theft case : 14 ಲಕ್ಷ ರೂಪಾಯಿ ಮೌಲ್ಯದ ಬಂಗಾರ ದೋಚಿದ್ದ ಕಳ್ಳ ಈಗ ಪೊಲೀಸರ ಬಲೆಗೆ

prathapa thirthahalli
Prathapa thirthahalli - content producer

ಮಹಿಳೆಯೊಬ್ಬರ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಶಿಕಾರಿಪುರ ಟೌನ್ ಪೊಲೀಸರು ಬಂಧಿಸಿದ್ದಾರೆ.

theft case : ಏನಿದು ಪ್ರಕರಣ 

2025 ರ ಜನವರಿಯಂದು ಶಿಕಾರಿಪುರ ಟೌನ್​ನ​  ಮಹಿಳೆಯೊಬ್ಬರ ಮನೆಗೆ ಯಾರೋ ಕಳ್ಳರು ನುಗ್ಗಿದ್ದರು. ಹಾಗೆಯೇ ಬೀರುವಿನಲ್ಲಿಟ್ಟಿದ್ದ 184 ಗ್ರಾಂ ತೂಕದ 14 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಹಿನ್ನೆಲೆ ಶಿಕಾರಿಪುರ ಪಟ್ಟಣ​ ಪೊಲೀಸರು ಕಳ್ಳನ ಪತ್ತೆಗಾಗಿ ತಂಡ ರಚಿಸಿದ್ದರು.

ಈಗ ಆ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದು, ಅಭಿಷೇಕ ಗೌಡ ಬಿ.ಜೆ, (25) ಎಂಬ ಆರೋಪಿಯಿಂದ 184 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.

TAGGED:
Share This Article