SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ ಮೂಲದ ಬಚ್ಚನ್ ಇದೀಗ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿಯು ಅವಾಂತರ ಸೃಷ್ಟಿಸ್ತಿರುವ ಬಗ್ಗೆ ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ. ಈತನು ಸೇರಿದಂತೆ ಶಂಕಿತ ಜುಲ್ಪಿಕರ್ ಎಂಬಾತ ಜೈಲಿನ ಕೈದಿಗಳಿಗೆ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ.
ಅಲ್ಲದೆ ಈ ಸಂಬಂಧ ಜೈಲಿನ ಕೈದಿಯೊಬ್ಬರ ಆಡಿಯೋ ಸಂಭಾಷಣೆ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಆಡಿಯೋದಲ್ಲಿ ಹಲವಾರು ಆರೋಪಗಳು ಕೇಳಿಬಂದಿದ್ದು ಬಚ್ಚನ್ ಮತ್ತು ಜುಲ್ಫಿಕರ್ ವಿರುದ್ಧ ಆರೋಪ ಮಾಡಲಾಗಿದೆ.
ಇನ್ನೂ ಬಚ್ಚನ್ ಈ ಹಿಂದೆ ಪೊಲೀಸರು ಹೊಡೆದರು ಎಂಬಂತಹ ಫೇಕ್ ವಿಡಿಯೋ ಮಾಡಿ ಅವುಗಳನ್ನ ವೈರಲ್ ಮಾಡಿಸಿದ್ದ. ಆ ಬಳಿಕ ಆತ ಹರಿಬಿಟ್ಟ ವಿಡಿಯೋಗಳು ಫೇಕ್ ಎಂಬ ಸತ್ಯ ಹೊರಬಿದ್ದಿತ್ತು. ಶಿವಮೊಗ್ಗ ಜೈಲಿನಲ್ಲಿದ್ದಾಗಲೂ ಹಲವರಿಗೆ ಬೆದರಿಕೆ ಹಾಕಿದ್ದ ಆರೋಪಗಳು ಬಚ್ಚನ್ ಮೇಲಿವೆ. ಇದೀಗ ಕಲಬುರಗಿಯ ಜೈಲಿನಲ್ಲಿ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕುತ್ತಿರುವ ಆರೋಪಗಳು ಕೇಳಿಬಂದಿವೆ.
SUMMARY | According to state media reports, Bachchan, who hails from Shivamogga, is currently lodged in kalaburagi central jail. The suspect, Zulfiqar, has been accused of honey-trapping and threatening jail inmates.

KEYWORDS | According to state media reports, Bachchan, Shivamogga, kalaburagi central jail. Zulfiqar, honey-trapping , threatening jail inmates.