SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 22, 2025
ಶಿವಮೊಗ್ಗ | ಇಂದು ಕುವೆಂಪು ವಿಶ್ವವಿದ್ಯಾಲಯದ 34 ನೇ ಘಟಿಕೋತ್ಸವ ಕಾರ್ಯಕ್ರಮ ಶಂಕರಘಟ್ಟ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬಸವ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಕ್ರಮಕ್ಕೆ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಲ್ಲೋಟ್ ಚಾಲನೆ ನೀಡಿದರು. ಈ ವೇಳೆ ಅನೇಕ ವಿದ್ಯಾರ್ಥಿಗಳಿಗೆ ಪದಕ ಪಿಹೆಚ್‌ಡಿ ಯನ್ನ ರಾಜ್ಯಪಾಲರು ಪ್ರಧಾನ ಮಾಡಿದರು. ಹಾಗೆಯೇ ವಿಧಾನಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಿಜ್ಞಾನಿ ಸಿ.ಎಸ್. ಉನ್ನಿಕೃಷ್ಣನ್ ಮತ್ತು ಯೋಗಗುರು ನಾಗರಾಜ್ ಅವರಿಗೆ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.
ಘಟಿಕೋತ್ಸವದಲ್ಲಿ ಪದಕಗಳು ಹಾಗೂ ನಗದು ಬಹುಮಾನಗಳಳನ್ನು ಪಡೆದವರು
204 ಅಭ್ಯರ್ಥಿಗಳು ಪಿಹೆಚ್‌ಡಿಯನ್ನು ಪಡೆದರು. ಅದರಲ್ಲಿ 115 ಪುರುಷರು ಹಾಗೂ 89 ಮಹಿಳೆಯರು ಒಳಗೊಂಡಿದ್ದರು. ಹಾಗೆಯೇ ಈ ಘಟಿಕೋತ್ಸವದಲ್ಲಿ 146 ಸ್ವರ್ಣಪದಕಗನ್ನು ರಾಜ್ಯಪಾಲರು ಪ್ರದಾನ ಮಾಡಿದರು. ಆ ಪದಕಗಳನ್ನು 13 ಪುರುಷರು 71 ಮಹಿಳೆಯರು ಸೇರಿ ಒಟ್ಟು 84 ವಿದ್ಯಾರ್ಥಿಗಳು ಹಂಚಿಕೊಂಡರು. ಹಾಗೂ ಒಟ್ಟು 17 ನಗದು ಬಹುಮಾನಗಳಿದ್ದು, 13 ಮಹಿಳೆಯರು 1 ಪುರುಷ ಸೇರಿ ಒಟ್ಟು 14 ವಿದ್ಯಾರ್ಥಿಗಳು ಆ ಬಹುಮಾನವನ್ನು ಹಂಚಿಕೊಂಡರು
ಅತಿ ಹೆಚ್ಚು ಸ್ವರ್ಣ ಪದಕವನ್ನು ಪಡೆದವರು
ವಸಂತ ಕುಮಾರ್ ಬಿ. ಜೆ., ಎಂ.ಎ (ಕನ್ನಡ), ಕನ್ನಡ ಭಾರತಿ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ಇವರು ಅತೀ ಹೆಚ್ಚು 10 ಸ್ವರ್ಣ ಪದಕ ಹಾಗೂ 01 ನಗದು ಬಹುಮಾನ ಪಡೆದಿರು. ಹಾಗೆಯೇ ಸಾನಿಯಾ ಫಿರ್ಧೋಸ್ ಎಂಎಸ್ಸಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಇವರು 06 ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡರು.
ರಕ್ಷಿತಾ ಎಸ್. ಎಸ್., ಎಂ.ಎ.(ಸಮಾಜಶಾಸ್ತ್ರ), ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ ಶಂಕರಘಟ್ಟ, ರಕ್ಷಿತ್ ಎಸ್ ಎಂ.ಬಿ.ಎ., ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ ಶಂಕರಘಟ್ಟ, ಶುಭಶ್ರೀ ಎಸ್., ಎಂ.ಎಸ್ಸಿ.(ಜೈವಿಕ ತಂತ್ರಜ್ಞಾನ), ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ ಶಂಕರಘಟ್ಟ, ಹರ್ಷಿತಾ ಜಿ., ಬಿ.ಕಾಂ., ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ. ಇವರುಗಳು ತಲಾ 5 ಪದಕಗಳನ್ನು ಪಡೆದರು.
ವಂದನಾ ಎ. ಶೆಟ್ಟಿ, ಎಂ.ಎಸ್ಸಿ.(ಗಣಿತಶಾಸ್ತ್ರ), ಗಣಿತಶಾಸ್ತ್ರ ಅಧ್ಯಯನ ವಿಭಾಗ, ಜ್ಞಾನಸಹ್ಯಾದ್ರಿ, ಶಂಕರಘಟ್ಟ ಇವರು ನಾಲ್ಕು ಸ್ವರ್ಣ ಪದಕ ಹಾಗೂ ಎರಡು ನಗರ ಬಹುಮಾನಗಳನ್ನು ಪಡೆದರು. ಸಂಗೀತಾ ಬಿ.ಕೆ. ಎಂ ಎ ಇತಿಹಾಸ ಅರ್ಪಿತಾ ಆರ್.ಎಂ.ಎಸ್ಸಿ.(ರಸಾಯನಶಾಸ್ತ್ರ) ಧನುರ್ವಿ ಡಿ. ಎಂ., ಎಂ.ಎಸ್ಸಿ.(ಸಸ್ಯಶಾಸ್ತ್ರ) ಇವರು ತಲಾ 4 ಸ್ವರ್ಣ ಪದಕಗಳನ್ನು ಪಡೆದರು.
ಗುಲ್‌ನಾಜ್, ಎಂ.ಎ.(ಉರ್ದು), ಇವರು 3 ಸ್ವರ್ಣ ಪದಕ ಹಾಗೂ 01 ನಗದು ಬಹುಮಾನ ಪಡೆದರು.
ಯೋಷಿತಾ ಎಸ್. ಸೊನಾಲೆ, ಎಂ.ಎ.(ಇಂಗ್ಲೀಷ್) ವನಿತಾ ಬಿ. ಆರ್., ಎಂ.ಎ.(ರಾಜ್ಯಶಾಸ್ತ್ರ) ಸಿಂಧು ಕೆ.ಟಿ. ಎಂ.ಎ. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಪೂರ್ಣ ಪ್ರಜ್ಞಾ ಬಿ. ಆರ್.ಎಂ ಕಾಂ ರಂಜಿತಾ ಎ. ಆರ್. ಎಂ ಎಸ್ಸಿ, ಧನ್ಯಾ ಕೆ. ವೈ. ಎಂ ಎಸ್ಸಿ, ಹಾಗೂ ಅಶ್ವಥ ಬಿ. ಬೈತಾನಾಲ್ ಎಂ ಸಿ ಎ ಎಂದು ಮಾಹಿತಿ ನೀಡಿದರುಇವರು ತಲಾ 05 ಸ್ವರ್ಣಪದಕಗಳನ್ನು ತಮ್ಮದಾಗಿಸಿಕೊಂಡರು..
SUMMARY | The 34th convocation of Kuvempu University was held at Basava Auditorium in Shankaraghatta University premises today
KEYWORDS | 34th convocation, Kuvempu University, Shankaraghatta,