monday horoscope special ಶಿವಮೊಗ್ಗ, malenadu today news : August 18 2025 ಮಲೆನಾಡು ಟುಡೆ ಸುದ್ದಿ : ಇವತ್ತಿನ ರಾಶಿಫಲದ ವಿವರಗಳನ್ನು ಗಮನಿಸೋಣ. ಇವತ್ತು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸದ ರೋಹಿಣಿ ನಕ್ಷತ್ರದ ದಿನ. ವಾರದ ಆರಂಭವಾದ ಈ ದಿನದ ಭವಿಷ್ಯ ಓದುಗರೆ ನಿಮ್ಮ ಮುಂದೆ. ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಮೇಷ : ದಿನದ ಆರಂಭ ಶುಭವಾಗಲಿದೆ. ಪ್ರಯಾಣ ಮುಂದೂಡುವಿರಿ, ಕೆಲಸದಲ್ಲಿ ಕೆಲವು ಸಮಸ್ಯೆ ಎದುರಾಗಲಿದೆ, ಸಾಲ ಆಗಬಹುದು ಆರೋಗ್ಯ ಸಮಸ್ಯೆ ಎದುರಾಗಬಹುದು. ವ್ಯಾಪಾರ ಮತ್ತು ಉದ್ಯೋಗದ ವಿಷಯದಲ್ಲಿ ಈ ದಿನ ಸಾಮಾನ್ಯ ದಿನವಾಗಿರಲಿದೆ.
ವೃಷಭ : ಉದ್ಯೋಗಾವಕಾಶಕ್ಕಾಗಿ ಹುಡುಕಾಟ, ಹೊಸ ಜನರ ಪರಿಚಯ, ಅನಿರೀಕ್ಷಿತ ವಿಷಯದಲ್ಲಿ ಪಾಲ್ಗೊಳ್ಳುವಿರಿ. ಸುತ್ತಮುತ್ತಲಿನ ಪರಿಸರ ನಿಮ್ಮನ್ನ ಆಹ್ಲಾದಗೊಳಿಸುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ
ಮಿಥುನ : ವ್ಯವಹಾರ ನಿಧಾನವಾಗಿ ಸಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುವಿರಿ. ಆರೋಗ್ಯದಲ್ಲಿ ಏರುಪೇರು, ಒತ್ತಡದ ದಿನ , ವ್ಯಾಪಾರ ಹಾಗು ಉದ್ಯೋದಲ್ಲಿ ಈ ದಿನ ಸರಳವಾಗಿರಲಿದೆ.
ಕರ್ಕಾಟಕ: ಕೈಗೆತ್ತಿಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಮುಗಿಯಲಿದೆ. ಹಣಕಾಸಿನ ವಿಷಯದಲ್ಲಿ ತೃಪ್ತಿ ಇರಲಿದೆ. ಧನ ಲಾಭ, ಹೊಸ ಸಂಪರ್ಕ . ವ್ಯವಹಾರ ಮತ್ತು ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿವೆ.

monday horoscope special ಸಿಂಹ: ಹೊಸ ಪರಿಚಯ. ಗೌರವ ಹೆಚ್ಚಲಿದೆ. ಧನ ಲಾಭವಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹವಿರಲಿದೆ. ನಾಳೆಯ ಕನಸುಗಳು ಈ ದಿನವನ್ನು ಮುನ್ನೆಡೆಸುವುದು
ಕನ್ಯಾ: ಕಠಿಣ ಪರಿಶ್ರಮ ಅನಿವಾರ್ಯ. ಕೈಗೊಂಡ ಕೆಲವು ಕೆಲಸ ಅರ್ಧಕ್ಕೆ ನಿಲ್ಲಬಹುದು. ದೇವಸ್ಥಾನಗಳಿಗೆ ಭೇಟಿ, ಹಣದ ಖರ್ಚು ಹೆಚ್ಚಾಗಲಿದ್ದು, ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಒತ್ತಡ ಹೆಚ್ಚಿರಲಿದೆ.
ತುಲಾ: ಹೊಸ ಸಾಲ ಪಡೆಯುವ ಪ್ರಯತ್ನ. ದೇವಾಲಯಗಳಿಗೆ ಭೇಟಿ ,ಆರೋಗ್ಯ ಸಮಸ್ಯೆ. ಕೆಲಸದ ಹೊರೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ವಿವಾದ ಕಾಣುವಿರಿ.
ವೃಶ್ಚಿಕ :ಹೊಸ ವಿಷಯ ತಿಳಿಯುವಿರಿ, ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಮನೆಯಲ್ಲಿ ಒತ್ತಡ, ಆರ್ಥಿಕ ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿದೆ.
ಧನು: ಹೊಸ ಪರಿಚಯ ಹೆಚ್ಚಲಿವೆ. ಆಧ್ಯಾತ್ಮಿಕ ಕೆಲಸದಲ್ಲಿ ತೊಡುಗುವಿರಿ. ಹಳೆಯ ಸಾಲ ವಾಪಸ್ ಬರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ಗಳಿಸುವಿರಿ.
ಮಕರ: ಕೆಲಸದಲ್ಲಿ ವಿಳಂಬ. ಸಹೋದರರೊಂದಿಗೆ ವಿವಾದ ಉಂಟಾಗಬಹುದು. ಅನಾರೋಗ್ಯದ ಸೂಚನೆ ಇದೆ. ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಸೆ ಎದುರಾಗಬಹುದು.
horoscope special ಕುಂಭ : ಭಿನ್ನಾಭಿಪ್ರಾಯ. ಗೊಂದಲ. ಕೆಲಸದಲ್ಲಿ ಒತ್ತಡ, ದಿನವಿಡಿ ಆಯಾಸ, ಉದ್ಯೋಗ ಪ್ರಯತ್ನ ಕೈಗೂಡುವುದಿಲ್ಲ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿ
ಮೀನ: ಶುಭ ಕಾರ್ಯ. ಆರ್ಥಿಕವಾಗಿ ಅಭಿವೃದ್ಧಿ. ಭೂ ವಿವಾದ ಬಗೆಹರಿಯಲಿದೆ. ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಇವತ್ತು ನಿಮ್ಮದೆ ದಿನ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
