SHIVAMOGGA | MALENADUTODAY NEWS | ಮಲೆನಾಡು ಟುಡೆ Jan 29, 2025
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ 29 ವರುಷದ ಗರ್ಭಿಣಿಯೊಬ್ಬಳು ಸಾವನ್ನಪ್ಪಿದ್ದು ಈ ವಿಚಾರ ಚರ್ಚೆಗೆ ಕಾರಣವಾಗಿದೆ. ತೀವ್ರ ರಕ್ತಸ್ರಾವದಿಂದ ಒಂದೂವರೆ ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದಾಳೆ. ತಾಲೂಕಿನ ನಗರ ಹೋಬಳಿಯ ದುಬಾರತಟ್ಟೆ ನಿವಾಸಿ ಅಶ್ವಿನಿ ಮೃತರು.
ಸ್ಕಾನಿಂಗ್ ವೇಳೆ ಮಗುವಿನ ಎದೆಬಡಿತ ನಿಂತಿರುವುದು ತಿಳುದು ಯುವತಿಗೆ ಗರ್ಭಪಾತ ಮಾಡಲಾಗಿದೆ. ಈ ವೇಳೆ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಹಾಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ರವಾನಿಸಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆ ಯುವತಿ ಕೊನೆಯುಸಿರೆಳೆದಿದ್ದಾರೆ.
ಸಾಗರ ಉಪ ವಿಭಾಗೀಯ ಆಸ್ಪತ್ರೆ
ಇನ್ನ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಾಗರ ಉಪ ವಿಭಾಗ ಆಸ್ಪತ್ರೆಯ ವೈದ್ಯೆ ಡಾ.ಪ್ರತಿಮಾ, ಅಶ್ವಿನಿ ಅವರು ಜನವರಿ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಸ್ಕ್ಯಾನಿಂಗ್ ಮಾಡಲಾಗಿತ್ತು. ಈ ವೇಳೆ ಶಿಶುವಿನ ಹೃದಯಬಡಿತ ನಿಂತಿರುವ ಕಾರಣ ಗರ್ಭದಲ್ಲಿ ಕಸವನ್ನು ತೆಗೆಯಲಾಯಿತು.
ನಂತರ ಗರ್ಭಿಣಿ ಮಹಿಳೆ ಅಶ್ವಿನಿ ನಡೆದುಕೊಂಡು ಬೆಡ್‌ಗೆ ಹೋಗಿದ್ದಾರೆ. ಒಂದು ಡ್ರಿಪ್ ಮತ್ತು ಇಂಜೆಕ್ಷನ್ ನೀಡಲಾಗಿತ್ತು. ಬಳಿಕ ಡಿಸ್ಟಾರ್ಜನ್ ಮಾಡಿ ಅವರ ಅತ್ತೆ ಕೈಯಿಗೆ ಮೆಡಿಸನ್ ಬರೆದುಕೊಟ್ಟಿದ್ದೇವೆ. ಆನಂತರ ಆಕೆ ಅಸ್ವಸ್ಥಗೊಂಡಿದ್ದಾರೆಂಬ ಮಾಹಿತಿ ಬಂತು. ನಂತರ ಚಿಕಿತ್ಸೆ ನೀಡಲಾಯಿತು. ಅವರು ರಕ್ತ ಹೆಪ್ಪುಗಟ್ಟಿ , ಪಲ್ಸನರಿ ಎಂಬಾಲಿಸಮ್ ಹೃದಯಾಘಾತವಾಗಿರುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದಿದ್ದಾರೆ
SUMMARY | Ashwini, a resident of Dubarathatte in Nagar Hobli of the taluk, died at Sagar Sub-Divisional Hospital.
KEY WORDS | resident of Dubarathatte , Nagar Hobli , Sagar Sub-Divisional Hospital