SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 Dr.H.S.Bhojyanaik, Professor
ಪ್ರೊಫೇಸರ್ ಹೆಚ್.ಎಸ್ ಭೋಜಾನಾಯ್ಕ್ ವಿರುದ್ಧದ ಆರೋಪಗಳು ನಿರಾಧಾರ ಎಂದು ತನಿಖೆ ನಡೆಸಿರುವ ಸರ್ಕಾರವೇ ಅಧಿಕೃತವಾಗಿ ಷರಾ ಬರೆದಿರುವಾಗ ಅವರ ವಿರುದ್ಧದ ಷಡ್ಯಂತ್ರಗಳು ಮಾತ್ರ ನಿಲ್ಲುತ್ತಿಲ್ಲವೇಕೆ ಜೆಪಿ ಬರೆಯುತ್ತಾರೆ
Dr.H.S.Bhojyanaik, Professor
ಪ್ರೊಪೇಸರ್ ಹೆಚ್ ಎಸ್ ಭೋಜಾನಾಯ್ಕ್. ಕುವೆಂಪು ವಿಶ್ವವಿದ್ಯಾನಿಯದಲ್ಲಿ ಹಲವು ವರ್ಷಗಳಿಂದ ವಿವಾದದಲ್ಲಿರುವ ಹೆಸರು. ಅವರ ವಿರುದ್ಧ ಕಪ್ಪು ಚುಕ್ಕೆಗಳು ಗರಿಗೆದರುವಂತೆ ಮಾಡುವಲ್ಲಿ ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ .ಭೋಜಾನಾಯ್ಕ್ ಹಾಗು ನಿವೃತ್ತ ಕುಲಪತಿ ಜೋಗನ್ ಶಂಕರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಟಿಸಿಲೊಡೆಯುತ್ತಿದ್ದಂತೆ ಅದಕ್ಕೆ ಧ್ವನಿಗೂಡಿಸಿದವರೆ ಹೆಚ್ಚು. ಭ್ರಷ್ಟಾಚಾರ ನಡೆದಿದ್ದರೂ ನಡೆದಿರಬಹುದು ಎಂದು ಹೇಳಿದ ಸ್ನೇಹಿತರೇ ಹೆಚ್ಚು.
ಆದರೆ ಭೋಜಾನಾಯ್ಕ್ ವಿರುದ್ಧದ ಆರೋಪಗಳೆಲ್ಲಾ ಸುಳ್ಳು ಎಂದು ತನಿಖೆ ನಡೆಸಿರುವ ಸಾಂವಿಧಾನಿಕ ಹುದ್ದೆಯಲ್ಲಿರುವ ತನಿಖಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಹೌದು ಸಂಘನೆಯೊಂದು ಪ್ರೊಫೆಸರ್ ಭೋಜಾನಾಯ್ಕ್ ಹಾಗು ನಿವೃತ ಕುಲಪತಿ ಜೋಗನ್ ಶಂಕರ್ ವಿರುದ್ಧ ಕುವೆಂಪು ವಿವಿಯ ವಿವಿಧ ಕಟ್ಟಡಗಳ ಕಾಮಗಾರಿ, ಮರಕಡಿತಲೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಮಾಡಿದಾಗ ಅಂದಿನ ಎಸಿಬಿ ಮಹಾನಿರ್ದೇಶಕರು, ಪ್ರಾಥಮಿಕ ತನಿಖೆ ಕೈಗೊಳ್ಳಲು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ತನಿಖೆ ನಡೆಸಲು ಅನುಮತಿ ನೀಡಿತು. ಆಗ ನಿವೃತ್ತ ನ್ಯಾಯಾಧೀಶರಾದ ರವಿಂದ್ರನಾಥ್ ಹೆಚ್.ಬಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಯಿತು.ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿದ ರವಿಂದ್ರನಾಥ್ ರವರು ಸರ್ಕಾರಕ್ಕೆ 17-07-23 ರಂದು ಸರ್ಕಾರಕ್ಕೆ ಪ್ರಾಥಮಿಕ ತನಿಖಾ ವರದಿಯನ್ನು ನೀಡುತ್ತಾರೆ.
ವರದಿಯಲ್ಲಿರುವಂತೆ ಹೇಳುವುದಾದರೆ ಪ್ರೊಫೆಸರ್ ಭೋಜ್ಯಾನಾಯ್ಕ್ ,ಔದ್ಯೋಗಿಕ ರಸಾಯನ ಶಾಸ್ತ್ರ ಮತ್ತು ಪ್ರೊಫೆಸರ್ ಜೋಗನ್ ಶಂಕರ್, ನಿವೃತ್ತ ಕುಲಪತಿಗಳು ಇವರುಗಳ ವಿರುದ್ಧ ಮಾಡಿರುವ ದೂರುಗಳ ಆಪಾದನೆಗಳಲ್ಲಾಗಲಿ ,ನನ್ನ ಪ್ರಾಮಾಣಿಕ ತನಿಖಾ ಪ್ರಯತ್ನದಲ್ಲಿ ಹಾಗೆ ಮೇಲ್ನೋಟಕ್ಕೆ ಯಾವುದೇ ಸತ್ಯಾಂಶ ಇರುವುದು ಕಂಡುಬಂದಿರುವುದಿಲ್ಲ.
ಅಂದರೆ ಮೇಲೆ ಹೇಳಿದ ಆರೋಪದಲ್ಲಿ ಸದರಿ ಅಧಿಕಾರಿಗಳ ದುರ್ನಡತೆ ಅಥವಾ ನಿಯಮ ಬಾಹಿರ ಕೃತ್ಯ ಎಸಗದೆ,ಬದಲಾಗಿ ಸರ್ಕಾರ,ವಿಶ್ವವಿದ್ಯಾನಿಲಯದ ನಿಯಮಗಳಿಗುಣವಾಗಿ ಕರ್ತವ್ಯ ನಿರ್ವಹಿಸಿ, ವಿಶ್ವವಿದ್ಯಾನಿಲಯದ ಅಧಿಕಾರಿಗೆ,ತಕ್ಕದಲ್ಲದ ರೀತಿಯಲ್ಲಿ ನಡೆದುಕೊಳ್ಳದೆ, ನ್ಯಾಯ ನಿಷ್ಟೂರವಾಗಿ ನಿಯಮಾನುಸಾರ,ಸಕ್ಷಮ ಪ್ರಾಧಿಕಾರದ ನಿಯಮಗಳಿಗನುಗುಣವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆಂದು, ನಾನು ಅಭಿಪ್ರಾಯ ಪಟ್ಟು,ಅದರಂತೆ ಈ ವರದಿಯನ್ನು ಘನ ಸರ್ಕಾರದ ಅವಗಾಹನೆಗೆ ಮತ್ತು ಮುಂದಿನ ಕ್ರಮಕ್ಕಾಗಿ ಎಲ್ಲಾ ದಾಖಲೆಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ ಎಂದು ರವಿಂದ್ರನಾಥ್ ವರದಿ ನೀಡಿದ್ದಾರೆ.
ಇದಾದ ನಂತರ ರವಿಂದ್ರ ನಾಥ್ ವರದಿಯ ಬಗ್ಗೆ ಸರ್ಕಾರ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ವರದಿ ಕಳಿಹಿಸಿತು. ಕಾನೂನು ಇಲಾಖೆ ಮಂಡಿಸಿದ ಅಭಿಪ್ರಾಯ ಈ ರೀತಿ ಇದೆ. ಪ್ರಸ್ಥಾಪಿತ ದೂರು ಅರ್ಜಿಗಳಲ್ಲಿ ಒಟ್ಟು 07 ತನಿಖಾಂಶಗಳ ಬಗ್ಗೆ ತನಿಖಾಧಿಕಾರಿ ಕಾರಣಗಳನ್ನು ನಮೂದಿಸಿರುತ್ತಾರೆ. ಸದರಿ ಕಾರಣಗಳನ್ನು ಗಮನಿಸಿದಾಗ ಸಿಂಡಿಕೇಟ್ ಸಭೆಯ ನಡಾವಳಿಗಳಲ್ಲಿ ನಮೂದಿಸಿದ ಸಂಗತಿಗಳನ್ನು ಆದರಿಸಿ ಪ್ರಾಥಮಿಕ ವಿಚಾರಣಾ ವರದಿಯನ್ನು ಸಲ್ಲಿಸಿದ್ದು ಕಂಡು ಬರುತ್ತದೆ.
ಈ ವಿಷಯಗಳಿಗೆ ಸಂಬಂಧಿಸಿದ ಸಿಂಡಿಕೇಟ್ ಸಭೆಯ ನಡಾವಳಿಗಳನ್ನು ತನಿಖಾಧಿಕಾರಿ ನಿಶಾನೆ ಪಿ44, 44(ಎ) 44(ಬಿ), ನಿಶಾನೆ 05, 5(ಸಿ) ಮತ್ತು 5(ಡಿ) ಎಂದು ಗುರುತಿಸಿಕೊಂಡು ಆ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿರುತ್ತಾರೆ. ಕಾರಣ, ಪ್ರಕರಣವನ್ನು ಮುಕ್ತಾಯಗೊಳಿಸಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಮತ್ತು ಅರಣ್ಯ ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ(ಸೆವೆಗಳು) ಇವರಿಗೆ ಮಾಹಿತಿ ನೀಡಬಹುದಾಗಿರುತ್ತದೆ ಎಂದು ಅಭಿಪ್ರಾಯಿಸಿರುತ್ತಾರೆ.
ಮೇಲ್ಕಂಡ ವಾಸ್ತವಾಂಶಗಳ ಹಿನ್ನಲೆಯಲ್ಲಿ ಪ್ರೊಫೆಸರ್ ಭೋಜಾನಾಯ್ಕ್ ಪ್ರಾಧ್ಯಾಪಕರು ಔದ್ಯೋಗಿಕರಸಾಯನ ಶಾಸ್ತ್ರ ವಿಭಾಗ. ಕುವೆಂಪು ವಿವಿ ಮತ್ತು ಪ್ರೊಫೆಸರ್ ಜೋಗನ್ ಶಂಕರ್ ನಿವೃತ್ತ ಕುಲಪತಿಗಳು ಕುವೆಂಪು ವಿವಿ ಇವರುಗಳ ವಿರುದ್ಧ ದಾಖಲಾದ ದೂರುಗಳ ಪ್ರಕರಣದಲ್ಲಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವಿಂದ್ರನಾಥ್ ಹೆಚ್ ಬಿ ಅವರು ನೀಡಿರುವ ವರದಿ ಹಾಗು ನ್ಯಾಯ ಮತ್ತು ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ ನೀಡಿರುವ ಅಭಿಪ್ರಾಯದನ್ವಯ ಸರ್ಕಾರದ ಹಂತದಲ್ಲಿ ಅಂತಿಮವಾಗಿ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಏನಿದೆ ಎನ್ನುವುದನ್ನ ಇಲ್ಲಿ ಗಮನಿಸಬಹುದು
ಸರ್ಕಾರದ ಆದೇಶದಲ್ಲಿ ಏನಿದೆ
ಸರ್ಕಾರಿ ಆದೇಶ ಸಂ: ಇಡಿ 09 ಯುಎಸ್‌ವಿ 2021, ಬೆಂಗಳೂರು, ದಿನಾಂಕ: 22.09.2023 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈ ಸಂಬಂಧ ಸಲ್ಲಿಕೆಯಾಗಿರುವ ದೂರಿನನ್ವಯ ಪೊಲೀಸ್ ಅಧೀಕ್ಷಕರು (ಕೇಂದ್ರಸ್ಥಾನ), ಅವರ ಪೊಲೀಸ್ ಮಹಾನಿರ್ದೇಶಕರು, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು, ಇವರ ದಿನಾಂಕ:15-02-2021ರ ಪತ್ರ ಮತ್ತು ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ (ಸೇವೆಗಳು), ರವರ ಅನಧಿಕೃತ ಟಿಪ್ಪಣಿ ಸಂಖ್ಯೆ:ಅಪಜೀ 103 ಅಇವಿ 2020 ದಿನಾಂಕ: 03-11-2020ಗಳ ಮೂಲಕ ಪ್ರೊ. ಭೋಜ್ಯಾನಾಯ್, ಪ್ರಾಧ್ಯಾಪಕರು, ಔದ್ಯೋಗಿಕ ರಸಾಯನ ಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಪ್ರೊ. ಜೋಗನ್ ಶಂಕರ್, ನಿವೃತ್ತ ಕುಲಪತಿಗಳು ಕುವೆಂಪು ವಿಶ್ವವಿದ್ಯಾನಿಲಯ, ಇವರುಗಳ ವಿರುದ್ಧ ಸರ್ಕಾರದಲ್ಲಿ ದಾಖಲಾದ ದೂರುಗಳಿಗೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರರಾದ ಶ್ರೀ ರವಿಂದ್ರನಾಥ ಹೆಚ್.ಬಿ. ಇವರು ನೀಡಿರುವ ವರದಿನುಸಾರ ಆಪಾದನೆಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿಲ್ಲದಿರುವುದು ಕಂಡುಬಂದಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಿದೆ. ಈ ಆದೇಶವನ್ನು ಕಾನೂನು ಇಲಾಖೆಯ ಟಿಪ್ಪಣಿ ಸಂಖ್ಯೆ O: LAW/194/OPN/2023, ದಿನಾಂಕ 16.09.2023ರಲ್ಲಿ ನೀಡಿರುವ ಅಭಿಪ್ರಾಯದನ್ವಯ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹೊರಡಿಸಲಾಗಿದೆ.
ಸರ್ಕಾರದ ಮಟ್ಟದಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಮಗ್ರ ತನಿಖೆ ನಡೆಸಿ, ನೀಡಿರುವ ವರದಿ ಸುಳ್ಳಾಗಲು ಸಾಧ್ಯವೇ. ಸುಖಾಸುಮ್ಮನೆ ಬೋಜಾನಾಯ್ಕರನ್ನು ಭ್ರಷ್ಟರನ್ನಾಗಿ ಮಾಡಿ, ಸಮಾಜದಲ್ಲಿ ತೇಜೋವಧೆ ಮಾಡಲು ಯತ್ನಿಸಿದ ವ್ಯವಸ್ಥೆಗೆ ಈ ಅಧಿಕೃತ ವರದಿ ಸೂಕ್ಷಿಭೂತವಾದರೆ ಸಾಕು, ಈ ಎಲ್ಲಾ ತನಿಖಾ ವರದಿಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಗುಪ್ತ ಇಲಾಖೆಯ ಮಾಹಿತಿ ತರಿಸಿಕೊಂಡೇ ಬೋಜಾನಾಯ್ಕ್ ರಿಗೆ ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಲಾಗಿದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ