SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ನೆರೆಯ ಆಂದ್ರಕ್ಕೆ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಚಿಕ್ಕಜಾಜೂರು ಜಂಕ್ಷನ್‌ಗೆ ರೈಲು ಒದಗಿಸುವಂತೆ ಪ್ರಸ್ತಾವನೆಯೊಂದನ್ನ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರರವರು ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣರಿಗೆ ಸಲ್ಲಿಸಿದ್ದಾರೆ.
ಮಲೆನಾಡು ಶಿವಮೊಗ್ಗದಿಂದ ಚಿತ್ರದುರ್ಗ, ಕಲ್ಯಾಣ ಕರ್ನಾಟಕದ ಜಿಲ್ಲೆ ಹಾಗೂ ಆಂಧ್ರ ಪ್ರದೇಶಕ್ಕೆ ಸಂಪರ್ಕಿಸುವ ಮಾರ್ಗವೂ ಸುತ್ತು ಬಳಸಿ ಹೋಗುವಂತಿದೆ. ಇದಕ್ಕಾಗಿ ಎರಡು ರೈಲು ಬದಲಿಸುವ ಅನಿವಾರ್ಯತೆ ಇದೆ.


ಹೀಗಾಗಿ ಭದ್ರಾವತಿ- ಚಿಕ್ಕಜಾಜೂರು ನಡುವೆ ನೂತನ ಮಾರ್ಗ ನಿರ್ಮಿಸಿದಲ್ಲಿ ಸಂಚಾರ ಸುಲಭ ಆಗಲಿದೆ ಎಂದು ಮನವಿ ಸಲ್ಲಿಸಿರುವ ಸಂಸದರು, ಈ ನಿಟ್ಟಿನಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕ ಏರ್ಪಟ್ಟು ಸಂಚಾರ ಸುಗಮವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್‌ಎಲ್)ಗೆ ಸಂಡೂರು ರಮಣದುರ್ಗದಿಂದ ಅದಿರು ಸಾಗಿಸಲು ಸಲ ಅನಕೂಲವಾಗಲಿದೆ ಎಂದಿರು ಬಿವೈಆರ್ ಈ ಸಂಬಂಧ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.
SUMMARY | MP BY Raghavendra’s request to Minister of State for Railways V Somanna for construction of a new railway line between Bhadravati and Chikkajajur
KEY WORDS |MP BY Raghavendra request to Minister of State for Railways V Somanna , construction of a new railway line between Bhadravati and Chikkajajur