SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಕಳೆದ ಡಿಸೆಂಬರ್ನಲ್ಲಿ ಕಾಣೆಯಾಗಿರುವ ತಾಯಿ ಹಾಗೂ ಮಗಳ ಹುಡುಕಾಟವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಸಂಬಂದ ಪೊಲೀಸ್ ಪ್ರಕಟಣೆಯನ್ನು ನೀಡಿದ್ದು ಪ್ರಕಟಣೆಯ ಯಥಾವತ್ತು ವಿವರ ಹೀಗಿದೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ ನಗರದ ವಾಸಿ ಮಹಾದೇವ ಭೋವಿ ಎಂಬುವವರ ಪತ್ನಿ 30 ವರ್ಷದ ಹೊನ್ನಮ್ಮ ಎಂಬುವವರು 8 ವರ್ಷದ ತಮ್ಮ ಮಗಳು ದೀಪ್ತಿಯನ್ನು ಕರೆದುಕೊಂಡು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ನೆಗವಾಡಿ ತಾಂಡದಲ್ಲಿರುವ ತನ್ನ ತಾಯಿಮನೆಗೆ ಬಂದಿದ್ದು, ಡಿಸೆಂಬರ್ 2024 ರಂದು ವಾಪಾಸ್ಸು ಗಂಡನ ಮನೆಗೆಂದು ಹೊರಟವರು ಅಲ್ಲಿಗೆ ಹೋಗದೆ ಕಾಣೆಯಾಗಿದ್ದು, ಈವರೆಗೆ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 5.4 ಅಡಿ ಎತ್ತರ, ಬಿಳಿ ಮೈಬಣ್ಣ, ದಪ್ಪ ಮೈಕಟ್ಟು ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣದ ಚೂಡಿದಾರ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು.
ಈ ತಾಯಿ ಮಗಳ ಸುಳಿವು ದೊರೆತಲ್ಲಿ ಜಿಲ್ಲಾ ಪೊಲೀಸ್ ಠಾಣೆ -08182-261413, ಶಿಕಾರಿಪುರ ಪೊಲಿಸ್ ಠಾಣೆ ದೂ.ಸಂ.: 08187-222443, ಸೊರಬ ವೃತ್ತ ಪೊ.ಠಾ 08184-272122/9480803339, ಆನವಟ್ಟಿ ಪೊ.ಠಾ 08184-267135/9480803369 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
————
SUMMARY | Provide information about missing mother and daughter, Uttara Kannada district, Kumta Nagar, Shivamogga district, Soraba taluk, Negavadi
KEY WORDS | information about missing mother and daughter, Uttara Kannada district, Kumta Nagar, Shivamogga district, Soraba taluk, Negavadi