ಸಿಟಿಯಲ್ಲಿಯೇ ಗಾಂಜಾ ಸೇಲ್ | ರಾಗಿಗುಡ್ಡದ ದಾಸ, ಬಸವನಗುಡಿ ಜಾನ್ ಅರೆಸ್ಟ್
Shivamogga Rural Police have arrested two persons, both residents of Ragigudda and Basavanagudi, who were selling ganja in Kuvempunagar.
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಮಾದಕವಸ್ತು ಮಾರುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ.
ದಿನಾಂಕಃ 24-10-2024 ರಂದು ಮಧ್ಯಾಹ್ನ ಕುವೆಂಪು ನಗರದಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಮಾಹಿತಿಯನ್ನ ಆಧರಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ. ಈ ವೇಳೆ ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ
ಸಿಕ್ಕಿಬಿದ್ದವರು
1)ಭರತ್ ಟಿ @ ಜಾನ್ ಭರತ್, 27 ವರ್ಷ, ಬಸವನಗುಡಿ ಶಿವಮೊಗ್ಗ
2) ನರಸಿಂಹ ಎಸ್ @ ದಾಸ, 39 ವರ್ಷ, ರಾಗಿಗುಡ್ಡ ಶಿವಮೊಗ್ಗ
ಇನ್ನೂ ಬಂಧಿತರಿಂದ ಇಬ್ಬರು ಆರೋಪಿತರಿಂದ ಅಂದಾಜು ಮೌಲ್ಯ 28,000/- ರೂಗಳ 668 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 400/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 20(b) (ii) A, 8(c) NDPS ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
SUMMARY | Shivamogga Rural Police have arrested two persons, both residents of Ragigudda and Basavanagudi, who were selling ganja in Kuvempunagar.
KEYWORDS | Shivamogga Rural Police, arrested two persons, residents of Ragigudda, Basavanagudi, ganja in Kuvempunagar,