shivamoggaUpdates / G pay ನಲ್ಲಿ ಮಗು ಮಾರಾಟ/ ನ್ಯಾಮತಿ, ರಾಗಿಗುಡ್ಡ, ಬೊಮ್ಮನಕಟ್ಟೆ ಯುವಕರು ಅರೆಸ್ಟ್/ ಆಗುಂಬೆಯಲ್ಲಿ ಅಪಘಾತ

Malenadu Today

shivamoggaUpdates ಶಿವಮೊಗ್ಗದ ಬೊಮ್ಮನಕಟ್ಟೆಯಿಂದ ಬಸವಗಂಗೂರು ಕಡೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಇಎನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ರಾಗಿಗುಡ್ಡ ಶಾಂತಿನಗರದ ನಿವಾಸಿ ಸಿ.ಆಕಾಶ ಅಲಿಯಾಸ್‌ ಮಚ್ಚೆ (20), ದಾವಣಗೆರೆ ಜಿಲ್ಲೆಯ ನ್ಯಾಮತಿಯ ವಿ.ದರ್ಶನ್ (22), ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿಗಳಾದ ವಿ.ಕೇಶವ (21) ಹಾಗೂ ಎಂ.ನಾಗರಾಜ (21) ಬಂಧಿತ ಆರೋಪಿಗಳು.  ಆರೋಪಿಗಳಿಂದ ₹ 20,000 ಮೌಲ್ಯದ 1.25 ಕೆ.ಜಿ ಗಾಂಜಾ  ಸೀಜ್ ಮಾಡಲಾಗಿದೆ.  

https://vijaykarnataka.com/news/karnataka/karnataka-rains-heavy-rains-to-hit-6-districts-including-bengaluru-city-tumkur-here-is-the-weather-forecast/articleshow/121074282.cms Bhadravati news today
Bhadravati news today

#shivamoggaUpdates /ಗೂಗಲ್​ ಪೇ ಮೂಲಕ ಮಗು ಮಾರಾಟ

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಗೂಗಲ್​ ಪೇ ಮೂಲಕ ಮಾರಾಟವಾಗಿದ್ದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ, ಮಗುವನ್ನು ರಕ್ಷಿಸಿದೆ.  ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗುವನ್ನು ದಂಪತಿಯೊಬ್ಬರು ಖರೀದಿಸಿದ್ದರು. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ಬಂದಿತ್ತು. 2023ರ ಆಗಸ್ಟ್‌ 15ರಂದು ಜನಿಸಿದ್ದ ಹೆಣ್ಣು ಮಗುವನ್ನು 2025ರ ಜನವರಿ ತಿಂಗಳಲ್ಲಿ ಸುಮಾರು 79 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಪೊಲೀಸರು ಮಗುವನ್ನು ಪುನಃ ಪೋಷಕರ ಮಡಿಲಿಗೆ ಒಪ್ಪಿಸಿದೆಯಷ್ಟೆ ಅಲ್ಲದೆ child trafficking ವಿರುದ್ಧ  ಪೊಲೀಸರಿಗೆ ದೂರು ನೀಡಿದೆ. 

#ShivamoggaNews/ ಆಗುಂಬೆ ಸಮೀಪ ಅಪಘಾತ 

ಇತ್ತ ತೀರ್ಥಹಳ್ಳಿ ಆಗುಂಬೆ ಸಮೀಪ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ನವದಂಪತಿ ಸೇರಿ ಮೂವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅರೇಕಲ್‌ ಕ್ರಾಸ್‌ ಬಳಿ ಘಟನೆ ಸಂಭವಿಸಿದೆ. ನವವಧು ನಾಗರತ್ನ, ಅವರ ತಾಯಿ ಗೀತಾ, ಅಜ್ಜಿ ರಾಧಮ್ಮ ಗಾಯಗೊಂಡಿದ್ದಾರೆ. ಮಂದಾರ್ತಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ಕುರಿತಾಗಿ ಆಗುಂಬೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಆಗಿದೆ. 

#ShivamoggaNews #shivamoggaUpdates

Share This Article