mla Gururaj Ganti Hole / ಹೊಸನಗರದಲ್ಲಿ ಅಪಘಾತಕ್ಕೀಡಾದ ಬೈಂದೂರು ಶಾಸಕರ ಕಾರು/ 3 ವಾಹನಗಳ ನಡುವೆ ಡಿಕ್ಕಿ

ajjimane ganesh

mla Gururaj Ganti Hole ಶಿವಮೊಗ್ಗ: ಬೈಂದೂರು ಶಾಸಕರ ಕಾರುಗಳ ಸರಣಿ ಅಪಘಾತ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ

Shivamogga news ಶಿವಮೊಗ್ಗ, ಜೂನ್ 21, 2025: ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ (MLA Gururaj Ganti Hole) ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿರುವ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಕೋಡೂರು ಎಂಬಲ್ಲಿ ನಿನ್ನೆ ದಿನ (ಜೂನ್ 20, ಶುಕ್ರವಾರ) ಸಂಜೆ ಈ ಅಪಘಾತ ಸಂಭವಿಸಿದೆ.

mla Gururaj Ganti Hole

- Advertisement -

ಘಟನೆ ವಿವರ:

ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಅವರ ಕಡೆಯವರು ಒಟ್ಟು ಮೂರು ಕಾರುಗಳಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಶಾಸಕರಿದ್ದ ಕಾರಿನ ಮುಂದಿದ್ದ ಕಾರಿಗೆ ಜಾನುವಾರು ಒಂದು ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಮೂರು ಕಾರುಗಳು ಒಂದಕ್ಕೊಂದು ಡಿಕ್ಕಿಯಾಗಿವೆ. ಈ ಘಟನೆಯಲ್ಲಿ ಶಾಸಕರು ಪ್ರಯಾಣಿಸುತ್ತಿದ್ದ ಮೂರು ಕಾರುಗಳು ಸಣ್ಣ ಪ್ರಮಾಣದಲ್ಲಿ ಜಖಂಗೊಂಡಿವೆ. 

ಅದೃಷ್ಟವಶಾತ್, ಈ ಅಪಘಾತದಲ್ಲಿ ಶಾಸಕರಿಗಾಗಲಿ ಅಥವಾ ಅವರೊಂದಿಗೆ ಪ್ರಯಾಣಿಸುತ್ತಿದ್ದವರಿಗಾಗಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. 

 

Share This Article
1 Comment

Leave a Reply

Your email address will not be published. Required fields are marked *