SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 24, 2024 shimoga airport
ನಿಂತಿದ್ದ ಇಂಡಿಗೋ ಪ್ಲೈಟ್ ಆರಂಭ
ಈ ನಡುವೆ ಶಿವಮೊಗ್ಗದಿಂದ ಸಂಚಾರ ನಿಲ್ಲಿಸಿದ್ದ ಇಂಡಿಗೋ ಪ್ಲೈಟ್ ಸಹ ಪುನಾರಂಭವಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ವಿಚಾರ ಬಗ್ಗೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ಅವರು , ಇಂಡಿಗೋ ಪ್ಲೈಟ್ ಗೋವಾ ಹಾಗೂ ತಿರುಪತಿ ಸಂಚಾರವನ್ನು ಇಂಡಿಗೋ ಪ್ಲೈಟ್ ಆರಂಭಿಸಿದೆ.
ಇದನ್ನೂ ಸಹ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ | ಲೈಸೆನ್ಸ್ ಬಗ್ಗೆ ಮತ್ತೊಂದು ಬಿಗ್ ಅಪ್ಡೇಟ್ಸ್ ಕೊಟ್ಟ ಸಂಸದ ಬಿ ವೈ ರಾಘವೇಂದ್ರ

ದೆಹಲಿಗೆ ಶುರುವಾಗುತ್ತೆ ಪ್ಲೈಟ್
ಸದ್ಯದಲ್ಲಿಯೇ ಸ್ಪೈಸ್ ಜೆಟ್ ಕೂಡ ಚೆನ್ನೈ ಹಾಗೂ ಹೈದ್ರಾಬಾದ್ಗೆ ಸೇವೆ ಆರಂಭಿಸಲಿದೆ. ಇದು ಸಂತೋಷ ವಿಚಾರ ಎಂದಿರುವ ಅವರು ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕಕ್ಕೆ ಅನುಕೂಲವಾಗಲಿದೆ.
ಇನ್ನೂ ಉಡಾನ್ ಕಾನ್ಸೆಪ್ಟ್ನಲ್ಲಿ ದೆಹಲಿಗೆ ವಿಮಾನ ಹಾರಾಟ ನಡೆಸುವ ಸಂಬಂಧ ಟೆಂಡರ್ ಆಗಿದೆ. ಈ ಸಂಬಂಧ ಪ್ಲೈಟ್ ಆಪರೇಷನ್ ಆರಂಭವಾಗಿಲ್ಲ. ಬರುವ ದಿನಗಳಲ್ಲಿ ಈ ಸಂಬಂಧ ಆಪರೇಷನ್ ಆರಂಭವಾಗಲಿದೆ ಎಂದರು.
ಮುಂಬೈಗೆ ವಿಮಾನ ಯಾವಾಗ?
ಅಂತಿಮವಾಗಿ ಮುಂಬೈಗೆ ಶಿವಮೊಗ್ಗದಿಂದ ವಿಮಾನ ಹಾರಾಟ ಸಂಬಂಧ ಪ್ರಯತ್ನಗಳನ್ನ ನಡೆಸುತ್ತಿದ್ದೇವೆ. ಆದರೆ ಅಲ್ಲಿ ದಿನಕ್ಕೆ ಒಂದು ಸಾವಿರ ಪ್ಲೈಟ್ಗಳು ಓಡಾಡುತ್ತಿವೆ. ಹೀಗಾಗಿ ನಮಗೆ ಟ್ರಾಫಿಕ್ ಕ್ಲಿಯರೆನ್ಸ್ ಅಲ್ಲಿಂದ ಸಿಕ್ಕಿಲ್ಲ. ಇದರಿಂದಾಗಿ ಅಲ್ಲಿಗೆ ಶಿವಮೊಗ್ಗದಿಂದ ಮುಂಬೈಗೆ ವಿಮಾನ ಸಂಚಾರ ವಿಳಂಬವಾಗುತ್ತಿದೆ ಎಂದು ತಿಳಿಸಿದರು.