ಮನೆಯಲ್ಲಿಯೇ ಮದ್ಯ ಮಾರಾಟ ಮಳಿಗೆ ! MSIL ಗಿಂತ ಜೋರು ವ್ಯಾಪಾರ, ತಹಶೀಲ್ದಾರ್​ಗೆ​ ವಿಡಿಯೋ ಸಮೇತ ದೂರು ಕೊಟ್ಟ ಜನ

liquor shop at home! People complain to tehsildar with video, this business bigger than MSIL

ಮನೆಯಲ್ಲಿಯೇ ಮದ್ಯ ಮಾರಾಟ ಮಳಿಗೆ ! MSIL ಗಿಂತ ಜೋರು ವ್ಯಾಪಾರ,  ತಹಶೀಲ್ದಾರ್​ಗೆ​ ವಿಡಿಯೋ ಸಮೇತ ದೂರು ಕೊಟ್ಟ ಜನ
A liquor shop at home! People complain to tehsildar with video, this business bigger than MSIL

SHIVAMOGGA  |  Jan 19, 2024  |  ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಒಂದೊಂದು ಊರಿನಲ್ಲಿ ಒಂದೊಂದು ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಎಷ್ಟರಮಟ್ಟಿಗೆ ಊರಿನವರೇ ತಲೆಕೆಟ್ಟು ಮನವಿ ಪತ್ರ ಹಿಡ್ಕೊಂಡು ತಹಶೀಲ್ದಾರ್ ಕಚೇರಿಗೆ ಓಡಾಡುವಂತಾಗಿದೆ. ಅದರಲ್ಲಿಯು ತೀರ್ಥಹಳ್ಳಿಯಲ್ಲಿ ಎಗ್ಗಿಲ್ಲದೇ ಸಾಗುತ್ತಿರುವ ಎಣ್ಣೆ ಮಾರಾಟ ಜನರನ್ನ ಗಂಭೀರ ಸ್ವರೂಪದಲ್ಲಿ ಭಾದಿಸುತ್ತಿದೆ. 

ಮನೆಮನೆಯಲ್ಲಿಯು ಸಿಗುತ್ತಿದೆ ಎಣ್ಣೆ

ಮನೆಮನೆಯಲ್ಲಿ ನಲ್ಲಿಯ ನೀರು ತಲುಪುತ್ತದೆಯೋ ಇಲ್ಲವೋ ಆದರೆ ಇಲ್ಲೊಂದು ಉರಿನಲ್ಲಿ ಮನೆಗಳಲ್ಲಿ ಎಣ್ಣೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಅದರ ವಿಡಿಯೋ ಸಾಕ್ಷ್ಯಗಳು ಸಹ ಮಲೆನಾಡು ಟುಡೆ ತಂಡಕ್ಕೆ ಲಭ್ಯವಾಗಿದೆ. ಈ ಸಂಬಂಧ ಗ್ರಾಮಸ್ಥರು ತೀರ್ಥಹಳ್ಳಿ ತಹಶೀಲ್ದಾರ್​ಗೂ ಸಹ ದೂರು ಸಲ್ಲಿಸಿ ಎಣ್ಣೆ ಮಾರಾಟ ಬಂದ್ ಮಾಡಿ ಎಂದು ಅಲವತ್ತುಕೊಂಡಿದ್ದಾರೆ. ಅಧಿಕಾರ ವ್ಯವಸ್ಥೆ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ. ಖಾತರಿಯಾಗಬೇಕಿದೆಯಷ್ಟೆ. 

ತೀರ್ಥಹಳ್ಳಿ ತಾಲ್ಲೂಕು ಕಸಬಾ ಹೋಬಳಿ ಯಡೇಹಳ್ಳಿ ಗ್ರಾಮದ ಇಂದಾವರ, ಮಕ್ಕಿಮನೆಯ ವಿಚಾರವಿದು. ಇಲ್ಲಿನ ಜನರು ಎಣ್ಣೆಯ ಹೋಮ್​ ಡೆಲಿವರಿ ಮತ್ತು ಮಾರಾಟದಿಂದ ಸಂತ್ರಸ್ತರಾಗಿದ್ದಾರೆ. ಹೀಗಾಗಿ ಊರಿನವರ ಸಹಿ ಪಡೆದು ತಹಶೀಲ್ದಾರ್ ಗೆ ಒಂದು ಮನವಿ ಪತ್ರ ಕೊಟ್ಟು ಕೈ ಮುಗಿದಿದ್ದಾರೆ.  

ಮನವಿ ಪತ್ರದಲ್ಲಿ ಏನಿದೆ?

ಈ  ಊರಿನಲ್ಲಿರುವ ಮನೆಯೊಂದರಲ್ಲಿ ಭರ್ಜರಿ ಎಣ್ಣೆ ಮಾರಾಟ ಆಗುತ್ತಿದೆ.  ತೀರ್ಥಹಳ್ಳಿ ಪಟ್ಟಣದ ಬಾರ್ ನಲ್ಲಿ ಸಿಗುವ ಎಲ್ಲಾ ರೀತಿಯ ಮಧ್ಯದ ಬಾಟಲನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಮ್ಮ ಊರಿನಲ್ಲಿ ಕೂಲಿ ಮಾಡುವವರಿಗೆ, ಕಾಲೇಜು ವಿಧ್ಯಾರ್ಥಿಗಳಿಗೆ ಪಾನಮತ್ತರಾಗಲು ಅವಕಾಶ ಆಗಿದ್ದು, ಹೆಂಗಸರೂ ಸಹಾ ಪಾನಮತ್ತ ರಾಗಲು ಪ್ರಾರಂಭಿಸಿರುತ್ತಾರೆ. 

ಇದರಿಂದಾಗಿ ಊರಿನಲ್ಲಿ ಅಶಾಂತಿ ಉಂಟಾಗುತ್ತಿದೆ. ಕೂಲಿ ಕೆಲಸ ಮಾಡುವವರು ಕೆಲಸಕ್ಕೆ ಬರುತ್ತೇನೆಂದು ಮುಂಗಡ ಹಣ ಪಡೆಯುತ್ತಾರೆ, ಕೆಲಸಕ್ಕೆ ಸಹಾ ಬೆಳಿಗ್ಗೆ ಬಂದು ಈಗ ಬರುತ್ತೇನೆ ಎಂದು ಹೇಳಿ ಹೋಗಿ ಪಾನಮತ್ತರಾಗಿ ಕೆಲಸಕ್ಕೂ ಬರುವುದಿಲ್ಲ. ಮುಂಗಡ ನೀಡಿದ ಹಣವೂ ಹಿಂದಕ್ಕೆ ಬರುವುದಿಲ್ಲ.

ಅಪ್ರಾಪ್ತ ವಯಸ್ಸಿನ ಮಕ್ಕಳು ಸಹಾ ಪಾನಮತ್ತರಾಗಲು ಪ್ರಾರಂಬಿಸಿರುತ್ತಾರೆ, ಅದೂ ಅಲ್ಲದೇ, ಕೂಲಿ ಕೆಲಸ ಮಾಡುವ ಹೆಂಗಸರೂ ಸಹಾ ಪಾನಮತ್ತರಾಗುತ್ತಿದ್ದಾರೆ. ಇದರಿಂದ ಬಡ ಕುಟುಂಬವು ಬೀದಿಗೆ ಬರುವಂತಾಗಿರುತ್ತದೆ.

ಈ ವಿಚಾರವು ತೀರ್ಥಹಳ್ಳಿ ಅಬಕಾರಿ ಇಲಾಖೆ ಗಮನಕ್ಕೆ ತಂದರೂ ಸಹಾ ಅವರು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಆದ್ದರಿಂದ ತಾವು ದಯಮಾಡಿ ಸಂಬಂಧಪಟ್ಟ ಇಲಾಖೆ ಮೂಲಕ ತನಿಖೆ ನಡೆಸಿ  ಮನೆಯಲ್ಲಿ ಮಧ್ಯ ಮಾರಾಟ ಮಾಡದಂತೆ ಮಾಡಿಸಿಕೊಟ್ಟು. ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಿಸಿ ಕೊಡಬೇಕಾಗಿ ಕೋರುತ್ತೇವೆ  ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.