SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 10, 2025
ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಪತ್ರಕರ್ತರ ಜೀವಮಾನದ ಸಾಧನೆಗಾಗಿ ಪಿ ಲಂಕೇಶ್ ಪ್ರಶಸ್ತಿ ಹಾಗೂ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏಪ್ರಿಲ್ 14 ರಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಸಂಜೆ 5:30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರೆಸ್ ಟ್ರಸ್ಟ್ನ ಅಧ್ಯಕ್ಷರಾದ ಎನ್ ಮಂಜುನಾಥ್ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೋವಿಡ್ ಬಂದಾಗಿನಿಂದ ಈ ಪ್ರಶಸ್ತಿಯನ್ನು ಕೊಡಲು ಸಾದ್ಯವಾಗಿರಲಿಲ್ಲ ಆದ್ದರಿಂದ 3 ವರ್ಷದ ಪ್ರಶಸ್ತಿಯನ್ನು ಈ ಬಾರಿ ಪ್ರಧಾನ ಮಾಡುತ್ತಿದ್ದೇವೆ. ಅನೇಕ ಪತ್ರಕರ್ತರು ಪತ್ರಿಕೋದ್ಯಮಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಹಾಗಾಗಿ ಅಂಥಹ ಹಿರಿ ಪತ್ರಕರ್ತರ 30 ವರ್ಷದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿದ್ದೇವೆ ಎಂದರು.
ಈ ಬಾರಿ ಮೂವರು ಹಿರಿಯ ಪತ್ರಕರ್ತರಿಗೆ ಪಿ ಲಂಕೇಶ್ ಪ್ರಶಸ್ತಿ ಹಾಗೂ ಇಬ್ಬರಿಗೆ ಕ್ರೀಯಾ ಶೀಲ ಪತ್ರಕರ್ತ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಪಿ ಲಂಕೇಶ್ 2022 ನೇ ಸಾಲಿನ ಪ್ರಶಸ್ತಿಯನ್ನು ಕನ್ನಡಪ್ರಭದ ವಿಶೇಷ ವರದಿಗಾರರಾದ ಗೋಪಾಲ್ ಯಡಗೆರೆ, 2023 ನೇ ಸಾಲಿನ ಪ್ರಶಸ್ತಿಯನ್ನು ಶಿವಮೊಗ್ಗ ಟೈಮ್ಸ್ನ ಸಂಪಾದಕರಾದ ಎಸ್ ಚಂದ್ರಕಾಂತ್ ಹಾಗೂ 2024 ನೇ ಸಾಲಿನ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕದ ವರದಿಗಾರರಾದ ಕೆ ತಿಮ್ಮಪ್ಪರವರಿಗೆ ನೀಡಲಿದ್ದೇವೆ ಎಂದರು.
ಕ್ರಿಯಾಶೀಲ ಪತ್ರಕರ್ತ 2023 ನೇ ಸಾಲಿನ ಪ್ರಶಸ್ತಿಯನ್ನು ತೀರ್ಥಹಳ್ಳಿಯ ನೆಲದ ಧ್ವನಿ ಡಿಜಿಟಲ್ ಮೀಡಿಯಾ ಸಂಪಾದಕರಾದ ಶಿವಾನಂದ ಕರ್ಕಿ ಹಾಗು 2024 ನೇ ಸಾಲಿನ ಪ್ರಶಸ್ತಿಯನ್ನು ಸೊರಬದ ಕನ್ನಡ ಪ್ರಭದ ವರದಿಗಾರರಾದ ಹೆಚ್ ಕೆ ಎಸ್ ಸ್ವಾಮಿಯವರು ಪಡೆಯಲಿದ್ದಾರೆ ಎಂದರು.
ಈ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗು ಚಿಂತಕರಾದ ನಾಡೋಜ ಕುಂ.ವೀರಭದ್ರಪ್ಪ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಬಿ ಎಲ್ ಶಂಕರ್ ಆಗಲಿಸಲಿದ್ದು, ಗೌರವ ಉಪಸ್ಥಿತರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಇರಲಿದ್ದಾರೆ. ಹಾಗೆಯೇ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಪ್ರಸ್ ಟ್ರಸ್ಟ್ ನ ಅಧ್ಯಕ್ಷರಾದ ಎನ್ ಮಂಜುನಾಥ್ ವಹಿಸಲಿದ್ದಾರೆ.
ಪಿ ಲಂಕೇಶ್ ಪ್ರಶಸ್ತಿ ಮೊತ್ತ 20 ಸಾವಿರ ಹಾಗು ಕ್ರಿಯಾಶೀಲ ಪತ್ರಕರ್ತರ ಪ್ರಶಸ್ತಿಯ ಬಹುಮಾನ ಮೊತ್ತ 10 ಸಾವಿರ ನಗದು ಬಹುಮಾನ, ಫಲಕ ಹಾಗೂ ಸನ್ಮಾನ ವಿರುತ್ತದೆ ಎಂದು ತಿಳಿಸಿದರು.
SUMMARY | Shimoga Press Trust presents P Lankesh Award for lifetime achievement of journalists and Active Journalist Award
KEYWORDS | Shimoga Press Trust, P Lankesh, Active Journalist, award,