SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 8, 2024 | SHIVAMOGGA COURT | ಪ್ರಕರಣವೊಂದರಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ಮೂವರು ಆರೋಪಿಗಳಿಗೆ ಐದು ವರ್ಷ ಶಿಕ್ಷೆ ವಿಧಿಸಿದೆ.
ಕಳೆದ ದಿನಾಂಕಃ 28-04-2024 ರಂದು ರಾತ್ರಿ ಭದ್ರಾವತಿ ಅನ್ವರ್ ಕಾಲೋನಿ ನಿವಾಸಿಯೊಬ್ಬರನ್ನ ಬೈಪಾಸ್ ರಸ್ತೆಯಲ್ಲಿ ಅಡ್ಡಗಟ್ಟಿ ದುಷ್ಕರ್ಮಿಗಳು ನಗದು ಹಣ, ಮೊಬೈಲ್ ಫೋನ್ ಮತ್ತು ವಾಚ್ ಅನ್ನು ಕಿತ್ತು ಕೊಂಡು ಹೋಗಿದ್ದರು. ಈ ಸಂಬಂಧ ಕಲಂ 394 ಐಪಿಸಿ ಅಡಿ ಕೇಸ್ ಆಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಆಗಿನ ತನಿಖಾಧಿಕಾರಿಗಳಾದ ರಾಘವೇಂದ್ರ ಕಾಂಡಿಕೆ, ಸಿಪಿಐ, ಭದ್ರಾವತಿ ನಗರ ವೃತ್ತ ಈ ಸಂಬಂಧ ಆರೋಪಿಗಳನ್ನ ಪತ್ತೆ ಮಾಡಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಈ ಬಗ್ಗೆ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಸದ್ಯ ವಿಚಾರಣೆ ಮುಗಿದಿದ್ದು, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ನ್ಯಾಯಾಧಿಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
ದಿನಾಂಕಃ 07-10-2024 ರಂದು ಆರೋಪಿತರಾದ 1) ಸಯ್ಯದ್ ಇಬ್ರಾಹಿಂ, 23 ವರ್ಷ, ಶಿವಮೊಗ್ಗ ಟೌನ್, 2) ಮೊಹಮ್ಮದ್ ಮುಸ್ತಫಾ, 22 ವರ್ಷ, ಶಿವಮೊಗ್ಗ ಟೌನ್, 3) ಮೊಹಮ್ಮದ್ ಅಲ್ಲಾಭಕ್ಷಿ, 22 ವರ್ಷ, ಶಿವಮೊಗ್ಗ ಟೌನ್ ಇವರುಗಳಿಗೆ 05 ವರ್ಷ 01 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

SUMMARY | In a case, the 4th Additional District and Sessions Court in Shivamogga (Presiding Bhadravathi) sentenced three accused to five years in jail.
KEYWORDS | 4th Additional District and Sessions Court in Shivamogga, Shivamogga Court, five years in jail.