ಶಿವಮೊಗ್ಗ ರೈಲ್ವೆ ಪೊಲೀಸ್ ಆಕ್ಷನ್ | ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ NO 1 ರಲ್ಲಿ ನಿಂತಿದ್ದ ಬಾಲಕ, ಬಾಲಕಿ ರಕ್ಷಣೆ
RPF Shivamogga rescued a minor boy & a girl , PF No. 01 at Shivamogga Railway station
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ಶಿವಮೊಗ್ಗ ರೈಲ್ವೆ ಪೊಲೀಸರು ಇಬ್ಬರು ಅಪ್ರಾಪ್ತರನ್ನ ರಕ್ಷಣೆ ಮಾಡಿದ್ದಾರೆ. ಈ ಪೈಕಿ ಓರ್ವ ಬಾಲಕಿ ಹಾಗೂ ಬಾಲಕ ಇದ್ದಾನೆ. ಈ ಸಂಬಂಧ ರೈಲ್ವೆ ವಿಭಾಗದ Railway Protection Force (RPF) S.W.Railway @rpfswr ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ರೈಲ್ವೆ ಪೊಲೀಸ್ ವಿಭಾಗದ ಮಾಹಿತಿಯಂತೆ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಲ್ಲಿರುವ ಫ್ಲಾಟ್ ನಂಬರ್ 1 ರಂದಲ್ಲಿ ಇಬ್ಬರು ಅಪ್ರಾಪ್ತರನ್ನ ರೈಲ್ವೆ ಪೊಲೀಸರು ಗಮನಿಸಿದ್ದಾರೆ. ಅವರ ಓಡಾಟ ಅನುಮಾನ ಮೂಡಿಸಿದ್ದರಿಂದ ಇಬ್ಬರನ್ನು ಕರೆದು ವಿಚಾರಿಸಿದ್ದಾರೆ. ಆ ಬಳಿಕ ಅವರನ್ನ ರಕ್ಷಣೆ ಮಾಡಿದ್ದಾರೆ. ಬಳಿಕ ಅವರುಗಳನ್ನ ಶಿವಮೊಗ್ಗದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ಧಿಗೆ ಒಪ್ಪಿಸಿದ್ದಾರೆ.
ಆಪರೇನ್ ನನ್ನೆ ಫರಿಸ್ಥೆಯ #OperationNanheFariste ಅಡಿಯಲ್ಲಿ ರೈಲ್ವೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿಸಿದ್ದಾರೆ. ಇದೆ ರೀತಿ ಇತ್ತೀಚೆಗೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿಯು ಅಪ್ರಾಪ್ತರನ್ನು ರಕ್ಷಣೆ ಮಾಡಲಾಗಿತ್ತು.
ಅಪ್ರಾಪ್ತರ ರಕ್ಷಣೆಯ ವಿಷಯದಲ್ಲಿ ಸಂಬಂಧಪಟ್ಟ ರಕ್ಷಣಾತಂಡಗಳ ಕಾರ್ಯಸಾಧನೆಯ ವಿವರ ನೀಡುವ ಸಲುವಾಗಿ ವರದಿ ಪ್ರಕಟಿಸಿಲಾಗಿದ್ದು, ಕಾನೂನಿನ ರಕ್ಷಣೆಯಲ್ಲಿರುವ ಅಪ್ರಾಪ್ತರ ಯಾವುದೇ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಿರುವುದಿಲ್ಲ. ಇದು ಕೇವಲ ರೈಲ್ವೆ ಪೊಲೀಸ್ ಇಲಾಖೆಯ ಟ್ವಿಟ್ಟರ್ ಮಾಹಿತಿ ಆಧರಿತ ವರದಿಯಷ್ಟೆ
#OperationNanheFariste: RPF/ Shivamogga rescued a minor boy & a girl aged about 17 & 16 years on PF No. 01 at Shivamogga Railway station. Further the said minor boy & girl were handed over to CWC/Shivamogga. @RPF_INDIA pic.twitter.com/hlhqDzroTa — Railway Protection Force (RPF) S.W.Railway (@rpfswr) December 22, 2024
SUMMARY | RPF/ Shivamogga rescued a minor boy & a girl aged about 17 & 16 years on PF No. 01 at Shivamogga Railway station.
KEY WORDS | RPF Shivamogga rescued a minor boy & a girl , PF No. 01 at Shivamogga Railway station