hero splendor ev bike price / ಬರಲಿದೆ ಹೀರೋ ಸ್ಪ್ಲೆಂಡರ್ EV ಬೈಕ್! ಬೆಲೆ, ರೇಂಜ್?

Malenadu Today

hero splendor ev bike price / ನಮ್ಮ ಜನರಿಗೆ ಸ್ಪ್ಲೆಂಡರ್ ಬೈಕ್​ ಅಂದರೆ ಅದೇನೋ ಒಂಥರಾ ಅಟ್ರಾಕ್ಷ್ಯನ್​, ಅದರ ರಿಸೇಲ್​ ವ್ಯಾಲ್ಯು ಜಾಸ್ತಿ ಇದೆ ಅಂತನೋ ಅಥವಾ ಇನ್ನೆನೋ ಕಾರಣಕ್ಕೋ ಸ್ಪ್ಲೆಂಡರ್​ ವಾಹನಗಳಿಗೆ ಕಳ್ಳಕಾಕರರ ಭಯವೂ ಜಾಸ್ತಿ. ಸದ್ಯ ನಾವ್ ಹೇಳೋದಕ್ಕೆ ಬಂದಿರೋದು, 2027 ರ ವೇಳೆಗೆ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಜನರ ಕೈ ಸೇರಲಿದೆ ಅನ್ನೋ ವಿಚಾರವನ್ನು, ಬಹುಶಃ ಈ ಬೈಕ್​ ಭಾರತದ EV ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರಲಿದೆ.

hero splendor ev bike price/ಹೀರೋ ಸ್ಪ್ಲೆಂಡರ್ EV ಬೈಕ್ 2027: ಬೆಲೆ, ರೇಂಜ್

ಭಾರತದ ಪ್ರಮುಖ ಟು ವೀಲ್ಹರ್​ ತಯಾರಕರಾದ ಹೀರೋ ಮೋಟೋಕಾರ್ಪ್, (hero motocorp share price) ಇವಿ ವಿಭಾಗದಲ್ಲಿ ತನ್ನ ಐಕಾನಿಕ್ ಸ್ಪ್ಲೆಂಡರ್ ಬೈಕ್‌ನ ಹೊಸ ಇವಿ ಆವೃತ್ತಿಯನ್ನು ರಿಲೀಸ್ ಮಾಡುತ್ತಿದೆ. ದೇಶದಲ್ಲಿ ಹಲವು ವರ್ಷಗಳಿಂದ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಅಂದರೆ ಸ್ಪ್ಲೆಂಡರ್​​. ಈ ಕಾರಣಕ್ಕಾಗಿ ಇದೇ ಬೈಕ್​ನ್ನ ಇವಿ ಆವೃತ್ತಿಯಲ್ಲಿ ರಿಲೀಸ್ ಮಾಡಲು ಪ್ರಯತ್ನ ನಡೆಯುತ್ತಿದೆ.

hero splendor ev bike price #HeroSplendor ಹೀರೋ-ಸ್ಪ್ಲೆಂಡರ್-ev-ಬೈಕ್-2027-ಪ್ರೀವ್ಯೂ
#HeroSplendor ಹೀರೋ-ಸ್ಪ್ಲೆಂಡರ್-ev-ಬೈಕ್-2027-ಪ್ರೀವ್ಯೂ

ಹೀರೋ-ಸ್ಪ್ಲೆಂಡರ್-ev-ಬೈಕ್-2027

ಜೈಪುರದಲ್ಲಿರುವ ಹೀರೋದ ಮುಂದುವರಿದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದಲ್ಲಿ ಸುಮಾರು ಎರಡು ವರ್ಷಗಳಿಂದ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೈಕ್ ಅಭಿವೃದ್ಧಿ ಹಂತದಲ್ಲಿದೆ. ಸದ್ಯ AEDA ಎಂಬ ಸಂಕೇತನಾಮ ಹೊಂದಿರುವ ಬೈಕ್​ ಸದ್ಯದಲ್ಲಿಯೇ ಹೊಸ ಹೆಸರು ಫಿಕ್ಸ್ ಆಗಲಿದೆ. ಈ ವಾಹನದ ಮೂಲಕ ಕಂಪನಿ ತನ್ನ ಮಾರುಕಟ್ಟೆಯನ್ನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಬರುವ ವರ್ಷ ಅಂದರೆ, 2027 ರಲ್ಲಿ ಈ ಬೈಕ್​ನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ .

ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ 2027ರಲ್ಲಿ ಬಿಡುಗಡೆಯಾಗಲಿದೆ!150km ರೇಂಜ್, ಅಗ್ಗದ ಬೆಲೆ

ಎಲೆಕ್ಟ್ರಿಕ್ ಸ್ಪ್ಲೆಂಡರ್ ಜೊತೆಗೆ, ಹೀರೋ ಹೆಚ್ಚು ಬಜೆಟ್ ಸ್ನೇಹಿ VIDA ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರು ಮಾಡುತ್ತಿದೆ. ಈ ಹೊಸ ಇವಿ ವೆಹಿಕಲ್​ ಪೆಟ್ರೋಲ್ ಸ್ಕೂಟರ್‌ಗಳ ಬೆಲೆಯನ್ನೆ ಹೊಂದಿದೆ. ಮೇಲಾಗಿ ಯುವಕರಿಗಾಗಿ 150 ಸಿಸಿ–250 ಸಿಸಿ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಸಮಾನವಾದ ಎಲೆಕ್ಟ್ರಿಕ್ ಬೈಕ್‌ಗಳನ್ನು ತಯಾರು ಮಾಡುತ್ತಿದೆ. ಇದು ದೊಡ್ಡ ಬ್ರಾಂಡ್ ಸೃಷ್ಟಿಸುವಾ ಅವಕಾಶ ಇದೆ.

hero splendor ev bike price /#HeroSplendor / ಹೀರೋ ಸ್ಪ್ಲೆಂಡರ್​

Share This Article