ಹಿಂದೂ ಮಹಾಸಭಾ ಗಣಪತಿ ಬಂದೋಬಸ್ತ್ ಹೇಗಿದೆ ? ಎಷ್ಟು ಕ್ಯಾಮರಾ ಇದೆ? ಎಸ್‌ಪಿ ಹೇಳಿದ್ದೇನು?
Shivamogga hindu mahasaba Ganapati bhandobust , ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ , ಗಣಪತಿ ಮೆರವಣಿಗೆ , ಬಂದೋಬಸ್ತ್

SHIVAMOGGA | MALENADUTODAY NEWS | Sep 17, 2024 ಮಲೆನಾಡು ಟುಡೆ
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಇವತ್ತು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ನಿನ್ನೆ ದಿನ ಬಂದೋಬಸ್ತ್ ಸಂಬಂಧ ಎಸ್‌ಪಿ ಮಿಥುನ್ ಕುಮಾರ್ ಬ್ರೀಪಿಂಗ್ ನಡೆಸಿದ್ದಾರೆ. ಬಂದೋಬಸ್ತ್ ಕರ್ತವ್ಯಕ್ಕೆ 03 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 25 ಪೊಲೀಸ್ ಉಪಾಧೀಕ್ಷಕರು,
60 ಪೋಲಿಸ್ ನಿರೀಕ್ಷಕರು, 110 ಪೊಲೀಸ್ ಉಪನಿರೀಕ್ಷಕರು, 200 ಸಹಾಯಕ ಪೊಲೀಸ್ ನಿರೀಕ್ಷಕರು, 3,500 ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, 01-RAF ತುಕಡಿ 08 ಡಿಎಆರ್ ತುಕಡಿ, 01 QRT ತುಕಡಿ, 01 DSWAT ತುಕಡಿ, 10 ಕೆಎಸ್ಆರ್.ಪಿ ತುಕಡಿಗಳು, 05 ದ್ರೋಣ್ ಕ್ಯಾಮರಾಗಳು, 100 ವಿಡಿಯೋಗ್ರಾಫರ್ ಗಳನ್ನು ನಿಯೋಜಿಸಲಾಗಿದೆ.
ಎಸ್‌ಪಿ ಮಿಥುನ್ ಕುಮಾರ್- SP Mithun Kumar
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಡಿಎಆರ್ ಕವಾಯತು ಮೈಧಾನದಲ್ಲಿ ಬ್ರೀಪಿಂಗ್ ನಡೆಸಿದ ಎಸ್‌ಪಿ ಮಿಥುನ್ ಕುಮಾರ್ ವಿವಿಧ ಸೂಚನೆಗಳನ್ನ ನೀಡಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಭ್ರಮದಿಂದ ಮೆರವಣಿಗೆ ನಡೆಯಲಿದೆ. ಯಾವುದೇ ಶಾಂತಿ ಭಂಗ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಅಂತಹ ಕೃತ್ಯವೆಸಗುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿಯು ಸಜ್ಜುಗೊಂಡಿದೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳು
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ