SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 20, 2024
ಶಿವಮೊಗ್ಗ | ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ಶಿವಮೊಗ್ಗ ಮತ್ತು ಭದ್ರಾವತಿ ರೈಲು ನಿಲ್ದಾಣಗಳ ಮಧ್ಯೆ ಬರುವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಈತನ ಹೆಸರು, ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ ಮೃತ ದೇಹದ ವಾರಸುದಾರರು ಯಾರಾದರೂ ಇದ್ದರೆ ಸಂಪರ್ಕಿಸಿ ಎಂದು ರೈಲ್ವೆ ಪೊಲೀಸ್ ಪ್ರಕಟಣೆ ಹೊರಡಿಸಿದೆ.
ಮೃತ ವ್ಯಕ್ತಿಯ ಚಹರೆ ಸುಮಾರು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ತಲೆಯ ಅರ್ಧ ಭಾಗ ಮಾತ್ರ ಉಳಿದಿದೆ. ಮೈಮೇಲೆ ಕಪ್ಪು ಗೆರೆಗಳುಳ್ಳ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈ ಮೃತ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಶೀವಮೊಗ್ಗ ರೈಲ್ವೆ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-222974/ 9480802124 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ.
SUMMARY | The body of an unidentified man, aged around 40 years, was found on the railway tracks coming between Shivamogga and Bhadravathi railway stations.
KEYWORDS | railway tracks, Shivamogga, death,