SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 20, 2024 digital arrest crime
ಜನರನ್ನ ಯಾಮಾರಿಸುವುದು ಬಹಳಾನೇ ಸುಲಭ, ತುಸು ಹೆದರಿಸಿದರೇ , ಸ್ವಲ್ಪ ಗದರಿಸಿದರೇ ಇದೇನ್ನಪ್ಪಾ ತಲೆಬಿಸಿ ಎಂದುಕೊಳ್ಳುತ್ತಾನೆ ಸಾಮಾನ್ಯ ವ್ಯಕ್ತಿ. ಇದನ್ನೆ ಬಂಡವಾಳ ಮಾಡಿಕೊಳ್ಳುವ ವ್ಯಕ್ತಿಗಳು ನಿಂತ ಜಾಗದಲ್ಲಿಯೇ ನಿಮ್ಮಿಂದ ಲಕ್ಷಲಕ್ಷ ಸುಲಿಗೆ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಡಿಜಿಟಲ್ ಅರೆಸ್ಟ್ ..
ಸೈಬರ್ ಕ್ರೈಂ ಸಿಐಡಿ ವಿಭಾಗ (@CybercrimeCID) ಇಂತಹದ್ದೊಂದು ಪ್ರಕರಣವನ್ನು ಹಂಚಿಕೊಂಡಿದ್ದು ಜನ ಜಾಗೃತರಾಗಲಿ ಎಂಬ ಉದ್ದೇಶದೊಂದಿಗೆ ಮಲೆನಾಡು ಟುಡೆ ಓದುಗರಿಗೆ ಸೈಬರ್ ಕ್ರೈಂ ರಿಪೋರ್ಟ್‌ನ ಸರಣಿಗಳ ಮೊದಲನೇ ಭಾಗವಾಗಿ ಈ ವರದಿ ನೀಡುತ್ತಿದ್ದೇವೆ.
ಎಲ್ಲೋ ನಿಮ್ಮ ಪಾಡಿಗೆ ನೀವು ಕೆಲಸ ಮಾಡುತ್ತಿರುತ್ತೀರಿ, ನಿಮಗೊಂದು ಫೋನ್ ಬರುತ್ತದೆ. ಹಾಗೆ ಬಂದ ಫೋನ್ ಕಾಲ್ ನಲ್ಲಿ ಮೊದಲು ವಿಚಾರಿಸುತ್ತಾರೆ. ನಿಮ್ಮ ವಿಳಾಸ ಹೆಸರು ವಿವರ ಎಲ್ಲಾ ಪಡೆದು ನಿಮ್ಮ ಮೇಲೆ ದೂರದ ಊರಿನಲ್ಲಿ ಕೇಸ್ ಆಗಿದೆ. ನಿಮ್ಮನ್ನ ಅರೆಸ್ಟ್ ಮಾಡಲಾಗುತ್ತದೆ. ಇಲ್ಲಿದೆ ನೋಡಿ ನಿಮ್ಮ ವಿರುದ್ಧದ ಎಫ್‌ಐಆರ್ , 02 ಗಂಟೆಯಲ್ಲಿ ನೀವು ಬಳಸುವ ಎಲ್ಲ ನಂಬರ್‌ಗಳನ್ನು ಬ್ಲಾಕ್ ಮಾಡಲಾಗುವುದು ಅಂತೆಲ್ಲಾ ಹೆದರಿಸುತ್ತಾರೆ ಆ ಬಳಿಕ ನಿಮ್ಮಿಂದ ಸುಲಿಗೆ ಮಾಡಲು ಯತ್ನಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಹೀಗಿದೆ ಓದಿ
ಧಾರವಾಡದಲ್ಲಿ ನಡೆದ ಘಟನೆ
ಸೆಪ್ಟೆಂಬರ್ 15 ರಂದು ಸಂತೋಷ್ ಎಂಬವರು ತಮ್ಮ ಮನೆಯಲ್ಲಿರಬೇಕಾದರೆ IVRS ರೀತಿಯಲ್ಲಿ ಅವರಿಗೆ ಕರೆ ಬಂದಿದ್ದು, ಟೆಲಿಕಾಂ ಕಂಪನಿಯಿಂದ ಮಾತನಾಡುತ್ತಿರುವಂತೆ ಹಿಂದಿಯಲ್ಲಿ ಮಾತನಾಡುತ್ತಾ ಎರಡು ಗಂಟೆಯಲ್ಲಿ ನೀವು ಬಳಸುವ ಎಲ್ಲ ನಂಬರ್‌ಗಳನ್ನು ಬ್ಲಾಕ್ ಮಾಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ನಂ.9 ನ್ನು ಪ್ರೆಸ್ ಮಾಡಿ ಎಂದಿದ್ದಾರೆ. ಆ ಪ್ರಕಾರ ಸಂತೋಷ್ ನಂ 9 ನ್ನು ಪ್ರೆಸ್ ಮಾಡಿದಾಗ ಆ ಕಡೆಯಿಂದ ರಾಹುಲ್ ಎಂಬಾತ ಸಂತೋಷ್ ಅವರ ಹೆಸರು ತಿಳಿದುಕೊಂಡು ಮೊಬೈಲ್ ನಂಬರ್ ಆಧಾರ್‌ಗೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಕೊಂಡಿದ್ದಾರೆ. ನಂತರ ಕರೆ ಮಾಡಿದ ವ್ಯಕ್ತಿ ನಿಮ್ಮ ಆಧಾರ್‌ಗೆ ಹೊಸ ಮೊಬೈಲ್ ನಂಬರ್ ಆಕ್ಟಿವ್ ಆಗಿದೆ. ಆ ಹೊಸ ನಂಬರ್‌ನಿಂದ ತುಂಬಾ ವಯಲೇಶನ್ ಆಗಿದ್ದು ಮುಂಬೈ ಜನತೆಗೆ ಅಕ್ರಮವಾಗಿ ಕಿರುಕುಳ ನೀಡುವ ಸಂದೇಶಗಳು ತಲುಪುತ್ತಿವೆ. ಈ ಬಗ್ಗೆ ಮುಂಬೈ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ TRAI (ಟೆಲಿಕಾಂ ರೆಗ್ಯುಲೇಟ್ರಿ ಅಥಾರಿಟಿ ಆಫ್ ಇಂಡಿಯಾ)ಗೆ ನೋಟಿಫಿಕೇಶನ್ ಹೋಗಿದೆ. ಹೀಗಾಗಿ ನಿಮ್ಮ ಮೊಬೈಲ್ ನಂಬರ್ ನೀವೇ ಬಳಸುತ್ತಿದ್ದೀರಾ ಅಥವಾ ಬೇರೆಯವರಿಗೆ ಯಾರಿಗಾದರೂ ಕೊಟ್ಟಿದ್ದೀರಾ?ಎಂದು ತಮ್ಮದೇ ಒಂದು ಮೊಬೈಲ್ ಸಂಖ್ಯೆ ಹೇಳಿದ್ದಾರೆ. ಆದರೆ, ಸಂತೋಷ್ ಅವರು ಆ ಮೊಬೈಲ್ ನಂಬರ್ ನಾನು ಬಳಸಿಯೂ ಇಲ್ಲ ಮತ್ತು ಯಾರಿಗೂ ಕೊಟ್ಟಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಅವರು ನಮ್ಮ ಮಾಹಿತಿ ಪ್ರಕಾರ ನಿಮ್ಮ ಮೊಬೈಲ್ ನಂಬರ್ ಮುಂಬೈಯ ಅಂಧೇರಿ ಈಸ್ಟ್‌ನ ಜೆಬಿ ನಗರದ ಜಯನಗರ ಕಾಲನಿಯ ಅಂಗಡಿಯೊಂದರಿಂದ ಖರೀದಿಯಾಗಿದೆ, ಇಲ್ಲವೆಂದು ಹೇಗೆ ಹೇಳುತ್ತೀರಿ ಎಂದು ಗದರಿದ್ದಾರೆ. ಅದಕ್ಕೆ ಸಂತೋಷ್ ನಾನು ಯಾವುದೇ ನಂಬರ್ ಪಡೆದಿಲ್ಲ, ಯಾವುದೇ ಸಂದೇಶ ಕಳುಹಿಸಿಲ್ಲ ಎನ್ನುತ್ತಾರೆ. ನಿಮಗೆ ಈ ದೇಶದ ಕಾನೂನು ಮತ್ತು ಆಧಾರ್ ಕಾರ್ಡ್ ಬಗ್ಗೆ ಏನು ಕಾನೂನು ಇದೆ ಎಂಬುದು ಗೊತ್ತಿದೆಯಾ? ಎಂದು ಸೈಬರ್ ಕ್ರಿಮಿನಲ್‌ಗಳು ಕೇಳುತ್ತಲೇ ಆಧಾರ್ ಕಾರ್ಡ್ ನಂಬರ್ ಪಡೆದು ಎರಡು ಗಂಟೆಯಲ್ಲಿ ಮುಂಬೈ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಗಾಬರಿಗೊಂಡ ಸಂತೋಷ್ ಎರಡು ಗಂಟೆಯಲ್ಲಿ ಮುಂಬೈ ತಲುಪುವುದು ಸಾಧ್ಯವಿಲ್ಲ ಎಂದಿದ್ದಾರೆ, ಸಂತೋಷ್ ಎರಡು ಗಂಟೆಯಲ್ಲಿ ಮುಂಬೈ ತಲುಪುವುದು ಅಸಾಧ್ಯವೆಂದು ಮೊದಲೇ ಅರಿತಿದ್ದ ಖಾಕಿ ವೇಷದ ಖದೀಮರು ಆತನ ಮೇಲೆ ದಾಖಲಿಸಿದ ನಕಲಿ ಎಫ್‌ಐಆರ್ ಪ್ರತಿ ತೋರಿಸಿದ್ದಾರೆ.ಅಂಧೇರಿ ಸೈಬರ್ ಪೊಲೀಸ್ ಠಾಣೆಯದ್ದು ಎನ್ನಲಾದ ಮೊಬೈಲ್ ನಂಬರ್ ನೀಡಿ ಅದಕ್ಕೆ ನಿಮ್ಮ ಹೆಸರು ಮತ್ತು ಎಫ್‌ಐಆರ್ ಪ್ರತಿ ನೀಡಿದರೆ ಆ ಕಡೆಯಿಂದ ತಮಗೆ ವಿಡಿಯೋ ಕಾಲ್ ಬರಲಿದ್ದು, ಅವರಿಗೆ ಮಾಹಿತಿ ನೀಡಿ ಎಂದು ಕರೆ ಕಡಿತಗೊಳಿಸಿದ್ದಾರೆ. ಆ ಪ್ರಕಾರ ಸಂತೋಷ್ ತಮ್ಮ ಹೆಸರು ಮತ್ತು ಎಫ್‌ಐಆರ್ ನಂಬರ್ ವಾಟ್ಸಪ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಸಂತೋಷ್‌ಗೆ ವಿಡಿಯೋ ಕಾಲ್ ಬರುತ್ತದೆ. ಆ ಕಡೆಯಿಂದ PSI ದರ್ಜೆಯ ಯುನಿಫಾರ್ಮ್ ಧರಿಸಿದ ವ್ಯಕ್ತಿಯೋರ್ವನಿದ್ದು, ಹಿಂದುಗಡೆ ಎಲ್ಲವೂ ಪೊಲೀಸ್ ಠಾಣೆ ಮಾದರಿಯ ಚಿತ್ರಣವಿರುತ್ತದೆ. ಕರೆ ಮಾಡಿದಾತ ನಿಮ್ಮ ಹೆಸರಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆನಿಮ್ಮ ವಿಚಾರಣೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕಿದೆ ಎಂದು ಲೈವ್‌ನಲ್ಲಿಯೇ ಪ್ರದೀಪ್ ಎಂಬ ಹೆಸರಿನವನನ್ನು ಕರೆದು, ಸಂತೋಷ್ ಅವರ ಎಲ್ಲ ಡಿಟೇಲ್ಸ್ ಪಡೆದುಕೊಳ್ಳಿ ಎನ್ನುತ್ತಾನೆ. ಆ ಪ್ರದೀಪ್ ಸಾವಂತ್ ಒನ್‌ಸೈಡ್ ವಿಡಿಯೋ ಕಾಲ್ ಮಾಡಿ ಸಂತೋಷನಿಗೆ ಆಧಾರ್ ಕಾರ್ಡ್ ತೋರಿಸಿ ಎಂದಾಗ, ಸಂತೋಷ ನಿರಾಕರಿಸುತ್ತಾನೆ. ಆಗ ಅವಾಚ್ಯ ಶಬ್ದಗಳಿಂದ ಬೈಯ್ತು ನಿನ್ನ ಮೇಲೆ ಎಫ್‌ಐಆರ್ ಆಗಿದೆ. ಇದರಲ್ಲಿ ನಿನಗೆ 3-5 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂಪಾಯಿಗಳ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಸಂತೋಷ ಮೊಬೈಲ್ ಕರೆ ಕಡಿತಗೊಳಿಸಿದ್ದಾರೆ.
ಅದೃಷ್ಟಕ್ಕೆ ಸಂತೋಷ್ ಕರೆ ಕಟ್ ಮಾಡಿ ವಿಷಯವನ್ನ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಎಚ್ಚೆತ್ತ ಪೊಲೀಸರು ಈ ಸಂಬಂಧ ಸೈಬರ್ ಕ್ರೈಂ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಈ ಕಾಲದ ವಂಚನೆಗಳನ್ನ ಆಲ್ಮೋಸ್ಟ್ ಇದೇ ರೀತಿ ಇರುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿಯು ಇರಬಹುದು. ಹಾಗಾಗಿ ಅಪರಿಚಿತ ನಂಬರ್‌ಗಳ ಕರೆಗಳನ್ನ ಸ್ವೀಕರಿಸುವಾಗ ಮೈಯೆಲ್ಲಾ ಎಚ್ಚರದಿಂದಿರಿ, ಅನಾವಶ್ಯಕವಾಗಿ ನಿಮಗೆ ಅಪರಿಚಿತರು ಕಾಲ್ ಮಾಡಲಾರರು, ಕಂಪನಿ ಕಾಲ್‌ಗಳಲ್ಲಿಯು ಹೆಚ್ಚು ವಿಚಾರಿಸಲಾರರು. ಹಾಗೆ ಮಾಡಿದ್ದಲ್ಲಿ ಅದರ ಅರ್ಥ ಮೂರ್ಖರನ್ನಾಗಿಸುವುದು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ