ಸಿಗಂದೂರು ಸೇತುವೆ ಕಂಪ್ಲೀಟ್‌ | ವೈರಲ್‌ ಆಯ್ತು ಟ್ರಾವೆಲ್‌ ಫಿಲ್ಮ್‌ಮೇಕರ್‌ರ DRONE ವಿಡಿಯೋ!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರುನಲ್ಲಿ ನಡೆಯುತ್ತಿರುವ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ಲಾಸ್ಟ್‌ ಹಂತದಲ್ಲಿದೆ. ಈ ನಡುವೆ ಪೂರ್ತಿಯಾಗಿರುವ ಸೇತುವೆಯ ದೃಶ್ಯ ರಮ್ಯ ರಮಣೀಯವಾಗಿ ಕಾಣುತ್ತಿದೆ.  ಡಿಜಿಸಿಎ ಡ್ರೋನ್‌ ಪೈಲೆಟ್‌ ಲೆಸೆನ್ಸ್‌  ಹೊಂದಿರುವ ‍ಶ್ರೀಹರಿ ಕಾರಂತ್‌ sriharikaranth ,  

ಸಿಗಂದೂರು ಸೇತುವೆಯ ಡ್ರೋಣ್‌ ದೃಶ್ಯವನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಸೇತುವೆಯು ಬಹಳಷ್ಟು ಸುಂದರವಾಗಿ ಕಾಣುತ್ತಿದೆ. ಸೇತುವೆಯ ಕಾಮಗಾರಿ ಬಹುತೇಕ ಅಂತಿಮಗೊಂಡಿದ್ದು, ಇನ್ನೇನು ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಇದಕ್ಕಾಗಿ ದೊಡ್ಡ ಮಟ್ಟದ ಸಿದ್ದತೆಯು ಆರಂಭಗೊಳ್ಳಲಿದ್ದು ಮಲೆನಾಡಿನ ಪ್ರತಿಷ್ಟಿತ ಹಾಗೂ ಹೆಮ್ಮೆಯ ಸೇತುವೆಯಾಗಿ ಈ ಬ್ರಿಡ್ಜ್‌ ರೂಪುಗೊಳ್ಳಲಿದೆ. 

Share This Article