SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ಶಿವಮೊಗ್ಗ ಬಸ್ ನಿಲ್ದಾಣದ ಏರಿಯಾದಲ್ಲಿ ಎಲ್ಲಂದರಲ್ಲಿ ನಿಲ್ಲಿಸುವ ಆಟೋಗಳಿಂದ ಸಮಸ್ಯೆಯಾಗುತ್ತಿದೆ ಅಂತಾ ಸಾರ್ವಜನಿಕರು ಹಲವು ಸಲ ದೂರು ನೀಡಿದ್ದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಲ್ಲಿ ಪ್ರಿಪೈಡ್ ಆಟೋ ವ್ಯವಸ್ಥೆ ಕಲ್ಪಿಸಿಸಿ ಆಟೋಗಳ ವಿಚಾರದಲ್ಲಿ ಶಿಸ್ತು ಮೂಡಿಸುವ ಪ್ರಯತ್ನ ನಡೆಸಿತ್ತು. ಆದರೆ ಇದು ಜಾರಿಗೆ ಬಂದಿಲ್ಲ. ಈ ನಡುವೆ ಆಟೋಗಳ ನಡುವೆಯೇ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಜಟಾಪಟಿಯಾಗಿದ್ದು, ಈ ಸಂಬಂದ ಎಫ್‌ಐಆರ್ ಸಹ ದಾಖಲಾಗಿದೆ.
ನಡೆದಿದ್ದೇನು?
ಪ್ಯಾಸೇಂಜರ್ ಆಟೋ ಓಡಿಸುವ ವ್ಯಕ್ತಿಯೊಬ್ಬರು, ಊರಿನಿಂದ ಬಂದಿದ್ದ ದೊಡ್ಡಮ್ಮನ ಮಗಳನ್ನು ಪಿಕಪ್ ಮಾಡಲು ಬಸ್‌ನಿಲ್ದಾಣಕ್ಕೆ ಬಂದಿದ್ದರು. ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ಆಟೋ ನಿಲ್ಲಿಸಿದ್ದ ಅವರು, ಊರಿನಿಂದ ಬರುವವರನ್ನ ಹತ್ತಿಸಿಕೊಂಡಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಈ ವೇಳೆ ಅಲ್ಲಿಯೇ ಬಾಡಿಗೆ ಕಾಯುತ್ತಿದ್ದ ಇನ್ನೊಂದು ಆಟೋದ ಚಾಲಕ ಆಟೋ ಸೈಡ್ ಗೆ ಹಾಕು ಎಂದು ಅಶ್ಲೀಲ ಪದಗಳಲ್ಲಿ ನಿಂದಿಸಿದ್ದಾನೆ. ಅಲ್ಲದೆ ನಮ್ ಸ್ಟ್ಯಾಂಡ್‌ನಲ್ಲಿ ಆಟೋ ನಿಲ್ಲಿಸಬೇಡ ಎಂದು ಆವಾಜ್ ಹಾಕಿದ್ದಾನೆ ಎನ್ನಲಾಗಿದೆ. ನಾನು ಬಾಡಿಗೆಗೆ ಬಂದಿಲ್ಲವೆಂದರೂ ಬಿಡದ ಆತ ದೂರುದಾರರ ಮೇಲೆ ಹಲ್ಲೆ ಮಾಡಿದ್ದಾನೆ. ಈತನ ಜೊತೆಯಲ್ಲಿ ಇನ್ನಿಬ್ಬರು ದೂರುದಾರರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆದರಿದ ದೂರುದಾರರು, ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಜೀವ ಬೆದರಿಕೆಯ ಸಂಬಂಧ ದೂರು ನೀಡಿದ್ದು ತತ್ಸಂಬಂಧ ಎಫ್‌ಐಆರ್ ಸಹ ದಾಖಲಾಗಿದೆ.
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ