Rpf officers : ಶಿವಮೊಗ್ಗ ಟೌನ್ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿ ಸದಾ ಒಂದಲ್ಲಾ ಒಂದು ರೀತಿಯಲ್ಲಿ ಮಾನವೀಯ ಕೆಲಸಗಳಿಂದ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯೂ ಸಹ ಅನೇಕ ಬಾರಿ ರೈಲಿನಲ್ಲಿ ಪ್ರಯಾಣಿಸಿ ತಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರಿಗೆ ವಸ್ತುಗಳನ್ನು ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಅದೇ ರೀತಿ ಇಂದು ಸಹ ವ್ಯಕ್ತಿಯೊಬ್ಬರು ರೈಲಿನಲ್ಲಿ ಬಿಟ್ಟು ಹೋಗಿದ್ದ ವಸ್ತುವನ್ನು ಹಿಂದಿರುಗಿಸಿದ್ದಾರೆ.
ಬೆಳಿಗ್ಗೆ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ RPF ಅಧಿಕಾರಿಗಳಿಗೆ, ರೈಲಿನಿಂದ ಇಳಿದ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದ ಬ್ಯಾಗ್ ಒಂದು ಸಿಕ್ಕಿದೆ. ಬ್ಯಾಗ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ₹4,900 ಮೌಲ್ಯದ ಔಷಧಗಳು, ಕನ್ನಡಕ, ಮೌಸ್ ಮತ್ತು ವೈ-ಫೈ ಸಾಧನ ಹಾಗೂ ಸುಮಾರು ₹2 ಲಕ್ಷ ಮೌಲ್ಯದ ಲ್ಯಾಪ್ಟಾಪ್ ಸೇರಿದಂತೆ ಒಟ್ಟು ₹2,04,900 ಮೌಲ್ಯದ ವಸ್ತುಗಳಿರುವುದು ಕಂಡುಬಂದಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ RPF ಅಧಿಕಾರಿಗಳು, @RPF_INDIA ವರದಿ ಮಾಡಿದಂತೆ, ಆ ಬ್ಯಾಗ್ ಅನ್ನು ಸುರಕ್ಷಿತವಾಗಿ ಅದರ ಮಾಲೀಕರಿಗೆ ತಲುಪಿಸಿದ್ದಾರೆ.
ಇದನ್ನೂ ಓದಿ : ನರ್ಸರಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ https://malenadutoday.com/school-bus-accident-today/
Rpf officers


