SHIVAMOGGA | MALENADUTODAY NEWS | ಮಲೆನಾಡು ಟುಡೆ Oct 28, 2024
ಶಿವಮೊಗ್ಗ | ಗೃಹಸಚಿವ ಡಾ.ಜಿ ಪರಮೇಶ್ವರ್ ಮಾದಕವಸ್ತುಗಳ ವಿರುದ್ಧ ಹೋರಾಟದ ಬಗ್ಗೆ ಸ್ಟೇಟ್ಮೆಂಟ್ ನೀಡಿದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟದ ಮೇಲೆ ದಾಳಿ ತೀವ್ರಗೊಂಡಿದೆ. ಕಳೆದೊಂದು ವಾರದಲ್ಲಿ ಶಿವಮೊಗ್ಗ ಹಾಗೂ ಭದ್ರಾವತಿ ಸೇರಿದಂತೆ ಹಲವೆಡೆ ಪೊಲೀಸರು ದಾಳಿ ನಡೆಸಿ ಗಾಂಜಾ ಜಪ್ತು ಮಾಡಿದ್ದಾರೆ. ಅಲ್ಲದೆ ಈ ಸಂಬಂಧ ಹಲವರನ್ನ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ಪೊಲೀಸರು ಆಂಧ್ರದಿಂದ ಶಿವಮೊಗ್ಗಕ್ಕೆ ಸಾಗಿಸಿದ್ದ ಗಾಂಜಾವನ್ನ ಸೀಜ್ ಮಾಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ : ಆಂಧ್ರದಿಂದ ಉಡುಪಿ ವ್ಯಕ್ತಿಗೆ ಗಾಂಜಾ ಸಪ್ಲೆ | ಆಗರದಹಳ್ಳಿ ಕ್ಯಾಂಪ್ ಮೇಲೆ ರೇಡ್, ಇಬ್ಬರು ಅರೆಸ್ಟ್
ಇನ್ನೂ DySP ಭದ್ರಾವತಿ SDPO ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿ 5 ಕೆಜಿ 574 ಗ್ರಾಂ ತೂಕದ ಒಣ ಗಾಂಜಾ ಅಮಾನತ್ತು ಪಡಿಸಿಕೊಂಡು NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇತ್ತ DySP CEN ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ 1 ಕೆಜಿ 37 ಗ್ರಾಂ ತೂಕದ ಒಣ ಗಾಂಜಾ & 350 ನಗದು ಹಣ ಅಮಾನತ್ತು ಪಡಿಸಿಕೊಂಡಿದ್ದಾರೆ. ಈ ಸಂಬಂಧ NDPS ಕಾಯ್ದೆ ರೀತ್ಯಾ ಪ್ರಕಣ ದಾಖಲಿಸಿದ್ದಾರೆ.
ಅತ್ತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ 2 ಜನರನ್ನು ದಸ್ತಗಿರಿ ಮಾಡಿ 648 ಗ್ರಾಂ ತೂಕದ ಒಣ ಗಾಂಜಾ & 400 ನಗದು ಹಣ ಅಮಾನತ್ತು ಪಡಿಸಿಕೊಂಡು NDPS ಕಾಯ್ದೆ ರೀತ್ಯಾ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
SUMMARY | raids on drug peddling in Shivamogga district have intensified after Home Minister Dr G Parameshwara made a statement on the fight against drugs. In the last one week, the police have conducted raids at several places including Shivamogga and Bhadravathi and seized ganja. Several people have also been arrested in this connection.
KEYWORDS | raids on drug peddling in Shivamogga district, Home Minister Dr G Parameshwara, fight against drugs, conducted raids, Shivamogga, Bhadravathi ,seized ganja,