SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಹೆಂಡತಿ ಜೊತೆಗೆ ಜಗಳವಾಡಿಕೊಂಡ ಪತಿರಾಯನೊಬ್ಬ ಬ್ಲೇಡ್‌ನಿಂದ ಕುತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಈತನ ಅದೃಷ್ಟಕ್ಕೆ , 112 ಪೊಲೀಸರು ವಿಷಯ ತಿಳಿದು, ಈತನನ್ನ ರಕ್ಷಣೆ ಮಾಡಿದ್ದಾರೆ.
ಹಾಸನ ಮೂಲದ ಮನು ಎಂಬಾತ, ಕೌಟುಂಬಿಕ ವಿಚಾರಕ್ಕೆ ಹೆಂಡತಿಯ ಜೊತೆ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಇದಕ್ಕಾಗಿ ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟಿ ಸಮೀಪದ ಏಕಲವ್ಯ ವಸತಿ ಶಾಲೆ ಬಳಿ ನಿಂತಿದ್ದಾನೆ. ಅಲ್ಲದೆ ಆತ್ಮಹತ್ಯೆಗೆ ನಿರ್ಧರಿಸಿ ಕುತ್ತಿಗೆಯನ್ನು ಬ್ಲೇಡ್‌ನಿಂದ ಕೊಯ್ದುಕೊಂಡಿದ್ದಾನೆ. ಆ ಬಳಿಕ ವಿಷಯ ತಿಳಿಸಲು ತನ್ನ ಸ್ನೇಹಿತರಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿದ್ದಾನೆ.
ಈತನ ಸ್ಥಿತಿ ನೋಡಿ ಗಾಬರಿಗೊಂಡ ಸ್ನೇಹಿತರು ಈತನ ಜೊತೆ ಸಂಪರ್ಕದಲ್ಲಿದ್ದಂತೆ 112 ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿದ 112 ಪೊಲೀಸ್ ಸಿಬ್ಬಂದಿ ಮನುವನ್ನ ತಡೆದು, ಆತನನ್ನ ಆಸ್ಪತ್ರೆಗೆ ದಾಖಲಿಸಿ, ಕುತ್ತಿಗೆ ಗಾಯಕ್ಕೆ ಹೊಲಿಗೆ ಹಾಕಿಸಿ ಸ್ಟೇಷನ್‌ಗೆ ಕರೆ ತಂದಿದ್ದಾರೆ. ಬಳಿಕ ಆತನ ಪತ್ನಿಗೆ ಕರೆ ಮಾಡಿ ಸ್ಟೇಷನ್‌ಗೆ ಕರೆಸಿಕೊಂಡು, ಇಬ್ಬರಿಗೂ ಕೂರಿಸಿ ಕೌನ್ಸಿಲಿಂಗ್ ಮಾಡಿ ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.

SUMMARY | Chikkamagaluru A man from Hassan, who attempted suicide at Kottigehara Charmadi Ghat, has been rescued by the police
KEY WORDS | Chikkamagaluru, Hassan, Kottigehara ,Charmadi Ghat, rescued by the police