Shivamogga | ಭದ್ರಾವತಿ ನಗರಸಭೆಗೆ ಅಧ್ಯಕ್ಷರಿಲ್ಲ | ಉಪಾಧ್ಯಕ್ಷರ ಆಯ್ಕೆ | ಕಾರಣವೇನು?

Bhadravathi Municipal Corporation Election Updates | ಭದ್ರಾವತಿ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಣಿ ಆಯ್ಕೆಯಾಗಿದ್ದಾರೆ

Shivamogga | ಭದ್ರಾವತಿ ನಗರಸಭೆಗೆ ಅಧ್ಯಕ್ಷರಿಲ್ಲ | ಉಪಾಧ್ಯಕ್ಷರ ಆಯ್ಕೆ  | ಕಾರಣವೇನು?
Bhadravathi Municipal Corporation Election Updates |

SHIVAMOGGA | MALENADUTODAY NEWS | Aug 27, 2024 ಮಲೆನಾಡು ಟುಡೆ  



BHADRAVATI  | ವಿಶೇಷ ಎನ್ನುವಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನ ಹಾಗೆ ಬಿಟ್ಟು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. 

ಹೌದು, ಭದ್ರಾವತಿ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ  ನಿನ್ನೆ ದಿನ ಚುನಾವಣೆ ನಡೆದಿದೆ. ಈ ವೇಳೆ ಕಾಂಗ್ರೆಸ್‌ನ ಮಣಿ ಆಯ್ಕೆಯಾಗಿದ್ದು. ಜೆಡಿಎಸ್ ಮತ್ತು ಬಿಜೆಪಿ ಒಮ್ಮತದ ಅಭ್ಯರ್ಥಿಯಾಗಿದ್ದ ಸವಿತಾ ಉಮೇಶ್ ಸೋತಿದ್ದಾರೆ. 

ಭದ್ರಾವತಿ ನಗರಸಭೆ

ಬಿಜೆಪಿಯ ನಾಲ್ವರು ಸದಸ್ಯರ ಪೈಕಿ ಮೂವರು ವಿಪ್ ಉಲ್ಲಂಘಿಸಿ ಸಭೆಗೆ ಗೈರಾದ್ದರಿಂದ ಕಾಂಗ್ರೆಸ್‌ಗೆ ಉಪಕಾರವಾಗಿದೆ. 35 ಸದಸ್ಯರ ಪೈಕಿ ಕಾಂಗ್ರೆಸ್‌ನ 18 ಸದಸ್ಯರು ಮತ್ತು ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿ ಅಭ್ಯರ್ಥಿ ಮಣಿ ಪರ ಕೈ ಎತ್ತಿದರು. ಹೀಗಾಗಿ ಮಣಿ ಗೆಲುವು ಸಾಧಿಸಿದರು. 

ವಿಶೇಷ ಅಂದರೆ, ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ದಿನ ಚುನಾವಣೆ ನಡೆದಿಲ್ಲ. ಇದಕ್ಕೆ ಕಾರಣ ತಡೆಯಾಜ್ಞೆ . ಹೌದು, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ 4 ಬಾರಿ ಸಾಮಾನ್ಯ ಮಹಿಳೆ ಮೀಸಲು ಪ್ರಕಟಗೊಂಡಿದೆ. ಇದರು ಸರಿಯಾದುದಲ್ಲ ಎಂದು ಪ್ರಶ್ನೆ ನ್ಯಾಯಕೋರಿ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಕಾರಣಕ್ಕೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೋರ್ಟ್‌ ತಡೆ ನೀಡಿದೆ. 

ಈ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ.  

ಇನ್ನಷ್ಟು ಸುದ್ದಿಗಳು

Bhadravathi Municipal Corporation Election Updates