ಪೆರೇಡ್​ ವೇಳೆ ಅಸ್ವಸ್ಥಳಾದ ವಿದ್ಯಾರ್ಥಿನಿ : ನೆರವಿಗೆ ಧಾವಿಸಿದ ಡಾ. ಧನಂಜಯ ಸರ್ಜಿ

prathapa thirthahalli
Prathapa thirthahalli - content producer

Dr. Dhananjaya Sarji ಶಿವಮೊಗ್ಗದ ನೆಗರು ಕ್ರೀಡಾಂಗಣದಲ್ಲಿ   79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪೆರೇಡ್​ ವೇಳೆ 3 ಮಕ್ಕಳು ಅಸ್ವಸ್ಥರಾಗಿ ದಿಡೀರ್  ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ವಿಧಾನ ಪರಿಷತ್​ ಸದಸ್ಯ ಡಾ ಧನಂಜಯ ಸರ್ಜಿ ತಕ್ಷಣ ಕಾರ್ಯ ಮಕ್ಕಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

Dr. Dhananjaya Sarji ಸುಮಾರು 12 ವರ್ಷಗಳ ಬಳಿಕ ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ,  3 ಬಿದ್ಯಾರ್ಥಿಗಳು ಅಸ್ವಸ್ಥರಾಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ನೆರವಿಗೆ ಬಂದ ಡಾ. ಧನಂಜಯ ಸರ್ಜಿ ಅವರು ಅಸ್ವಸ್ಥರಾದ ಬಾಲಕಿಯನ್ನು ಸರ್ಕಾರಿ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಆಕೆಯನ್ನು ಮಾತನಾಡಿಸಿ, ಯಾವುದೇ ತೊಂದರೆ ಇಲ್ಲ ಎಂದು ಧೈರ್ಯ ತುಂಬಿದ್ದಾರೆ.

- Advertisement -
Dr. Dhananjaya Sarji
Dr. Dhananjaya Sarji

ಈ ಘಟನೆಯ ಕುರಿತು ಮಾತನಾಡಿದ ಡಾ. ಧನಂಜಯ ಸರ್ಜಿ, “ಅಸ್ವಸ್ಥಳಾದ ಬಾಲಕಿ ಸ್ವಲ್ಪಕಾಲ ಒದ್ದಾಡುತ್ತಿದ್ದಳು, ಉಸಿರಾಡಲು ಕಷ್ಟಪಡುತ್ತಿದ್ದಳು. ಇದು ಆತಂಕ ಮತ್ತು ಒತ್ತಡದಿಂದ ಉಂಟಾದ ಗಾಬರಿಯಿಂದ ಆಗಿರುತ್ತದೆ. ಹೆಚ್ಚು ಹೊತ್ತು ಒಂದೇ ಕಡೆ ನಿಂತಿರುವುದು ಮತ್ತು ಸಾಕಷ್ಟು ನೀರು ಕುಡಿಯದಿರುವುದು ಇಂತಹ ಪರಿಸ್ಥಿತಿಗೆ ಕಾರಣವಾಗಬಹುದು. ಅಸ್ವಸ್ಥರಾದವರನ್ನು ತಕ್ಷಣ ಎತ್ತಿಕೊಂಡು ಹೋಗಬಾರದು. ಬದಲಾಗಿ, ಅವರನ್ನು ಸಮತಟ್ಟಾದ ಜಾಗದಲ್ಲಿ ಮಲಗಿಸಿ ಕಾಲುಗಳನ್ನು ಸ್ವಲ್ಪ ಎತ್ತರಕ್ಕೆ ಇಡಬೇಕು. ಇದರಿಂದ ಮೆದುಳು ಮತ್ತು ಹೃದಯಕ್ಕೆ ರಕ್ತ ಸಂಚಾರ ಸರಾಗವಾಗುತ್ತದೆ” ಎಂದು ತಿಳಿಸಿದ್ದಾರೆ. 

ಈ ಹಿಂದೆ ಜಿಲ್ಲಾ ಪಂಚಾಯತ್ ಸಭೆಯೊಂದರಲ್ಲಿ ಐಎಎಸ್ ಅಧಿಕಾರಿ ಕಾವೇರಿ ಅಸ್ವಸ್ಥರಾದಾಗಲೂ ಡಾ. ಧನಂಜಯ ಸರ್ಜಿ ಅವರು ಇದೇ ರೀತಿ ಪ್ರಥಮ ಚಿಕಿತ್ಸೆ ನೀಡಿದ್ದರು.

Malenadu Today

Dr. Dhananjaya Sarji

Share This Article
1 Comment

Leave a Reply

Your email address will not be published. Required fields are marked *