ಶಿವಮೊಗ್ಗ: ಕ್ರೈಂ ತಡೆಯಲು ಚೀತಾ ಸೇರಿ 2 ಪೆಟ್ರೋಲಿಂಗ್​ನ್ನ ಜಿಲ್ಲೆಯಾದ್ಯಂತ ಕಡ್ಡಾಯಗೊಳಿಸಿದ SP! ಇವರ ಇಲ್ಲಿದೆ

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 25 2025 : ಶಿವಮೊಗ್ಗದಲ್ಲಿ ಚಡ್ಡಿಗ್ಯಾಂಗ್​ ಮತ್ತೆ ಕಾಣಿಸಿಕೊಂಡಿದೆ ಎನ್ನುವ ವಿಚಾರದ ಜೊತೆಜೊತೆಗೆ ಕಳ್ಳತನದಂತಹ ಪ್ರಕರಣಗಳು ಸಹ ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ಮಾರ್ನಿಂಗ್ ಬೀಟ್ ಕಡ್ಡಾಯಗೊಳಿಸಿದೆ. ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಶಿವಮೊಗ್ಗ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಗುಡ್ ಮಾರ್ನಿಂಗ್ ಬೀಟ್ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. 

- Advertisement -

ಬರುತ್ತೆ ಚೀತಾ

ಮಾರ್ನಿಂಗ್ ಬೀಟ್ ಕಡ್ಡಾಯಗೊಳಿಸುವ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಮಾಹಿತಿ ಫೋಸ್ಟರ್​ ಹಂಚಿಕೊಂಡಿರುವ ಎಸ್​ಪಿ ಮಿಥುನ್ ಕುಮಾರ್ ಚೀತಾ ಗಸ್ತನ್ನ ಸಹ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆಯು ಸಹ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದಾರೆ. 

ಈ ಹಿಂದೆಯು ಚೀತಾ ಹೆಸರಿನ ಬೈಕ್​ನಲ್ಲಿ ಬೀಟ್ ನಡೆಸುತ್ತಿದ್ದ ಪೊಲೀಸರಿಂದಾಗಿ ಸಾಕಷ್ಟು ಅಪರಾಧ ಕೃತ್ಯಗಳಿಗೆ ಬ್ರೇಕ್​ ಬಿದ್ದಿದ್ದವು. ಇದೀಗ ಚೀತಾ ಗಸ್ತನ್ನು ಎಸ್​ಪಿ ಮಿಥುನ್ ಕುಮಾರ್ ಕಡ್ಡಾಯವಾಗಿ ನಡೆಸಬೇಕು ಎಂದು ಸೂಚಿಸಿದ್ದಾರೆ.


Shivamogga Police Reintroduces Cheetah Patrolling

Share This Article