SHIVAMOGGA | MALENADUTODAY NEWS | Aug 29, 2024 ಮಲೆನಾಡು ಟುಡೆ
ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇವತ್ತು ಬೆಳಗ್ಗೆ ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೆಂಗಳೂರು ಪರಪ್ಪನ ಅಗ್ರಹಾರದಿಂದ ದರ್ಶನ್‌ರನ್ನ ಅಧಿಕಾರಿಗಳು ಶಿಫ್ಟ್ ಮಾಡಲು ಕರೆದೊಯ್ದಿದ್ದರು.
ಇವತ್ತು ಬೆಳಗ್ಗೆ ದರ್ಶನ್ ತೂಗುದೀಪರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳ ನೂಕು ನುಗ್ಗಲು
ಇನ್ನೂ ದರ್ಶನ್ ಬರುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ದರ್ಶನ್‌ರ ಅಭಿಮಾನಿಗಳು ಬಳ್ಳಾರಿ ಜೈಲಿನತ್ತ ದೌಡಾಯಿಸಿದ್ದಾರೆ.
ದರ್ಶನ್ ಇದ್ದ ಪೊಲೀಸ್ ವಾಹನ ಬರುತ್ತಿದ್ದಂತೆ ಅಭಿಮಾನಿಗಳು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರಿಕರಿಸಿಕೊಂಡರಷ್ಟೆ ಅಲ್ಲದೆ ಕೇಕೆ ಹಾಕಿ ಡಿಬಾಸ್ ಎಂದು ಕೂಗಿದರು.
ಈ ನಡುವೆ ಪೊಲೀಸ್ ಡ್ಯೂಟಿಗೆ ಅಡ್ಡ ಬಂದ ಫ್ಯಾನ್ಸ್ ಪೊಲೀಸರು ಲಾಠಿ ರುಚಿಯನ್ನ ಸಹ ತೋರಿಸಿದರು.
ಮಾರ್ಗ ಬದಲಾವಣೆ
ಈ ನಡುವೆ ಕೈದಿಗಳನ್ನ ರಾತ್ರಿ ಶಿಫ್ಟ್ ಮಾಡುವಂತಿಲ್ಲ, ಆದಾಗ್ಯ ದರ್ಶನ್‌ರನ್ನ ಭದ್ರತಾ ಕಾರಣಕ್ಕಾಗಿ ಬೆಳಗಿನ ಜಾವ ಪರಪ್ಪನ ಅಗ್ರಹಾರದಿಂದ ಶಿಫ್ಟ್ ಮಾಡಲಾಗಿದೆ.
ಅಷ್ಟೆ ಅಲ್ಲದೆ ಸಾಮಾನ್ಯವಾಗಿ ಹೋಗಿ ಬರುವ ದಾರಿ ಬದಲಾಗಿದೆ, ಅನಂತಪುರದ ಮೂಲಕ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇನ್ನೂ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ 6106 ನಂಬರ್ ನೀಡಲಾಗಿತ್ತು. ಇದೀಗ ಬಳ್ಳಾರಿ ಕೈದಿ ನಂಬರ್ 511 ನಂಬರ್ ನೀಡಲಾಗಿದೆ ಎಂದು ತಿಳಿದು ಬಂದಿದೆ
ಈ ಹಿಂದೆ ಹೀರೋ ಆಗಿ ಚೌಕ ಸಿನಿಮಾದ ಶೂಟಿಂಗ್ ಗಾಗಿ ದರ್ಶನ್ ಬಳ್ಳಾರಿ ಜೈಲಿಗೆ ಬಂದಿದ್ದರು, ಇದೀಗ ಅದೇ ಬಳ್ಳಾರಿ ಜೈಲಿಗೆ ಕೈದಿಯಾಗಿ ದರ್ಶನ್ ಎಂಟ್ರಿಕೊಟ್ಟಿದ್ದಾರೆ
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್