ದರ್ಶನ್ ಡೆವಿಲ್ ಸಬ್ ಟೈಟಲ್ ಚೇಂಜ್ ಕಾರಣವೇನು 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025

ದರ್ಶನ್ ನಟನೆಯ ಡೆವಿಲ್ ಚಿತ್ರದ ಸಬ್ ಟೈಟಲ್ ಬದಲಾಗಿದ್ದು, ಈ ಹಿಂದೆ ಇದ್ದ ಡೆವಿಲ್ ದಿ ಹೀರೋ ಎಂಬ ಟೈಟಲ್ ನ್ನು ಚಿತ್ರತಂಡ ದಿ ಡೆವಿಲ್ ಎಂದು ಬದಲಿಸಿದೆ. 

- Advertisement -

ಫೆಬ್ರವರಿ 16 ರ ರಂದು  ದರ್ಶನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಡೆವಿಲ್ ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆಮಾಡುತ್ತಿದೆ. ಈ ಹಿನ್ನೆಲೆ ಇತ್ತೀಚೆಗೆ ಚಿತ್ರತಂಡ ಅನೌನ್ಸ್ಮೆಂಟ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು ಆ ಪೋಸ್ಟರ್‌ನಲ್ಲಿ ಚಿತ್ರದ ಸಬ್ ಟೈಟಲ್ ಅನ್ನು ದಿ ಡೆವಿಲ್ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ ಎಂಬ ಕ್ಯಾಪ್ಶನ್ ಅನ್ನು ಸಹ ನೀಡಲಾಗಿದೆ. ಈ ಹಿನ್ನಲೆ ಡೆವಿಲ್ ಚಿತ್ರತಂಡ ಸಬ್ ಟೈಟಲ್ ಬದಲಾವಣೆ  ಮಾಡಲು ಕಾರಣವೇನು. ಹೊಸ ಹಾರಿವು ಎಂದರೆ ಟೇಸರ್ ಯಾವ ರೀತಿ ಇರಬಹುದು ಎಂಬೆಲ್ಲಾ ಪ್ರಶ್ನೆ ದರ್ಶನ್ ರವರ ಅಭಿಮಾನಿ ವಲಯದಲ್ಲಿ ಮೂಡಿದೆ.



ಇಲ್ಲಾ ಅಂದುಕೊಂಡಂತೆ ನಡೆದಿದ್ದರೆ. ಕಳೆದ ಡಿಸೆಂಬರ್‌ನಲ್ಲಿ  ಡೆವಿಲ್ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ದರ್ಶನ್‌ರವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಪರಿಣಾಮ ಅನಿವಾರ್ಯವಾಗಿ ಚಿತ್ರದ ಶೂಟಿಂಗ್ ಅನ್ನು ನಿಲ್ಲಸಲಾಯಿತು. ಆ ಸಮಯದಲ್ಲಿ ಡೆವಿಲ್ ದಿ ಹಿರೋ ಟೈಟಲ್ ಇಂದಲೇ ಚಿತ್ರತಂಡಕ್ಕೆ ಈ ರೀತಿಯ ತೊಂದರೆಗಳು ಉಂಟಾಗುತ್ತಿದೆ. ಡೆವಿಲ್‌ ಚಿತ್ರದ ಟೈಟಲ್‌ ಚೇಂಜ್‌ ಮಾಡಬೇಕು ಎಂಬ ಮಾತುಗಳು ಕೆಲವೆಡೆ ಕೇಳಿಬಂದವು. ಈ ಹಿನ್ನಲೆ ಡೆವಿಲ್ ಚಿತ್ರತಂಡ ಸಬ್ ಟೈಟಲ್‌ನ್ನು ಬದಲಾಯಿಸ್ತಾ ಎಂಬ ಅನುಮಾನಗಳು ಎಲ್ಲರಲ್ಲಿ ಮೂಡಿದೆ.

SUMMARY | The subtitle of Darshan’s ‘Devil’ has been changed to ‘The Devil’ from the earlier title of ‘Devil the Hero’.

KEYWORDS | Darshan, Devil, subtitle, kannada, movie, 

Share This Article
Leave a Comment

Leave a Reply

Your email address will not be published. Required fields are marked *