SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ (Tyavarekoppa Tiger and Lion Sanctuary in Shivamogga)ದಲ್ಲಿ ಮತ್ತೊಂದು ವಿಶಿಷ್ಟ ಪ್ರಯೋಗವನ್ನು ಕೈಗೊಳ್ಳಲಾಗುತ್ತಿದೆ. ಬರುವ ತಿಂಗಳು ಅಂದರೆ ಡಿಸೆಂಬರ್ ಹೊತ್ತಿಗೆ ಇಲ್ಲಿನ ವನ್ಯಮೃಗಗಳನ್ನ ಸಫಾರಿ ವಾಹನದಲ್ಲಿಯೇ ಕುಳಿತು ವಿಡಿಯೋಗಳ ಮೂಲಕ ನೋಡಬಹುದಾಗಿದೆ.
ಅಂತಹದ್ದೊಂದು ಅವಕಾಶವನ್ನ ಕಲ್ಪಿಸುವ ನಿಟ್ಟಿನಲ್ಲಿ ಲಯನ್ ಸಫಾರಿಯಲ್ಲಿ ಕೆಲಸಗಳು ಆಗುತ್ತಿವೆ. ಈ ಬಗ್ಗೆ ಮಲೆನಾಡು ಟುಡೆ ಅರಣ್ಯ ಇಲಾಖೆಯಿಂದ ಮಹತ್ವದ ಮಾಹಿತಿಯನ್ನ ಪಡೆದುಕೊಂಡಿದೆ.
ಇಲ್ಲಿ ಸಫಾರಿಗೆ ಬರುವ ಜನರಿಗೆ ಆ ಸಂದರ್ಭದಲ್ಲಿ ವನ್ಯಮೃಗಗಳು ಕಾಣಲು ಸಿಗದೆ ಇರುವ ಪ್ರಸಂಗಗಳು ಬಹಳಷ್ಟಿವೆ. ಹಾಗಾಗಿ ಅವುಗಳ ಚಲನವಲನಗಳನ್ನ ಸೆರೆಹಿಡಿದು ಸಫಾರಿಯ ವಾಹನವೊಂದರಲ್ಲಿ ವಿಡಿಯೋ ತುಣುಕುಗಳ ಮೂಲಕ ತೋರಿಸುವ ಪ್ರಯತ್ನವನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಡ್ಯಾಕ್ಯುಮೆಂಟ್ರಿ ಪ್ರದರ್ಶನ ಸೇರಿದಂತೆ ವಿವಿಧ ವಿಡಿಯೋಗಳನ್ನ ಸಫಾರಿಯ ವಾಹನದಲ್ಲಿ ಪ್ರದರ್ಶಿಸುವ ಯೋಜನೆ ಇದಾಗಿದೆ.
ಇದಕ್ಕಾಗಿ ಎರಡು ಹಳೆಯ ಸಫಾರಿ ವಾಹನಗಳನ್ನ ಸಜ್ಜುಗೊಳಿಸಲಾಗುತ್ತಿದೆ. ಮಿನಿಮಲ್ ಅಮೌಂಟ್‌ನ ಬಂಡಾವಾಳದೊಂದಿಗೆ ವರ್ಚ್ಯುವಲ್ ರಿಯಾಲಿಟಿಯ ರೀತಿಯಲ್ಲಿ ವೃನ್ಯಮೃಗಗಳ ದರ್ಶನವನ್ನು ಜನರಿಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಮೇಲಾಗಿ ಈ ನಿಟ್ಟಿನಲ್ಲಿ ಪ್ರಾಣಿಗಳ ಚಲನವಲನ ಸೆರೆಹಿಡಿಯಲು 360 ಡಿಗ್ರಿ ಕ್ಯಾಮರಾಗಳನ್ನ ಅಳವಡಿಸಲಾಗುತ್ತಿದೆ.
SUMMARY | At Thyavarekoppa Tiger and Lion Sanctuary in Shivamogga, tourists will be able to watch the movement of wild animals through virtual reality in a safari vehicle itself.
KEYWORDS | Thyavarekoppa Tiger and Lion Sanctuary in Shivamogga , watch the movement of wild animals through virtual reality, safari vehicle,