SHIVAMOGGA | MALENADUTODAY NEWS | ಮಲೆನಾಡು ಟುಡೆ Oct 31, 2024
ಶಿವಮೊಗ್ಗ ಪೊಲೀಸರು ಗಾಂಜಾ ವಿರುದ್ಧದ ರೇಡ್ ಮುಂದುವರಿಸಿದ್ದಾರೆ. ಇದಕ್ಕೆ ಪೂರಕವಾಗಿ ಭದ್ರಾವತಿಯಲ್ಲಿ ಹೊಳೆಹೊನ್ನೂರು ಕ್ರಾಸ್ ಬಳಿ ದಾಳಿ ನಡೆಸಿರುವ ಪೊಲೀಸರು ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಲ್ಲಿನ ಪೊಲೀಸರು ಹೊಳೆ ಹೊನ್ನೂರು ಕ್ರಾಸ್‌ನಿಂದ ಸೀಗೆಬಾಗಿ ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನ ಬಂಧಿಸಿದ್ದಾರೆ. ಅಲ್ಲದೆ ಅವರಿಂದ ಒಂದು ಕೆಜಿಗೂ ಅಧಿಕ ತೂಕದ ಗಾಂಜಾ ಸೀಜ್ ಮಾಡಿದ್ದಾರೆ.
ಇಲ್ಲಿನ ಖಾಲಿ ಜಾಗದಲ್ಲಿ 2 ದ್ವಿಚಕ್ರವಾಹನದಲ್ಲಿ ಆರೋಪಿಗಳು ಗಾಂಜಾ ಮಾರುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಲಭ್ಯವಾಗುತ್ತಲೇ ಸ್ಥಳಕ್ಕೆ ತೆರಳಿ ರೇಡ್ ನಡೆಸಿದ್ದಾರೆ. ಈ ದಾಳಿಯಲ್ಲಿ ಮಂಗಳೂರಿನ ಓರ್ವ ಸೇರಿದಂತೆ ಒಟ್ಟು ಮಂದಿ ಸೆರೆಯಾಗಿದ್ದಾರೆ.

ಬಂಧಿತರು
1) ನವೀನ್ @ ನವೀನ್ ಬಾಬು ಬಿ @ ಬಿ ಡಿ ನವೀನ, 24 ವರ್ಷ ಕೃಷ್ಣಾಪುರ ಮಂಗಳೂರು,
2) ದರ್ಶನ್, 19 ವರ್ಷ, ಕಾಳಿಂಗನಹಳ್ಳಿ ಭದ್ರಾವತಿ,
3) ವಿಷ್ಣು ಗವಾಡೆ ಎಂ ವಿ @ಬೆಣ್ಣೆ 24 ವರ್ಷ, ಕಂಚಿಬಾಗಿಲು ಭದ್ರಾವತಿ,
4) ಮಂಜು @ ಸಣ್ಣ ಮಂಜ @ ಮಂಜುನಾಥ, 24 ವರ್ಷ ಹೊಸಮನೆ ಭದ್ರಾವತಿ,
5) ಸಚಿನ್ ಎಸ್, 23 ವರ್ಷ, ಸಿಡಕನಹಳ್ಳಿ, ಚಿಕ್ಕಮಗಳೂರು,
6) ಪ್ರಸಾದ್ ಎಸ್, 23 ವರ್ಷ, ಹೊಸಮನೆ ಭದ್ರಾವತಿ ಇ
ಈ ಆರೋಪಿಗಳಿಂದ ಅಂದಾಜು ಮೌಲ್ಯ 30,000/- ರೂ ಗಳ ಒಟ್ಟು 1 ಕೆಜಿ 300 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ 20(b)(ii)(B) NDPS ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
SUMMARY | Old Town police conducted a raid at Bhadravathi in Shivamogga district and arrested six persons from Mangaluru, Chikkamagaluru and Bhadravathi in connection with the sale of ganja. Seegebagi Road, Holehonnur Cross,
KEYWORDS | Old Town police conducted a raid ,Bhadravathi in Shivamogga districtMangaluru, Chikkamagaluru , Bhadravathi, ganja. Seegebagi Road, Holehonnur Cross,