ಆಟೋ ಕಾಂಪ್ಲೆಕ್ಸ್‌ ಚಾನಲ್‌ ಏರಿ ಮೇಲೆ ತೂರಾಡ್ತಿದ್ದವರಿಗೆ ಶಾಕ್ | ದಾಖಲಾಯ್ತು ಸುಮೋಟೋ ಕೇಸ್‌‌, ಮೂವರು ಅರೆಸ್ಟ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌  

ಆಟೋ ಕಾಂಪ್ಲೆಕ್ಸ್‌ ಚಾನಲ್‌ ಏರಿ ಮೇಲೆ ಗಾಂಜಾ ಹೊಡೆದು ಅಡ್ಡಾಡುತ್ತಿದ್ದ ಮೂವರನ್ನ ಶಿವಮೊಗ್ಗ ವಿನೋಬನಗರ ಪೊಲೀಸರು ರೇಡ್‌ ನಡೆಸಿ ಬಂಧಿಸಿದ್ದಾರೆ. ಕಳೆದ 22 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಅಂದು ಸಂಜೆ ಇಲ್ಲಿನ ಎಸ್‌ಐಎ ಸುನೀಲ್‌ ತಮ್ಮ ಸಿಬ್ಬಂದಿ ಮಲ್ಲಪ್ಪ, ಚಂದ್ರಾನಾಯ್ಕ್‌ರ ಜೊತೆ ಕಲ್ಲಳ್ಳಿ, ಹುಡ್ಕೊ ಕಾಲೋನಿ, ಜಯದೇವ ಬಡಾವಣೆ, ನಂದಿನಿ ಬಡಾವಣೆ ಆಟೋ ಕಾಂಪ್ಲೆಕ್ಸ್ ಕಡೆಗಳಲಿ ರೌಂಡ್ಸ್‌ ಮಾಡುತ್ತಿದ್ದರು. 

ಈ ವೇಳೆ ಅವರ ಕಣ್ಣಿಗೆ ಚಾನಲ್‌ ಏರಿ ಮೇಲೆ ಮೂವರು ಅನುಮಾನಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಅವರನ್ನು ಸುತ್ತುವರಿದ ಪೊಲೀಸರಿಗೆ ಮೂವರು ಸಹ ಮತ್ತಿನಲ್ಲಿರುವುದು ಕಾಣಿಸಿದೆ. ಈ ಬಗ್ಗೆ ಸ್ಥಳೀಯರನ್ನ ವಿಚಾರಿಸಿದಾಗ, ಅವರುಗಳು ಗಾಂಜಾ ಹೊಡೆದುಕೊಂಡು ಓಡಾಡುತ್ತಿದ್ದರು ಎಂಬ ವಿಚಾರ ಗೊತ್ತಾಗಿದೆ. ಹಾಗಾಗಿ ಸಾರ್ವಜನಿಕರಿಗೆ ತೊಂದರೆ ಮಾಡುವ ಸಾಧ್ಯತೆ ಇದ್ದ ಕಾರಣಕ್ಕೆ ಮೂವರನ್ನ ವಶಕ್ಕೆ ಪಡೆದು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೆಡಿಕಲ್‌ ಚೆಕಪ್‌ ಮಾಡಿಸಿದ್ದಾರೆ. ಈ ವೇಳೆ ಮಾದಕ ವಸ್ತು ಸೇವನೆಯ ಟೆಸ್ಟ್‌ನಲ್ಲಿ ಮೂವರ ರಿಪೋರ್ಟ್‌ ಪಾಸಿಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ : NARCOTIC DRUGS AND PSYCHOTROPIC SUBSTANCES ACT, 1985 (U/s-27(b)) ಅಡಿಯಲ್ಲಿ ಸುಮುಟೋ ಕೇಸ್‌ ದಾಖಲಿಸಿದ್ದಾರೆ.

SUMMARY |   suo moto case registered in vinobanagara police station 

KEY WORDS |‌  suo moto case , vinobanagara police station 

Share This Article