SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 6, 2024 SHIVAMOGGA DASARA | ಶಿವಮೊಗ್ಗ ದಸರಾ ವಿಶಿಷ್ಟವಾಗಿ ನಡೆಯುತ್ತಿದೆ. ಇವತ್ತು ನವರಾತ್ರಿ ಉತ್ಸವದ ನಾಲ್ಕನೆ ದಿನ. ಇವತ್ತು ಯೋಗ ದಸರಾ ಹಾಗೂ ಸೈಕಲ್ ಜಾಥಾವನ್ನ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯೇ ಆರಂಭವಾದ ಎರಡು ಕಾರ್ಯಕ್ರಮಗಳು ಯಶಸ್ವಿಯಾಗಿ ಹಾಗೂ ವಿಶಿಷ್ಟವಾಗಿ ನಡೆದವು.
ಯೋಗ ದಸರಾ ಹಾಗೂ ಸೈಕಲ್ ಜಾಥಾ
ಯೋಗಭ್ಯಾಸ ಮತ್ತು ಪ್ರಾಣಾಯಾಮ ಜೊತೆಗೆ ಧ್ಯಾನ-ಆರ್ಟ್ ಆಫ್ ಲಿವಿಂಗ್, ಯೋಗ ಉಪವಾಸ ಉಚಿತ ಆರೋಗ್ಯ ತಪಾಸಣೆಯನ್ನ ಕುವೆಂಪುರಂಗ ಮಂದಿರ ಹಮ್ಮಿಕೊಳ್ಳಲಾಗಿತ್ತು. ಆ ಬಳಿಕ ನೆಹರು ಕ್ರೀಡಾಂಗಣದಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಎಸ್‌ಎನ್ ಚೆನ್ನಬಸಪ್ಪ
ಈ ಜಾಥಾಕ್ಕೆ ಶಾಸಕ ಎಸ್‌ಎನ್ ಚನ್ನಬಸಪ್ಪರವರು ಚಾಲನೆ ನೀಡಿ, ಆರೋಗ್ಯವೇ ಸಂಪತ್ತು ಎಂಬುದು ಬಹಳ ಸತ್ಯ. ಯಾವುದೇ ಕೆಟ್ಟ ಅಥವಾ ಒಳ್ಳೆಯ ಸಂದರ್ಭಗಳಲ್ಲಿ ನಮ್ಮೊಂದಿಗೆ ಉಳಿಯುವುದು ನಮ್ಮ ಉತ್ತಮ ಆರೋಗ್ಯ ಮಾತ್ರ ಎಂದು ಅಭಿಪ್ರಾಯ ಪಟ್ಟರು
ದಸರಾ ಚಲನ ಚಿತ್ರೋತ್ಸವ
ಇನ್ನೂ ದಸರಾ ಚಲನಚಿತ್ರೋತ್ಸವದ ಅಂಗವಾಗಿ ಇವತ್ತು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಕಂಬ್ಳಿ ಹುಳ ಸಿನಿಮಾ ಪ್ರಸಾರ ಮಾಡಲಾಗಿದೆ. ಸಿನಿಪ್ರೇಮಿಗಳು ಚಲನಚಿತ್ರ ವೀಕ್ಷಿಸಿ ಖುಷಿಪಟ್ಟರು.
ಗಮಕವಾಚನ
ಇನ್ನೊಂದೆಡೆ ದಸರಾ ಆಚರಣೆ ಹಿನ್ನೆಲೆಯಲ್ಲಿ ಕಮಲಾ ನೆಹರು ಕಾಲೇಜಿನಲ್ಲಿ ಗಮಕವಾಚನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟದ ಗಮಕ ವಾಚನ ಸ್ಪರ್ಧೆಯಲ್ಲಿ ಉದಯೋನ್ಮುಖ ಪ್ರತಿಬೆಗಳು ಪಾಲ್ಗೊಂಡರು. ʼ
ಮಕ್ಕಳ ದಸರಾ
ಇತ್ತ ಕುವೆಂಪು ರಂಗಮಂದಿರದಲ್ಲಿ ಮಕ್ಕಳ ರಂಗ ಹಾಗೂ ಮಕ್ಕಳ ನಾಟಕವನ್ನು ಆಯೋಜಿಸಲಾಗಿದ್ದು, ಪಂಜರ ಶಾಲೆ | ನಾಣಿ ಭಟ್ಟನ ಸ್ವರ್ಗದ ಕನಸು | ಬಿಲ್ಲಾ ಹಬ್ಬ | ಹುಲಿರಾಯ ನಾಟಕಗಳು ಪ್ರಕಟಗೊಳ್ಳಲಿದೆ
ಯುವ ದಸರಾ
ಸಂಜೆ ಆರು ಗಂಟೆಗೆ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯನ್ನ ಯುವ ದಸರಾದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ
ರಂಗದಸರಾ
ಸಂಜೆ ಏಳು ಗಂಟೆಗೆ ರಂಗದಸರಾದ ಅಂಗವಾಗಿ ಮಹಿಳಾ ನಾಟಕ ಪ್ರದರ್ಶನವೂ ಡಾ ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಕಲೆಯಕೊಲೆ ಸಂಸಾರದಲ್ಲಿ ಸನಿದಪ ನಾಟಕಗಳು ಪ್ರದರ್ಶನಗೊಳ್ಳಲಿದೆ.