SHIVAMOGGA | MALENADUTODAY NEWS | ಮಲೆನಾಡು ಟುಡೆ Jan 20, 2025
ಶಾಲೆಗೆ ಹೋಗುವ ಮಕ್ಕಳ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯಾದರು ಎಚ್ಚೆತ್ತುಕೊಳ್ಳಿ, ಏಕೆಂದರೆ ಈಗಿನ ಮಕ್ಕಳ ಮೇಲೆ ಬೀಳುವ ಪೋಷಕರ ಒತ್ತಡ ಅವರನ್ನು ಮನೆ ಬಿಟ್ಟು ಹೋಗುವಂತೆ ಮಾಡಬಹುದು. ಇದಕ್ಕೆ ಸಾಕ್ಷಿ ಎನ್ನುವಂಥಹ ಘಟನೆಯೊಂದು ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿನ ರೈಲ್ವೆ ಪೊಲೀಸರು ಮನೆ ಬಿಟ್ಟು ಬಂದಿದ್ದ ಬಾಲಕನೊಬ್ಬನನ್ನು ರಕ್ಷಣೆ ಮಾಡಿದ್ದಷ್ಟೆ ಅಲ್ಲದೆ ಆತನನ್ನು ವಿಚಾರಿಸಿ ಸಮಾಧಾನ ಪಡಿಸಿ, ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ವಹಿಸಿದ್ದಾರೆ.
ನಡೆದಿದ್ದೇನು?
ಕಳೆದ ಜನವರಿ 16 ನೆ ತಾರೀಖು ಶಿವಮೊಗ್ಗ ರೈಲ್ವೆ ಪೊಲೀಸ್ ASI ಶ್ರೀನಿವಾಸ್ ಹಾಗೂ ಕಾನ್‌ಸ್ಟೇಬಲ್ ಈರೇಶಪ್ಪ ಹಾಗೂ ಹೋಮ್‌ಗಾರ್ಡ್ ಪಂಪಾಪತಿಯವರು ರೌಂಡ್ಸ್‌ನಲ್ಲಿದ್ದರು. ಈ ವೇಳೇ ಪ್ಲಾಟ್‌ಫಾರಮ್ ನಂ 1 ಮೇಲೆ ಬಾಲಕನೊಬ್ಬ ಒಬ್ಬನೆ ಕುಳಿತಿರುವುದು ಕಂಡು ಬಂದಿದೆ. ಕ್ಷಣಕಾಲ ಅಲ್ಲಿಯೇ ನಿಂತ ಮೂವರು ಸಿಬ್ಬಂದಿ ಬಾಲಕನ ವರ್ತನೆಯನ್ನು ಗಮನಿಸಿದ್ದಾರೆ. ಈ ವೇಳೆ ಬಾಲಕನ ಹಾವಭಾವದಲ್ಲಿ ವ್ಯತ್ಯಾಸ ಕಂಡು ಬಂದಿದೆ. ತಕ್ಷಣವೇ ಅಲರ್ಟ್ ಆಗಿ ಆತನನ್ನು ಕರೆದುಕೊಂಡು ತಮ್ಮ ಕಚೇರಿಗೆ ಬಂದಿದ್ದಾರೆ.
ಕೆಲವು ಹೊತ್ತು ಬಾಲಕ ಸುದಾರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ರೈಲ್ವೆ ಪೊಲೀಸರು ಬಳಿಕ ಆತನನ್ನು ಯಾರು? ಏಲ್ಲಿಯವನು? ಏನಾಯ್ತು ಎಂದೆಲ್ಲಾ ವಿಚಾರಿಸಿದ್ದು, ಪ್ರತಿಯಾಗಿ ಬಾಲಕ ತನಗೆ ಶಾಲೆಗೆ ಹೋಗಲು ಆಗುತ್ತಿಲ್ಲ, ನನಗೆ ಶಾಲೆ ಬಗ್ಗೆ ಆಸಕ್ತಿಯಿಲ್ಲ ಎಂದಿದ್ದಾನೆ. ಮುಂದುವರಿದು, ಪೋಷಕರು ಶಾಲೆಗೆ ಹೋಗು ಎಂದು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಮನೆಯಿಂದ ಹೊರಟು ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಇಷ್ಟೆ ಅಲ್ಲದೆ ಬಾಲಕ ತನ್ನೂರಿಗೆ ತಾನು ಹೋಗುವುದಿಲ್ಲ, ಮತ್ತೆ ಶಾಲೆಗೂ ಹೋಗುವುದು ಇಲ್ಲ ಎಂದಿದ್ದಾನೆ.
ಹೀಗಾಗಿ ಆತನನ್ನು ಕಾನೂನು ಪ್ರಕ್ರಿಯೆ ಬಾಗವಾಗಿ ಮಕ್ಕಳ ಸಹಾಯವಾಣಿಗೆ ಕರೆಮಾಡಿ, ಸಹಾಯವಾಣಿಯ Counselor ರವರ ಸುಪರ್ಧಿಗೆ ಬಾಲಕನನ್ನು ಒಪ್ಪಿಸಿದ್ದಾರೆ ರೈಲ್ವೆ ಪೊಲೀಸರು. ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಬಾಲಕ ಮಕ್ಕಳ ಕಲ್ಯಾಣ ಸಮಿತಿ (CWC) ಆಶ್ರಯವನ್ನು ಸೇರಿದ್ದಾನೆ. ಸದ್ಯ ರೈಲ್ವೆ ಪೊಲೀಸರ ಸಮಯ ಪ್ರಜ್ಞೆ ಹಾಗೂ ಕಾಳಜಿಯಿಂದಾಗಿ ಬಾಲಕ ಸುರಕ್ಷಿತವಾಗಿದ್ದಾನೆ. ಆದರೆ ಎಲ್ಲಾ ಮಕ್ಕಳಿಗೂ ಹೀಗೆ ಅದೃಷ್ಟ ಕಾಯುತ್ತದೆ ಎನ್ನಲಾಗದು. ಈ ನಿಟ್ಟಿನಲ್ಲಿ ಮಕ್ಕಳ ಚಿಗುರು ಮನಸ್ಸನ್ನು ಮಿತಿದಾಟುವ ಮೊದಲೇ ಪೋಷಕರು ಅರಿತುಕೊಳ್ಳುವ ತುರ್ತು ಅಗತ್ಯವಿದೆ.
ವಿಶೇಷ ಸೂಚನೆ | ಕಾನೂನು ಸಂಘರ್ಷಕ್ಕೆ ಒಳಗಾದ ವಿಚಾರವಾದ್ದರಿಂದ ಬಾಲಕನ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದಿಲ್ಲ. ಸರ್ಕಾರಿ ಸಂಸ್ಥೆಗಳ ಕಾಳಜಿ ಹಾಗೂ ಶ್ರಮವನ್ನು ವಿವರಿಸುವ ಸಲುವಾಗಿ ವರದಿಯನ್ನು ಬಿತ್ತರಿಸಿಲಾಗಿರುತ್ತದೆ.
SUMMARY | Shivamogga railway station railway police rescued a boy who had left home and interrogated him, handed him over to the child welfare department.
KEY WORDS | Shivamogga railway station, railway police rescued a boy, boy left home , child welfare department.