SHIVAMOGGA | MALENADUTODAY NEWS | ಮಲೆನಾಡು ಟುಡೆ Feb 13, 2025
ಶಿವಮೊಗ್ಗ ಸಿಟಿಗೂ ರ್ಯಾಪಿಡ್ ಬೈಕ್ ಸೇವೆ ಬಂದಿದ್ಯಾ? ಹೀಗೋಂದು ವಿಚಾರ ನಿನ್ನೆದಿನ ದುರ್ಗಿಗುಡಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಆಟೋ ಚಾಲಕರು ತಮಗೆ ನಷ್ಟವಾಗುತ್ತೆ ಎಂದು ರ‍್ಯಾಪಿಡೊ ಬೈಕ್ ಚಾಲಕನನ್ನು ಅಡ್ಡ ಹಾಕಿ ನಿಂತಿದ್ದರು. ಇಷ್ಟಕ್ಕೂ ನಡೆದಿದ್ದೇನು ಎಂಬುದನ್ನು ಗಮನಿಸುವುದಾದರೆ, ನಿನ್ನೆ ದಿನ ದುರ್ಗಿಗುಡಿಯ ರಸ್ತೆಯಲ್ಲಿ ಓಲಾ ಹೆಸರಿನ ರ‍್ಯಾಪಿಡೊ ಕಂಪನಿ ಬೈಕ್ ತನ್ನ ಗ್ರಾಹಕನನ್ನು ಪಿಕಾಪ್ ಮಾಡಲು ಬಂದಿತ್ತು. ಈ ವೇಳೆ ಅದನ್ನು ಅಡ್ಡಗಟ್ಟಿದ ಆಟೋ ಚಾಲಕರು ಶಿವಮೊಗ್ಗದಲ್ಲಿ ಬೈಕ್ ಟ್ಯಾಕ್ಸಿ ಓಡಾಡಿದರೆ ತಮಗೆ ನುಕ್ಸಾನು, ಇದಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದರು. ಅತ್ತ ಬೈಕ್ ಚಾಲಕ ಬೈಕ್ ಟ್ಯಾಕ್ಸಿ ಓಡಿಸುವುದರಿಂದ ನಮ್ಮಂತ ನಿರುದ್ಯೋಗಿಗಳಿಗೆ ಕೆಲಸ ಸಿಕ್ಕಿದೆ ಎಂದು ತನಗೆ ಸಿಕ್ಕ ಅವಕಾಶವನ್ನು ಸಮರ್ಥಿಸಿಕೊಂಡಿದ್ದಾರೆ.
ಆಟೋ ಮೀಟರ್, ದುಬಾರಿ ಬಾಡಿಗೆ ಇತ್ಯಾದಿ ವಿಚಾರಗಳಲ್ಲಿ ಶಿವಮೊಗ್ಗದಲ್ಲಿ ಸಂಚರಿಸುವ ಆಟೋಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಇದರ ನಡುವೆ ರಾಜ್ಯಮಟ್ಟದಲ್ಲಿ ಅನುಮತಿ ಪಡೆದಿರುವ ಬೈಕ್ ಟ್ಯಾಕ್ಸಿ ಸೇವೆಯ ಕಂಪನಿಗಳು ನಿಧಾನಕ್ಕೆ ಎರಡನೇ ಹಂತದ ನಗರಗಳಿಗೂ ಕಾಲಿಡುತ್ತಿವೆ. ಅದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ರ‍್ಯಾಪಿಡೊ ತನ್ನ ಟೆಸ್ಟಿಂಗ್ ಸೇವೆ ಆರಂಭಿಸಿರುವ ಸಾಧ್ಯತೆ ಇದೆ. ಆರಂಭದ 2 ಕಿಲೋಮೀಟರ್‌ಗೆ 20 ರೂಪಾಯಿ, ನಂತರದ ಎರಡು ಕಿಲೋಮೀಟರ್‌ಗೆ 30 ರೂಪಾಯಿ ಬಾಡಿಗೆ ನಿಕ್ಕಿ ಮಾಡಿ ಗ್ರಾಹಕರನ್ನು ಕರೆದೊಯ್ಯುತ್ತಿದ್ದಾರೆ ರ‍್ಯಾಪಿಡೊ ಚಾಲಕರು.
ಇದನ್ನ ವಿರೋಧಿಸಿದ ಆಟೋ ಚಾಲಕರು ತಮಗೆ ನಷ್ಟವಾಗುತ್ತದೆ. ಬಾಡಿಗೆ ಮಾಡುವುದೇ ಕಷ್ಟವಾಗಿರುವ ಕಾಲದಲ್ಲಿ , ರ‍್ಯಾಪಿಡೊ ಸೇವೆ ಆರಂಭವಾದರೆ, ನಮಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎನ್ನುತ್ತಿದ್ದಾರೆ. ಅಲ್ಲದೆ ವೈಟ್ ಬೋರ್ಡ್ ಬೈಕ್‌ನ್ನ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ದೂರಿದ್ದಾರೆ. ಈ ನಡುವೆ ಕೆಲವರು ರ‍್ಯಾಪಿಡೊ ಸೇವೆ ಓಡಾಟದ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ವಿಚಾರ ಹೊಸದಾಗಿ ಚರ್ಚೆ ಆಗುತ್ತಿದ್ದು, ರ‍್ಯಾಪಿಡೊ ಪರ ವಿರೋಧ ಮಾತುಗಳು ಕೇಳಿಬರುತ್ತಿದೆ.
KEY WORDS | rapido controversy in shivamogga