SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 22, 2024
ದಾವಣಗೆರೆಯಲ್ಲಿ ನಡೆದ ಗಲಾಟೆಯ ಪ್ರಕರಣದ ಸಂಬಂಧ ದಾಖಲಾಗಿರುವ ಒಂದು ಎಫ್ಐಆರ್ನ ಅಡಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕ ಸತೀಶ್ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಶಿವಮೊಗ್ಗದ ಸಾಗರದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ದಾವಣಗೆರೆಯ ಪೊಲೀಸ್ ನಿನ್ನೆ ರಾತ್ರಿಯೇ ಸತೀಶ್ ಪೂಜಾರಿಯವರನ್ನ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಚೋದನಾಕಾರಿ ಭಾಷಣಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಪೂಜಾರಿ ವಿರುದ್ಧ ಕೇಸ್ ದಾಖಲಾಗಿದೆ. ಅಲ್ಲದೆ ಇದೀಗ ಅವರನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶರತ್ ಪಂಪ್ವೆಲ್ಗೆ ನಿರ್ಬಂಧ
ಇನ್ನೊಂದೆಡೆ ಶಿವಮೊಗ್ಗದ ಮೂಲಕ ಚಿತ್ರದುರ್ಗಕ್ಕೆ ಹೊರಟಿದ್ದ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಸಹಕಾರದರ್ಶಿಯಾದ ಶರಣ್ ಪಂಪ್ ವೆಲ್ ಅವರನ್ನು ಚಿತ್ರದುರ್ಗ ಪೊಲೀಸರು ಶಿವಮೊಗ್ಗದಲ್ಲಿಯೇ ತಡೆದು ವಾಪಸ್ ಕಳುಹಿಸಿದ್ದಾರೆ.
ಪ್ರಿವೆಂಟಿವ್ ಮೇಜರ್ ನೋಟಿಸ್ ಅಡಿಯಲ್ಲಿ ಅವರಿಗೆ ಚಿತ್ರದುರ್ಗಕ್ಕೆ ಪ್ರವೇಶ ನೀಡಲಾಗುದು ಎಂದ ಪೊಲೀಸರು ಅವರನ್ನ ಪುರಲೆ ಬಳಿ ತಡೆದು ವಾಪಸ್ ಮಂಗಳೂರಿಗೆ ತೆರಳುವಂತೆ ಸೂಚಿಸಿದ್ದಾರೆ.
ಚಿತ್ರದುರ್ಗದಲ್ಲಿ ನಿಗದಿಯಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಶರತ್ ಪಂಪ್ವೆಲ್ ಹೊರಟಿದ್ದರು. ಅವರನ್ನ ತಡೆದಿದ್ದು ಸರಿಯಾದ ಕ್ರಮವಲ್ಲ ಪೊಲೀಸರ ಖಂಡಿಸುವುದಾಗಿ ಬಜರಂಗದಳದ ಶಿವಮೊಗ್ಗ ವಿಭಾಗದ ಸಂಯೋಜಕ ರಾಜೇಶ್ ಗೌಡ ತಿಳಿಸಿದ್ದಾರೆ.