕ್ರೆಬೈಲು ಆನೆ ಶಿಬಿರದಲ್ಲಿ ಡಾ. ವಿನಯ್. ಎಸ್ ಅವರು ಮಾತೃ ಇಲಾಖೆಗೆ ವರದಿ ಮಾಡಿದಾಗಿನಿಂದ, ಬಿಡಾರದಲ್ಲಿರುವ 25 ಆನೆಗಳ ಆರೋಗ್ಯ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ಯಾವುದೇ ಖಾಯಂ ವನ್ಯಜೀವಿ ಪಶುವೈದ್ಯರು ಇಲ್ಲ. ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿವೃತ್ತ ವೈದ್ಯರು ಮತ್ತು ಹುಲಿ-ಸಿಂಹ ಸಫಾರಿಯ ವೈದ್ಯರ ಸೇವೆಯನ್ನು ಪಡೆಯುತ್ತಿದ್ದಾರೆ. ಇದು ಶಿಬಿರದ ನಾಲ್ಕು ಆನೆಗಳಾದ ಧನುಷ್, ವಿಕ್ರಾಂತ್​, ಅಡ್ಕ ಬಡ್ಕ ಮತ್ತು ಈಗ ಬಾಲಣ್ಣ ಆನೆಗಳಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಬಾಲಣ್ಣ ಆನೆಯಲ್ಲಿ ಗ್ಯಾಂಗ್ರೀನ್ (Gangrene) ಆಗಿದ್ದರಿಂದ ಅದರ ಬಲ ಕಿವಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಹೀಗಾಗಿ, ಶಿಬಿರದ ಮುಖ್ಯ ಕುಮ್ಕಿ ಆನೆಯನ್ನು ಕಳೆದುಕೊಂಡಂತಾಗಿದೆ. ಆದ್ದರಿಂದ, ಎಲ್ಲಾ ಶಿಬಿರದ ಆನೆಗಳ ಆರೋಗ್ಯವನ್ನು ನೋಡಿಕೊಳ್ಳಲು ವನ್ಯಜೀವಿ ಆರೋಗ್ಯ ನಿರ್ವಹಣೆಯಲ್ಲಿ ಅನುಭವವಿರುವ ಖಾಯಂ ಪಶುವೈದ್ಯರ ತುರ್ತು ಅಗತ್ಯವಿದೆ.

Sakrebailu elephant camp ಆದ್ದರಿಂದ, ರಾಜ್ಯದ ಎಲ್ಲಾ ಶಿಬಿರದ ಆನೆಗಳನ್ನು ನಿಯಮಿತವಾಗಿ ನೋಡಿಕೊಳ್ಳಲು, ಅಂದರೆ ಪ್ರತಿದಿನ ಶಿಬಿರಕ್ಕೆ ಭೇಟಿ ನೀಡಿ ಅವುಗಳ ಆರೋಗ್ಯ ತಪಾಸಣೆ ಮಾಡಲು, ಅವುಗಳಿಗೆ ನೀಡಲಾಗುವ ಆಹಾರದ ಗುಣಮಟ್ಟ ಮತ್ತು ಪ್ರಮಾಣವನ್ನು ಪರಿಶೀಲಿಸಲು, ಆನೆಗಳು ಶಿಬಿರಕ್ಕೆ ಯಾವ ಸಮಯದಲ್ಲಿ ಹಿಂದಿರುಗುತ್ತವೆ ಎಂಬುದನ್ನು ಗಮನಿಸಲು, ಮತ್ತು ಯಾವುದೇ ಆನೆ ಕಾಡಿನಲ್ಲಿ ಉಳಿದುಕೊಂಡರೆ ವೈದ್ಯರು ಮತ್ತು ಅರಣ್ಯಾಧಿಕಾರಿಗಳು ಕಾಡಿನೊಳಗೆ ಭೇಟಿ ನೀಡಿ ಅದರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು, ವನ್ಯಜೀವಿ ಆರೋಗ್ಯ ನಿರ್ವಹಣೆಯಲ್ಲಿ ಅನುಭವವಿರುವ ಖಾಯಂ ಪಶುವೈದ್ಯರ ತುರ್ತು ಅಗತ್ಯವಿದೆ. ಯಾವುದೇ ಕಾಡು ಪ್ರಾಣಿಯನ್ನು ಸೆರೆಹಿಡಿದು ಕ್ರಾಲ್‌ನಲ್ಲಿ ಇರಿಸಿದ್ದರೆ, ವೈದ್ಯರು ಪ್ರತಿದಿನವೂ ಅದನ್ನು ಮೇಲ್ವಿಚಾರಣೆ ಮಾಡಿ, ಯಾವುದೇ ಚಿಕಿತ್ಸೆ ಮತ್ತು ಉತ್ತಮ ಆರೋಗ್ಯ ನಿರ್ವಹಣೆಗಾಗಿ ಮಾವುತರು ಮತ್ತು ಕಾವಾಡಿಗಳಿಗೆ ಮಾರ್ಗದರ್ಶನ ನೀಡಬೇಕು.

ಕೆಲವೊಮ್ಮೆ ಮಾನವ ವಸತಿಯಲ್ಲಿ ಕಾಡು ಪ್ರಾಣಿಗಳ ಸಂಘರ್ಷದ ಸಮಸ್ಯೆಗಳು ಉದ್ಭವಿಸುತ್ತವೆ, ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸಲು ಶಿಬಿರದ ವೈದ್ಯರು ತಕ್ಷಣ ಕುಮ್ಕಿ ಆನೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಬೇಕಾಗುತ್ತದೆ. ಇದರ ಜೊತೆಗೆ, ಬೇಟೆ, ಚಿರತೆ, ಕರಡಿ, ಕಾಡೆಮ್ಮೆ ಮುಂತಾದ ಪ್ರಾಣಿ ಸಂಘರ್ಷದ ಸಮಸ್ಯೆಗಳು ಸಹ ಇರುತ್ತವೆ. ಈ ಕಾಡು ಪ್ರಾಣಿಗಳನ್ನು ಸೆರೆಹಿಡಿಯುವುದು ಮತ್ತು ರಕ್ಷಿಸುವುದು ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಬಹಳ ಸವಾಲಿನ ಕೆಲಸ. ಆದ್ದರಿಂದ, ಕಾಡು ಪ್ರಾಣಿಗಳು ಮತ್ತು ಶಿಬಿರದ ಆನೆಗಳನ್ನು ತುರ್ತಾಗಿ ರಕ್ಷಿಸಲು ಮತ್ತು ಉಳಿಸಲು, ಶಿವಮೊಗ್ಗದ ವನ್ಯಜೀವಿ ವಿಭಾಗಕ್ಕೆ ಖಾಯಂ ಪಶುವೈದ್ಯರ ಅಗತ್ಯವಿದೆ. ಹುಲಿ ಮತ್ತು ಸಿಂಹ ಸಫಾರಿಯಿಂದ ಪಡೆಯುವ ತಾತ್ಕಾಲಿಕ ವೈದ್ಯಕೀಯ ಸೇವೆಯು ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಮತ್ತು ಇದು ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ, ಅರಣ್ಯ ಸಚಿವರು ಇದೀಗ ಜಿಲ್ಲಾ ವೃತ್ತಗಳಲ್ಲಿ, ಮೃಗಾಲಯಗಳಲ್ಲಿ ಮತ್ತು ಸಫಾರಿಗಳಲ್ಲಿ ನೇಮಕ ಮಾಡಲು ಪ್ರತ್ಯೇಕ ವನ್ಯಜೀವಿ ಪಶುವೈದ್ಯಕೀಯ ಕೇಡರ್ ಸ್ಥಾಪಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.

ಜೆಪಿ ವರದಿ

Sakrebailu elephant camp

Sakrebailu elephant camp
Sakrebailu elephant camp
Share This Article
Leave a Comment

Leave a Reply

Your email address will not be published. Required fields are marked *