SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 17, 2024
ಶಿವಮೊಗ್ಗದಲ್ಲಿಂದು ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ನಡೆಯಲಿದೆ. ಇದಕ್ಕೂ ಮೊದಲು ಗಣಪತಿಯ ರಾಜಬೀದಿ ಉತ್ಸವ ನಡೆಯಲಿದೆ. ಅದಕ್ಕಾಗಿ ಸಿದ್ದತೆಗಳು ನಡೆದಿದ್ದು, ಪ್ರಕ್ರಿಯೆಗಳು ಆರಂಭವಾಗಿದೆ.
ಈ ನಡುವೆ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮದ್ಯ ಮಾರಾಟ ನಿಷೇದ ಮಾಡಲಾಗಿದೆ. ಹಾಗಿದ್ರೂ ಶಿವಮೊಗ್ಗ ಸಿಟಿಯಲ್ಲಿ ಎಣ್ಣೆ ಭರಪೂರವಾಗಿ ಸಿಗುತ್ತಿದೆ. ಆದರೆ ರೇಟು ದುಪ್ಪಟ್ಟು..
ಸರ್ಕಾರ ಮದ್ಯ ಮಾರಾಟದ ವಿಚಾರದಲ್ಲಿ ಆದಾಯದ ನಿರೀಕ್ಷೆಯಲ್ಲಿದೆ. ಈ ನಡುವೆ ಬಂದೋಬಸ್ತ್ ಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಇದಕ್ಕೆ ಪೂರಕವಾಗಿ ನಿನ್ನೆ ಸಂಜೆಯ ನಗರದ ಎಲ್ಲಾ ವೈನ್ ಶಾಪ್ಗಳನ್ನ ಕ್ಲೋಸ್ ಮಾಡಿಸಲಾಗಿದೆ. ಆದಾಗ್ಯು ಶಿವಮೊಗ್ಗ ಸಿಟಿಯಲ್ಲಿ ಸಲೀಸಾಗಿ ಮದ್ಯ ಸಿಗುತ್ತಿದೆ.
ಶಿವಮೊಗ್ಗ ನಗರದ ಹಳೆಯ ಕೌಂಟರ್ಗಳಲ್ಲಿ ಎಣ್ಣೆ ಸಿಗುತ್ತಿದ್ದು, ತಮ್ಮ ತಮ್ಮ ಮನೆಯಲ್ಲಿ ಮದ್ಯ ಸಂಗ್ರಹಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ.
ಲೋಡ್ ಗಟ್ಟಲೇ ಎಣ್ಣೆ ಮಾರಾಟ ಮಾಡಲಾಗುತ್ತಿದ್ದು ಚೀಪರ್ ಎಣ್ಣೆಗೂ ಇನ್ನೂರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಪುಲ್ ಬಾಟಲಿ ಮೇಲೆ ನಾನೂರು ಐನೂರು ರೂಪಾಯಿ ಜಾಸ್ತಿ ರೇಟು ನಿಗದಿಪಡಿಸಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ನಗರದಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿರುವುದು ಸರಿಯಾದರೂ, ಅಕ್ರಮ ಮಾರಾಟವನ್ನು ಪೂರ್ವಭಾವಿಯಾಗಿ ಬಂದ್ ಮಾಡಿಸಬೇಕಿತ್ತು.
ಇದೀಗ ಅಕ್ರಮ ಮದ್ಯ ಮಾರಾಟ ನಿನ್ನೆ ಸಂಜೆಯಿಂದಲೂ ಜೋರಾಗಿ ನಡೆಯುತ್ತಿದ್ದು, ನೂರು ರೂಪಾಯಿ ಮದ್ಯಕ್ಕೆ ಇನ್ನೂರು ರೂಪಾಯಿ ಕೊಟ್ಟು ಖರೀದಿಸುವ ಹೊರೆ ಗ್ರಾಹಕರಿಗಾದರೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಇನ್ನೊಂದು ಕಡೆ. ಇದರಾಚೆಗೆ ಕೈಗೊಂಡ ಕ್ರಮಕ್ಕೆ ಮದ್ಯ ಮಾರಾಟ ಕೊಳ್ಳಿ ಪೆಟ್ಟು ಇಡುವುದಿಲ್ಲ ಎನ್ನುವದಕ್ಕೆ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ