SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
ಶಿವಮೊಗ್ಗಕ್ಕೆ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರವಾಸ ಕೈಗೊಂಡಿದ್ದಾರೆ. ಇಲಾಖವಾರು ಪ್ರಗತಿ ಪರಿಶೀಲನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಬಂದ ಸಚಿವರು, ನಗರಕ್ಕೆ ಬರುತ್ತಲೇ ಪೌರಕಾರ್ಮಿಕ ಮೂರ್ತಿಯನ್ನು ನೋಡಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೇಟಿನೀಡಿದರು.
ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿ ಆ ಬಳಿಕ ನಾಪತ್ತೆಯಾಗಿದ್ದ ಮೂರ್ತಿ ಸದ್ಯ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಿದ ಸಚಿವ ಸಂತೋಷ್ ಲಾಡ್ Minister Santosh Lad ನಡೆದ ಘಟನೆಯ ಮಾಹಿತಿ ಪಡೆದರು. ಈ ವೇಳೆ ಅವರಿಗೆ ಕಾಂಗ್ರೆಸ್ ಮುಖಂಡರು ಸಹ ಸಾಥ್ ನೀಡಿದರು.
ಇನ್ನೂ ಮೂರ್ತಿಯವರ ಆರೋಗ್ಯ ವಿಚಾರಿಸಿ ವಾಪಸ್ ಆಗುತ್ತಿದ್ದ ಸಚಿವ ಸಂತೋಷ್ ಲಾಡ್‌ರವರಿಗೆ ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆ ಕಾರ್ಮಿಕರೊಬ್ಬರು ಸಚಿವರ ಬಳಿ ತಮಗೆ ಸಂಬಳ ಸಾಲುತ್ತಿಲ್ಲ. ಬರುವ ವೇತನದಲ್ಲಿ ಮನೆ ನಡೆಸುವುದು ಸಹ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರಷ್ಟೆ ಅಲ್ಲದೆ, ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ಕಾಲಿಗೆ ಬಿದ್ದು ಬೇಡಿಕೊಂಡರು. ಇದಕ್ಕೆ ಪ್ರತಿಯಾಗಿ ಸಚಿವರು ಪರಿಶೀಲಿಸುವುದಾಗಿ ಹೇಳಿದರು.
ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯ ನೇತೃತ್ವ ವಹಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧಿಕಾರಿಗಳ ಜೊತೆ, ತಮ್ಮ ಇಲಾಖಾವಾರು ಪ್ರಗತಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.
SUMMARY | Labour Minister Santosh Lad’s tour in Shivamogga, Shivamogga Meggan Hospital, Shivamogga Zilla Panchayat Hall
KEY WORDS | Labour Minister Santosh Lad, tour in Shivamogga, Shivamogga Meggan Hospital, Shivamogga Zilla Panchayat Hall