sigandur bridge : ಸಿಗಂದೂರು ಸೇತುವೆ ಮೇಲೆ ಆಂಬ್ಯುಲೆನ್ಸ್ ಸಂಚಾರ | ಮಾನವೀಯತೆ ಮೆರೆದ ಕಾರ್ಮಿಕರು
sigandur bridge : ಹುಷಾರಿಲ್ಲದ ರೋಗಿಯೊಬ್ಬರನ್ನು ಸಿಂಗಂದೂರು ಸೇತುವೆ ಮೂಲಕ ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗೆ ಅವಕಾಶ ಮಾಡಿಕೊಟ್ಟಿರುವ ಘಟನೆ ನಡೆದಿದೆ.
ಸಂಸದ ಬಿವೈ ರಾಘವೇಂದ್ರ ಹೇಳಿದಂತೆ ಸಿಂಗದೂರು ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಜುಲೈ ಅಂತ್ಯಕ್ಕೆ ಸೇತುವೆ ಉದ್ಘಾಟನೆ ಗೊಳ್ಳಲಿದೆ. ಇದರ ನಡುವೆ ಉದ್ಘಾಟನೆಗೂ ಮುನ್ನ ರೋಗಿಯೊಬ್ಬರಿಗೆ ಚಿಕಿತ್ಸೆ ಕೊಡಿಸಲು ಈ ಸೇತುವೆ ನೆರವಾಗಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿರುವ ಜನರಿಗೆ ಅಪಘಾತ ಸೇರಿದಂತೆ ಇನ್ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ತೆರಳಬೇಕಾದರೆ ಕೊಳಬಾಗಿಲು ಲಾಂಚ್ನ ಮೂಲಕ ಹೋಗಬೇಕು. ಆ ಲಾಂಚ್ನಲ್ಲಿ ಹೋಗಬೇಕಾದರೆ ಸರಿಸುಮಾರು 2 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಸೇತುವೆ ಮೂಲಕ ವಾಹನದಲ್ಲಿ ತೆರಳಲು 40 ನಿಮಿಷ ಸಾಕು. ಇದರ ನಡುವೆ ನಿನ್ನೆ ಕರೂರು ನಿವಾಸಿ ಕೃಷ್ಣಮೂರ್ತಿ ಎಂಬುವವರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. ಈ ಹಿನ್ನಲೆ ತಕ್ಷಣ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದಾರೆ. ಆರೋಗ್ಯ ಸಮಸ್ಯೆ ತೀವ್ರಗೊಂಡಿದ್ದರಿಂದ ಲಾಂಚ್ನಲ್ಲಿ ಹೋದರೆ ಹೆಚ್ಚು ಸಮಯವಾಗುತ್ತದೆ ಎಂದು ಭಾವಿಸಿದ ಆಂಬ್ಯುಲೆನ್ಸ್ ಚಾಲಕ ಗಂಗಾಧರ್ ಸೇತುವೆಯಲ್ಲಿ ಸಂಚರಿಸಲು ಕಾಮಗಾರಿಯ ಕೆಲಸಗಾರರ ಅನುಮತಿ ಪಡೆದಿದ್ದಾರೆ. ಹಾಗೆಯೇ ಕೇವಲ 40 ನಿಮಿಷಗಳಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಕೃಷ್ಣಪ್ಪ ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಕೃಷ್ಣಮೂರ್ತಿಯವರ ಸೊಸೆ ಚೈತ್ರ ಮಾತನಾಡಿ ಇದೊಂದು ಸೇತುವೆ ನಮಗೆ ಅನಿವಾರ್ಯವಾಗಿತ್ತು. ನಾವು ಲಾಂಚ್ನಿಂದ ಆಸ್ಪತ್ರೆಗೆ ಬರಬೇಕಾದರೆ 2 ಗಂಟೆ ಸಮಯ ಬೇಕಿತ್ತು. ಆದರೆ ಸೇತುವೆ ಮೂಲಕ ಅತಿ ಕಡಿಮೆ ಸಮದಲ್ಲಿ ಆಸ್ಪತ್ರೆಗೆ ಬಂದು ತಲುಪಿದ್ದೆವು. ಇದೊಂದು ಸೇತುವೆ ನಿರ್ಮಾಣಕ್ಕಾಗಿ ಅನೇಕ ವರ್ಷಗಳಿಂದ ಹಲವಾರ ಹೋರಾಟಗಳನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದರು. ಪ್ರಸ್ತುತ ಆ ಸೇತುವೆಯ ಕನಸು ಈಗ ನೆರವೇರುತ್ತಿದೆ. ಅದಕ್ಕಾಗಿ ಹೋರಾಟ ಮಾಡಿದ ಎಲ್ಲಾ ಹಿರಿಯರಿಗೂ ಹಾಗೂ ರಾಜಕೀಯ ಮುಖಂಡರಿಗೂ ಧನ್ಯವಾದಗಳು. ಹಾಗೆಯೇ ಸೇತುವೆ ಉದ್ಘಾಟನೆಗೂ ಮುನ್ನ ಸೇತುವೆ ಮೇಲೆ ಸಂಚರಿಸಲು ಅವಕಾಶ ಮಾಡಿಕೊಟ್ಟ ಕಾರ್ಮಿಕರಿಗೆ ಧನ್ಯವಾದಗಳು ಎಂದರು.
