ತುಂಗಾ ಸೇತುವೆ ಬಳಿ ಲಿಂಕ್​ ಕಳಚಿಕೊಂಡ ತಾಳಗುಪ್ಪ-ಮೈಸೂರು ರೈಲಿನ ಬೋಗಿಗಳು! ಏನಾಯ್ತು

ajjimane ganesh

Thalaguppa ಶಿವಮೊಗ್ಗ, malenadu today news : ತಾಳಗುಪ್ಪ ಟು ಮೈಸೂರು ಟ್ರೈನ್​ವೊಂದರ ಬೋಗಿಗಳ ನಡುವಿನ ಲಿಂಕ್​ ಕಟ್ಟಾಗಿ, ಟ್ರೈನ್​ನ ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​ ಬಳಿಯಲ್ಲಿ ಸಂಭವಿಸಿದೆ. 

Malenadu Today

- Advertisement -

ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್​ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. 

Malenadu Today

ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಇವತ್ತು ಬೋಗಿಗಳು ಬೇರ್ಪಟ್ಟರೂ ಯಾವುದೇ ಅಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ರೈಲ್ವೆ ಬೋಗಿಗಳು ಬೇರ್ಪಟ್ಟ ಬೆನ್ನಲ್ಲೆ, ಅದನ್ನು ಗಮನಿಸಿದ ಲೋಕೋ ಪೈಲೆಟ್​ ತಕ್ಷಣ ರೈಲನ್ನು ನಿಲ್ಲಿಸಿದರು. 

Malenadu Today

ಬಳಿಕ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ದೌಡಾಯಿಸಿದ್ದು, ಬೋಗಿಗಳನ್ನು ಮತ್ತೆ ಸೇರಿಸುವ ಕೆಲಸದಲ್ಲಿ ನಿರತರಾದರು. ಅಷ್ಟೊತ್ತಿಗಾಗಲೇ ಮಲ್ಲೇಶ್ವರ ಕ್ರಾಸಿಂಗ್​ನಲ್ಲಿ ನಿಂತಿದ್ದ ಬೋಗಿಗಳನ್ನು ನೋಡುತ್ತಾ, ಏನಾಯ್ತು ಎಂದು ವಿಚಾರಿಸುವವರ ಸಂಖ್ಯೆ ಎಲ್ಲೆ ಮೀರಿತ್ತು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಸ್ಥಳದಿಂದ ತೆರಳುವಂತೆ ಮಾಡಿದರು. 

Malenadu Today

ಇನ್ನೂ ಸುಮಾರು ಮುಕ್ಕಾಲು ಗಂಟೆಯ ಕಾರ್ಯಾಚರಣೆ ನಡೆಸಿ ರೈಲ್ವೆ ಸಿಬ್ಬಂದಿಗಳು ಲಿಂಕ್​ ತಪ್ಪಿದ್ದ ಬೋಗಿಗಳನ್ನು ಸೇರಿಸಿದರು. ಅಂತಿಮವಾಗಿ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳಸಿತು. ಇಷ್ಟರೊಳಗೆ ಜನರು ತುಂಗಾ ನದಿಯ ಸಮೀಪದಲ್ಲಿಯೇ ಇಷ್ಟೆಲ್ಲಾ ನಡೆದಿದ್ದನ್ನು ನೆನೆದು, ಸದ್ಯ ಏನು ಆಗಲಿಲ್ಲ ಎಂದು ನಿಟ್ಟಿಸಿರು ಬಿಟ್ಟರು. ಒಟ್ಟಾರೆ ಘಟನೆಯಲ್ಲಿ ಅನ್ ಕಪ್ಲಿಂಗ್ ಆಗಿ ತಾಳಗುಪ್ಪ- ಮೈಸೂರು ರೈಲಿನ ಆರು ಬೋಗಿಗಳು ಕಳಚಿಕೊಂಡಿದ್ದವು. 

 

View this post on Instagram

 

A post shared by KA on line (@kaonlinekannada)

Thalaguppa-Mysuru Train Carriages Break Apart Near Shivamogga.

Malenadu Today

Share This Article
Leave a Comment

Leave a Reply

Your email address will not be published. Required fields are marked *