Jail ಸಾಗರ, ಶಿವಮೊಗ್ಗ, malenadutoday.com : ಸಾಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಘಾತವೆಸಗಿದ ವ್ಯಕ್ತಿಗೆ ಸಾಗರದ ಜೆಎಂಎಫ್‌ಸಿ ಕೋರ್ಟ್ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ವಿವರ ಹೀಗಿದೆ. 2018ರ ಜನವರಿ 14 ರಂದು ನಡೆದಿದ್ದ ಅಪಘಾತ ಪ್ರಕರಣದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕನಿಗೆ, ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯವು ಒಂದುವರೆ ವರ್ಷಗಳ ಜೈಲು ಶಿಕ್ಷೆ ಮತ್ತು ₹9,000 ದಂಡ ವಿಧಿಸಿದೆ.

Jail ಅಂದು ನಡೆದಿದ್ದು ಏನು?
ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಗಿರೀಶ್ ಅವರು ವೇಗವಾಗಿ ಕಾರು (car) ಚಲಾಯಿಸಿಕೊಂಡು ಬಂದು, ತ್ಯಾಗರ್ತಿ ಬಳಿ ಚೇತನ್ ರಾಡ್ರಿಗಸ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ಚೇತನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಸಾಗರ ಟೌನ್ ಸ್ಟೇಷನ್ ಪೊಲೀಸರು ಈ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಇನ್ನೂ ಜೆಎಂಎಫ್‌ಸಿ ಕೋರ್ಟ್ನಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಮಾದೇಶ್ ಎಂ. ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ವಕೀಲರಾದ ಚಂದ್ರಶೇಖರ್ ಎಚ್.ಎಸ್. ವಾದ ಮಂಡಿಸಿದ್ದರು.
